
ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ರಿಷಬ್ ಶೆಟ್ಟಿ ಅವರ ಹೆಸರು ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿತ್ತು. ಆದರೆ ‘ಕಾಂತಾರ’ ಸಿನಿಮಾದಿಂದ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಅವರ ಡಿಮ್ಯಾಂಡ್ ಹೆಚ್ಚಾಯಿತು. ಅವರ ಜೊತೆ ಸಿನಿಮಾ ಮಾಡಲು ಪರಭಾಷೆಯ ನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಸಂಭಾವನೆ (Rishab Shetty Remuneration) ಬಗ್ಗೆ ಈಗೊಂದು ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ.
‘ಜೈ ಹನುಮಾನ್’, ‘ಛತ್ರಪತಿ ಶಿವಾಜಿ ಮಹಾರಾಜ್’ ಮುಂತಾದ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಅವರು ನಟಿಸುತ್ತಿದ್ದಾರೆ. ಇವೆಲ್ಲವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿವೆ. ಈಗ ರಿಷಬ್ ಶೆಟ್ಟಿ ಅವರ ಮಾರುಕಟ್ಟೆ ಹಿರಿದಾಗಿದೆ. ಅದಕ್ಕೆ ತಕ್ಕಂತೆ ಅವರು ಸಂಭಾವನೆ ಕೇಳುತ್ತಿದ್ದಾರೆ. ವರದಿಗಳ ಪ್ರಕಾರ, ರಿಷಬ್ ಶೆಟ್ಟಿ ಬರೋಬ್ಬರಿ 80 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ.
ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಅವರ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ನಿರ್ದೇಶಕನಾಗಿ ‘ಕಿರಿಕ್ ಪಾರ್ಟಿ’, ‘ಕಾಂತಾರ’, ‘ಕಾಂತಾರ: ಚಾಪ್ಟರ್ 1’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಮುಂತಾದ ಸಿನಿಮಾಗಳಲ್ಲಿ ಅವರು ಯಶಸ್ಸು ಕಂಡಿದ್ದಾರೆ. ನಟನಾಗಿಯೂ ಅವರು ಜನರ ಮನ ಗೆದ್ದಿದ್ದಾರೆ. ಅದಕ್ಕೆ ತಕ್ಕಂತೆ ಅವರ ಸಂಭಾವನೆ ಏರಿಕೆ ಆಗುತ್ತಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ ‘ಕಾಂತಾರ: ಚಾಪ್ಟರ್ 2’ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಅವರನ್ನು ನಂಬಿಕೊಂಡು ಹಣ ಹೂಡುವ ನಿರ್ಮಾಪಕರಿಗೆ ನಷ್ಟ ಆಗುವುದಿಲ್ಲ ಎಂಬುದು ಚಿತ್ರರಂಗದಲ್ಲಿ ಖಚಿತ ಆಗಿದೆ. ಆದ್ದರಿಂದ ರಿಷಬ್ ಶೆಟ್ಟಿ ಅವರು ಪ್ರತಿ ಸಿನಿಮಾಗೆ 80 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ನಿಂತು ಹೋಗಿದ್ದ ಬಿಗ್ ಬಜೆಟ್ ಚಿತ್ರ ಕೈಗೆತ್ತಿಕೊಂಡ ರಿಷಬ್? ನಟನೆಯ ಜೊತೆಗೆ ನಿರ್ದೇಶನ
ಸದ್ಯಕ್ಕೆ ಈ ಮಾಹಿತಿ ಕೇವಲ ಅಂತೆ-ಕಂತೆಯ ಹಂತದಲ್ಲಿ ಇದೆ. ಯಾವುದೇ ಚಿತ್ರತಂಡದವರು ಖಚಿತಪಡಿಸಿಲ್ಲ. ರಿಷಬ್ ಶೆಟ್ಟಿ ಅವರು ಸಾರ್ವಜನಿಕವಾಗಿ ತಮ್ಮ ಸಂಭಾವನೆ ಬಗ್ಗೆ ಮಾತನಾಡಿಲ್ಲ. ಪರಭಾಷೆಯ ಕೆಲವು ಮಾಧ್ಯಮಗಳು ಈ ಕುರಿತು ಸುದ್ದಿ ಪ್ರಕಟ ಮಾಡಿವೆ. ರಿಷಬ್ ಶೆಟ್ಟಿ ಅವರ ಸಂಭಾವನೆ 80 ಕೋಟಿ ರೂಪಾಯಿಗೆ ಏರಿಕೆ ಆಗಿದೆ ಎಂದು ವರದಿ ಮಾಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.