
‘ಪ್ರೇಮದ ಊರಲಿ’ ಚಿತ್ರದ ಗೆಲುವಿನ ಬಗ್ಗೆ ನಿರ್ದೇಶಕ ಮನೋಜ್ ಕುಮಾರ್ ಖುಷಿ ಹೊರಹಾಕಿದ್ದಾರೆ. ಅವರು ಸಾಲು ಸಾಲು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಖ್ಯಾತ ನಟಿ ರುಕ್ಮಿಣಿ ವಸಂತ್ ಹಾಗೂ ಚಿತ್ರದ ಪಾತ್ರಕ್ಕೂ ಏನಾದರೂ ಸಂಬಂಧ ಇದೆಯೇ ಎಂದು ಕೇಳಲಾಯಿತು. ಈ ವೇಳೆ ಅವರು ಸ್ವಾರಸ್ಯಕರ ವಿಷಯವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವೇ ಪ್ರಸ್ತುತ ನಟಿ ರುಕ್ಮಿಣಿ ವಸಂತ್ ಅವರ ನಟನೆಗೆ ಅಭಿಮಾನಿಯಾಗಿದೆ. ತಾವು ಕೂಡ ರುಕ್ಮಿಣಿ ವಸಂತ್ ಅವರ ದೊಡ್ಡ ಅಭಿಮಾನಿಯಾಗಿದ್ದು, ತಮ್ಮ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಅವರನ್ನು ಅಭಿನಯಿಸುವಂತೆ ಮಾಡಬೇಕು ಎನ್ನುವ ಆಸೆ ಇತ್ತು ಎಂದು ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ರುಕ್ಮಿಣಿ ವಸಂತ್ ಅವರನ್ನು ಸಂಪರ್ಕಿಸಲು ಚಿತ್ರತಂಡ ಪ್ರಯತ್ನಿಸಿತ್ತು. ಆದರೆ, ನಟಿಯ ಕಾಲ್‌ಶೀಟ್ ಹಾಗೂ ಡೇಟ್ಸ್‌ಗಳ ಕೊರತೆ ಜೊತೆಗೆ ಸಿನಿಮಾ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದರಿಂದ, ನಟಿಯನ್ನು ತಲುಪಲು ಮತ್ತು ಚಿತ್ರಕ್ಕೆ ಕರೆತರುವ ಪ್ಲಾನ್ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ರುಕ್ಮಿಣಿ ವಸಂತ್ ಅವರನ್ನು ಸಿನಿಮಾಗೆ ನಾಯಕಿಯಾಗಿ ತರಲು ಸಾಧ್ಯವಾಗದಿದ್ದರೂ, ‘ರುಕ್ಮಿಣಿ ವಸಂತ’ ಎನ್ನುವ ಹೆಸರು ಅವರಿಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ, ಸಿನಿಮಾದ ಇಬ್ಬರು ನಾಯಕಿಯರ ಪಾತ್ರಗಳಿಗೆ ‘ರುಕ್ಮಿಣಿ’ ಮತ್ತು ‘ವಸಂತ’ ಎಂದು ಪ್ರತ್ಯೇಕವಾಗಿ ಹೆಸರಿಡಲು ನಿರ್ಧರಿಸಿದರು.
ಇದನ್ನೂ ಓದಿ: ಮಾಲಾಶ್ರೀ-ರುಕ್ಮಿಣಿ ವಸಂತ್ ಕಾಂಬಿನೇಷನ್ನಲ್ಲಿ ಬರ್ತಿದೆ ಮಂಗಳಗೌರಿ ಸಿನಿಮಾ
ಈ ಹೆಸರುಗಳ ಪೈಕಿ ‘ವಸಂತ’ ಎನ್ನುವ ಪಾತ್ರವು ರೂಪಕವಾಗಿ ನಿಸರ್ಗ ಅಥವಾ ಪ್ರಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಿರ್ದೇಶಕ ಮನೋಜ್ ಕುಮಾರ್ ವಿವರಿಸಿದ್ದಾರೆ. ವಿಶೇಷ ಎಂದರೆ ಈ ಮೊದಲು ಸಿನಿಮಾಗೆ ‘ರುಕ್ಮಿಣಿ ವಸಂತ’ ಅಂತಲೇ ಟೈಟಲ್ ಇಡಲಾಗಿತ್ತು. ಕೊನೆಗೆ ಈ ಟೈಟಲ್ನ ‘ಪ್ರೇಮದ ಊರಲಿ’ ಎಂದು ಬದಲಾಯಿಸಲಾಗಿತ್ತು. ಈ ಸಿನಿಮಾ 10 ದಿನಕ್ಕೆ 16 ಕೋಟಿ ರೂಪಾಯಿ ಗಳಿಕೆ ಮಾಡಿ ಗೆದ್ದು ಬೀಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.