ಅಂದು ಅನಂತ್ ನಾಗ್ ಬಗ್ಗೆ ರಿಷಬ್ ಇಟ್ಟ ಕೋರಿಕೆ ಕೊನೆಗೂ ಈಡೇರಿತು

ಹಿರಿಯ ನಟ ಅನಂತ್ ನಾಗ್ ಅವರಿಗೆ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರ ಹಳೆಯ ವೀಡಿಯೊ ವೈರಲ್ ಆಗಿದೆ. ಅನಂತ್ ನಾಗ್ ಅವರಿಗೆ ರಾಷ್ಟ್ರೀಯ ಗೌರವ ಸಿಗಬೇಕೆಂದು ಅಂದು ರಿಷಬ್ ಆಡಿದ್ದ ಮಾತುಗಳು ಈಗ ನಿಜವಾಗಿರುವುದಕ್ಕೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದು ಅನಂತ್ ನಾಗ್ ಬಗ್ಗೆ ರಿಷಬ್ ಇಟ್ಟ ಕೋರಿಕೆ ಕೊನೆಗೂ ಈಡೇರಿತು
ರಿಷಬ್-ಅನಂತ್ ನಾಗ್

Updated on: Sep 17, 2026 | 12:01 PM

ಮುಖ್ಯಾಂಶಗಳು

  • ರಿಷಬ್ ಶೆಟ್ಟಿ ನುಡಿದ ಮಾತು ನಿಜವಾಯ್ತು
  • ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಗರಿ
  • ಸ್ಯಾಂಡಲ್‌ವುಡ್ ದಿಗ್ಗಜನಿಗೆ ರಾಷ್ಟ್ರೀಯ ಗೌರವ  

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ದೇಶದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ ‘ದಾದಾಸಾಹೇಬ್ ಫಾಲ್ಕೆ’ ಗೌರವ ಲಭಿಸದೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಹಿಂದೆ ಮಾತನಾಡಿದ್ದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅವರ ಹಾಗೂ ಇಡೀ ಕರ್ನಾಟಕ ಜನತೆಯ ಆಶಯ ಈಡೇರಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಿಷಬ್ ಶೆಟ್ಟಿ, ‘ಅನಂತ್ ನಾಗ್ ಅವರ 50 ವರ್ಷಗಳ ಚಿತ್ರ

ರಂಗದ ಸುದೀರ್ಘ ಸೇವೆ ಮತ್ತು ಸಾಧನೆಗೆ ತಕ್ಕಂತೆ ಸೂಕ್ತ ಗೌರವ-ಪುರಸ್ಕಾರಗಳು ಸಿಕ್ಕಿಲ್ಲ. ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಹಾಗೂ ಪದ್ಮವಿಭೂಷಣದಂತಹ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳು ದೊರೆಯಬೇಕು ಮತ್ತು ಇದಕ್ಕೆ ಎಲ್ಲರೂ ಧ್ವನಿಯಾಗಬೇಕು’ ಎಂದು ಮನವಿ ಮಾಡಿದ್ದರು.

ಇದೀಗ ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದರಿಂದ ರಿಷಬ್ ಶೆಟ್ಟಿ ಅಂದು ಆಡಿದ ಮಾತುಗಳು ನಿಜವಾಗಿವೆ ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ಸಂತಸ ವ್ಯಕ್ತಪಡಿಸುತ್ತಿದ್ದು, ಈ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ.

ಅನಂತ್ ನಾಗ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪದ್ಮಭೂಷಣ ಸಿಗಬೇಕು ಎಂಬ ಒತ್ತಾಯ ಕನ್ನಡಿಗರದ್ದಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಂದೋಲನಗಳು ನಡೆದವು. 2025ರಲ್ಲಿ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಗೌರವ ಸಂದಿತು. 2024ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಅನಂತ್ ನಾಗ್ ಅವರಿಗೆ ಸಂದಿದೆ.

ಇದನ್ನೂ ಓದಿ:

ಸಿನಿಮಾ ವಿಷಯಕ್ಕೆ ಬರೋದಾದರೆ ಅನಂತ್ ನಾಗ್ ಅವರು ವಯಸ್ಸಿನ ಕಾರಣಕ್ಕೆ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಬಳಿಕ ‘ಜೈ ಹನುಮಾನ್’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.  ಇದು ತೆಲುಗು ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:59 am, Thu, 17 September 26

Loading...
Unable to load recommendations.
Follow Us