ವಿಶ್ವ ದಾಖಲೆ ಬರೆದ ಯಶ್ ಬರ್ತ್​ಡೇ ಕೇಕ್​: ಅಭಿಮಾನಿಗಳಿಗೆ ಭರ್ಜರಿ ಬಾಡೂಟ

ವಿಶ್ವ ದಾಖಲೆ ಬರೆದ ಯಶ್ ಬರ್ತ್​ಡೇ ಕೇಕ್​: ಅಭಿಮಾನಿಗಳಿಗೆ ಭರ್ಜರಿ ಬಾಡೂಟ

ಬೆಂಗಳೂರು: ಸ್ಯಾಂಡಲ್​ವುಡ್ ನಟ ರಾಕಿಂಗ್​ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಯಶ್ 34ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂತೋಷ ಸಡಗರದಿಂದ ಆಚರಿಸಿದ್ದಾರೆ. ಕೆಲವೇ ವರ್ಷಗಳ ಸಿನಿ ಪಯಣದಲ್ಲಿ ಪ್ರಪಂಚಕ್ಕೆ ಗುರುತಿಸಿಕೊಳ್ಳುವಂತಹ ಹೆಸರನ್ನು ಯಶ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಯಶ್ ಹೆಚ್ಚಿಸಿದ್ದಾರೆ. ಯಶ್ ಬರ್ತ್​ಡೇಗೆ 5000 ಕೆ.ಜಿ ಕೇಕ್: ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್​ಡೇ ಸೆಲೆಬ್ರೆಷನ್​ನಲ್ಲಿ ದಾಖಲೆ ಬರೆದಿದ್ದಾರೆ. 5000 ಕೆ.ಜಿ ಕೇಕ್ ಸಿದ್ಧಪಡಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪ್ರಪಂಚದ ಅತಿ ದೊಡ್ಡ ಸೆಲೆಬ್ರೆಟಿ ಬರ್ತ್​ಡೇ […]

sadhu srinath

|

Jan 09, 2020 | 12:00 PM

ಬೆಂಗಳೂರು: ಸ್ಯಾಂಡಲ್​ವುಡ್ ನಟ ರಾಕಿಂಗ್​ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಯಶ್ 34ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂತೋಷ ಸಡಗರದಿಂದ ಆಚರಿಸಿದ್ದಾರೆ. ಕೆಲವೇ ವರ್ಷಗಳ ಸಿನಿ ಪಯಣದಲ್ಲಿ ಪ್ರಪಂಚಕ್ಕೆ ಗುರುತಿಸಿಕೊಳ್ಳುವಂತಹ ಹೆಸರನ್ನು ಯಶ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಯಶ್ ಹೆಚ್ಚಿಸಿದ್ದಾರೆ.

ಯಶ್ ಬರ್ತ್​ಡೇಗೆ 5000 ಕೆ.ಜಿ ಕೇಕ್: ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬರ್ತ್​ಡೇ ಸೆಲೆಬ್ರೆಷನ್​ನಲ್ಲಿ ದಾಖಲೆ ಬರೆದಿದ್ದಾರೆ. 5000 ಕೆ.ಜಿ ಕೇಕ್ ಸಿದ್ಧಪಡಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪ್ರಪಂಚದ ಅತಿ ದೊಡ್ಡ ಸೆಲೆಬ್ರೆಟಿ ಬರ್ತ್​ಡೇ ಕೇಕ್ ಇದಾಗಿದೆ. ವರ್ಲ್ಡ್​ ರೆಕಾರ್ಡ್ಸ್​ ಇಂಡಿಯಾದಿಂದ ಕೇಕ್​ಗೆ ಸರ್ಟಿಫಿಕೇಟ್ ಸಿಕ್ಕಿದೆ. ಅಲ್ಲದೆ 216 ಅಡಿ ಉದ್ದದ ಕಟೌಟ್​ ನಿರ್ಮಿಸಲಾಗಿತ್ತು. 20 ಸಾವಿರ ಅಭಿಮಾನಿಗಳ ಸಮ್ಮಖದಲ್ಲಿ ಈ ಬಾರಿ ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ: ಯಶ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಬೆಳಗ್ಗೆ 3 ಸಾವಿರ ಅಭಿಮಾನಿಗಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಆರು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಾಟಿ ಕೋಳಿ ಸಾರು, ಮಟನ್ ಬಿರಿಯಾನಿ, ಮುದ್ದೆ, ರೈಸ್, ಚಿಕನ್ ಪೆಪ್ಪರ್ ಡ್ರೈ, ರಸಂ, ಸಲಾಡ್, ವೆಜ್​ ಬಿರಿಯಾನಿ, ಜಿಲೇಬಿ, ಪಕೋಡ ಸೇರಿ ವಿವಿಧ ಖಾದ್ಯಗಳ ರಸದೌತಣವನ್ನು ಯಶ್ ಏರ್ಪಡಿಸಿದ್ದಾರೆ.

Follow us on

Most Read Stories

Click on your DTH Provider to Add TV9 Kannada