ಕ್ಷಣಕ್ಷಣಕೂ ಕ್ಷೀಣಿಸುತಿದೆ ಗಾನ ಗಂಧರ್ವನ ಆರೋಗ್ಯ.. ಹೃದಯಬಡಿತ ಕ್ಷೀಣ

|

Updated on: Aug 21, 2020 | 6:15 PM

ಚೆನ್ನೈ:ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನಗಾರುಡಿಗ SPB ಅವರ ಆರೋಗ್ಯ ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದೆ. ಕೊರೊನಾ ಸೋಂಕು ಧೃಡಪಟ್ಟ ನಂತರ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೋವಿಡ್ ಸೋಂಕಿನಿಂದಾಗಿ ಎಸ್ಪಿಬಿ ಅವರ ಶ್ವಾಸಕೋಶದಲ್ಲಿ ರಕ್ತಸ್ರಾವ ಜಾಸ್ತಿಯಾಗಿದೆ. ಇದರಿಂದಾಗಿ ಆಸ್ಪತ್ರೆಯ ವೈದ್ಯರು ಅಂತಾರಾಷ್ಟ್ರೀಯ ವೈದ್ಯರ ಸಲಹೆಯಂತೆ ಎಸ್ಪಿಬಿ ಅವರ ದೇಹಕ್ಕೆ ಬಿಳಿ ರಕ್ತಕಣಗಳನ್ನು ಇಂಜೆಕ್ಟ್ ಮಾಡುತ್ತಿದ್ದಾರೆ. ದೇಹದಲ್ಲಿ ಬಿಳಿ ರಕ್ತಕಣಗಳು ಇದ್ದರೆ ಮಾತ್ರ ಆರೋಗ್ಯ […]

ಕ್ಷಣಕ್ಷಣಕೂ ಕ್ಷೀಣಿಸುತಿದೆ ಗಾನ ಗಂಧರ್ವನ ಆರೋಗ್ಯ.. ಹೃದಯಬಡಿತ ಕ್ಷೀಣ
Follow us on

ಚೆನ್ನೈ:ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನಗಾರುಡಿಗ SPB ಅವರ ಆರೋಗ್ಯ ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದೆ.

ಕೊರೊನಾ ಸೋಂಕು ಧೃಡಪಟ್ಟ ನಂತರ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕೋವಿಡ್ ಸೋಂಕಿನಿಂದಾಗಿ ಎಸ್ಪಿಬಿ ಅವರ ಶ್ವಾಸಕೋಶದಲ್ಲಿ ರಕ್ತಸ್ರಾವ ಜಾಸ್ತಿಯಾಗಿದೆ. ಇದರಿಂದಾಗಿ ಆಸ್ಪತ್ರೆಯ ವೈದ್ಯರು ಅಂತಾರಾಷ್ಟ್ರೀಯ ವೈದ್ಯರ ಸಲಹೆಯಂತೆ ಎಸ್ಪಿಬಿ ಅವರ ದೇಹಕ್ಕೆ ಬಿಳಿ ರಕ್ತಕಣಗಳನ್ನು ಇಂಜೆಕ್ಟ್ ಮಾಡುತ್ತಿದ್ದಾರೆ.

ದೇಹದಲ್ಲಿ ಬಿಳಿ ರಕ್ತಕಣಗಳು ಇದ್ದರೆ ಮಾತ್ರ ಆರೋಗ್ಯ ಸುಧಾರಣೆಯಾಗಲಿದೆ ಎನ್ನಲಾಗಿದೆ. ಹೀಗಾಗಿ ಎಸ್ಪಿಬಿ ಅವರ ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಹೆಚ್ಚಾಗಿದ್ದರಿಂದ, ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲು ಸಾಧ್ಯವಾಗುತ್ತಿಲ್ಲವೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈಗಾಗಲೇ ಶ್ವಾಸಕೋಶದಲ್ಲಿ ರಕ್ತಸ್ರಾವವಾಗುತ್ತಿರುವುದರಿಂದ ಬಳಲಿರುವ ಎಸ್ಪಿಬಿ ಅವರಿಗೆ, ಈಗ ಹೃದಯ ಸಮಸ್ಯೆ ಕೂಡ ಪ್ರಾರಂಭವಾಗಿದೆ. ಎಸ್ಪಿಬಿಯವರ ಹೃದಯಬಡಿತ ಕ್ಷಣದಿಂದ ಕ್ಷಣಕ್ಕೆ ಕಡಿಮೆಯಾಗುತ್ತಿರುವುದರಿಂದ, ಆಸ್ಪತ್ರೆಯ ವೈದ್ಯರು ಹಾಗೂ ಅಂತರಾಷ್ಟ್ರೀಯ ವೈದ್ಯರು ಎಮರ್ಜೆನ್ಸಿ ಟ್ರೀಟ್ಮೆಂಟ್ ಶುರುಮಾಡಿದ್ದಾರೆ.

Published On - 5:21 pm, Fri, 21 August 20