Sanchari Vijay: ಸಂಚಾರಿ ವಿಜಯ್​ ಎಂಬ ಪ್ರತಿಭಾವಂತ ಕಲಾವಿದನಿಗೆ, ಅದಕ್ಕೂ ಮಿಗಿಲಾದ ಮಾನವೀಯ ವ್ಯಕ್ತಿಗೆ ಭಾವಪೂರ್ಣ ವಿದಾಯ

Edited By:

Updated on: Jun 14, 2021 | 1:25 PM

Sanchari Vijay Photos: 1983 ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್​ ಜನಿಸಿದರು. ವಿಜಯ್​ ಕುಮಾರ್​ ಬಿ. ಎಂಬುದು ಅವರ ಮೂಲ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದರು. ಇವರು ‘ಸಂಚಾರಿ’ ಹೆಸರಿನ ಥಿಯೇಟರ್​ ಗ್ರೂಪ್​ನಿಂದ ಬಂದ ಕಾರಣ ಸ್ಯಾಂಡಲ್​ವುಡ್​ನಲ್ಲಿ ಸಂಚಾರಿ ವಿಜಯ್​ ಎಂದೆ ಖ್ಯಾತಿ ಪಡೆದುಕೊಂಡರು.

1 / 9
ಸಂಚಾರಿ ವಿಜಯ್

ಸಂಚಾರಿ ವಿಜಯ್

2 / 9

ಅದ್ಭುತ ನಟನೆ ಮೂಲಕ ಎಲ್ಲರ ಗಮನ ಸೆಳೆದ ವಿಜಯ್ ಕೇವಲ 37ನೇ ವಯಸ್ಸಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಟನೆ ಹಾಗೂ ಸಮಾಜಮುಖಿ ಕೆಲಸ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದ ಅವರ ಅಕಾಲಿಕ ವಿದಾಯ ಎಲ್ಲರಲ್ಲೂ ಶೋಕ ಮಡುಗಟ್ಟುವಂತೆ ಮಾಡಿದೆ.

3 / 9

ಚಿತ್ರರಂಗದಲ್ಲಿ ಅದೃಷ್ಟಪರೀಕ್ಷೆಗೆ ಸಾಕಷ್ಟು ಜನರು ಮುಂದಾಗುತ್ತಾರೆ. ಆದರೆ, ಎಲ್ಲರಿಗೂ ಯಶಸ್ಸು ಸಿಗೋದಿಲ್ಲ. ಆದರೆ, ಸಂಚಾರಿ ವಿಜಯ್​ಗೆ ನಟನಾ ಕಲೆ ಅದ್ಭುತವಾಗಿ ಒಲಿದಿತ್ತು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸುಲಲಿತವಾಗಿ ನಿಭಾಯಿಸುತ್ತಿದ್ದರು. ತಾವು ಸೆಲೆಬ್ರಿಟಿ ಎನ್ನುವ ಯಾವುದೇ ಅಹಂ ಅವರಲ್ಲಿ ಎಂದಿಗೂ ಇರಲಿಲ್ಲ.

4 / 9

ಕೊವಿಡ್​ ಸಂದರ್ಭದಲ್ಲಿ ಸಂಚಾರಿ ವಿಜಯ್​ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಈ ಹಿಂದೆ ಕೂಡಾ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಇದೇ ಕಾರಣಕ್ಕಾಗಿ ಬಣ್ಣದ ಲೋಕದಾಚೆಗೂ ಅಭಿಮಾನಿಗಳನ್ನು ಹೊಂದಿದ್ದರು.

5 / 9

1983 ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ವಿಜಯ್​ ಜನಿಸಿದರು. ವಿಜಯ್​ ಕುಮಾರ್​ ಬಿ. ಎಂಬುದು ಅವರ ಮೂಲ ಹೆಸರು. ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಯಲ್ಲಿ ಪಳಗಿದರು. ಇವರು ‘ಸಂಚಾರಿ’ ಹೆಸರಿನ ಥಿಯೇಟರ್​ ಗ್ರೂಪ್​ನಿಂದ ಬಂದ ಕಾರಣ ಸ್ಯಾಂಡಲ್​ವುಡ್​ನಲ್ಲಿ ಸಂಚಾರಿ ವಿಜಯ್​ ಎಂದೆ ಖ್ಯಾತಿ ಪಡೆದುಕೊಂಡರು.

6 / 9

2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್ಬಿಟ್ಟಾ’ ಸಿನಿಮಾ ಸಂಚಾರಿ ವಿಜಯ್​ ಅವರ ಮೊದಲ ಸಿನಿಮಾ. ರಮೇಶ್​ ಅರವಿಂದ್ ಅಭಿನಯಿಸಿದ ಈ ಚಿತ್ರದಲ್ಲಿ ನೀನಾಸಂ ಸತೀಶ್​, ಮೊದಲಾದವರು ನಟಿಸಿದ್ದರು. ಈ ಚಿತ್ರದಲ್ಲಿ ಸಂಚಾರಿ ವಿಜಯ್​ ಕೂಡ ಕಾಣಿಸಿಕೊಂಡಿದ್ದರು.

7 / 9

ಸಂಚಾರಿ ವಿಜಯ್​

8 / 9

2015ರಲ್ಲಿ ತೆರೆಗೆ ಬಂದ ಅವರ ನಟನೆಯ ‘ನಾನು ಅವನಲ್ಲ ಅವಳು’ ಸಿನಿಮಾ ಸಂಚಾರಿ ವಿಜಯ್​ ಅವರ ವೃತ್ತಿ ಜೀವನವನ್ನೇ ಬದಲಾಯಿಸಿತು. ಈ ಚಿತ್ರದಲ್ಲಿ ಅವರ ಅದ್ಭುತ ನಟನೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಿಕ್ಕವು. ಈ ಚಿತ್ರ ತೆರೆಕಂಡ ನಂತರ ಅವರಿಗೆ ಅವಕಾಶಗಳು ತೀವ್ರವಾಗಿ ಹೆಚ್ಚಿದವು. 2017 ಮತ್ತು 2018ರಲ್ಲಿ ಅವರ ನಟನೆಯ 8-9 ಚಿತ್ರಗಳು ತೆರೆಗೆ ಬಂದವು. ಆ್ಯಕ್ಟ್​ 1978 ಅವರ ಕೊನೆಯ ಚಿತ್ರ.

9 / 9

ಸಂಚಾರಿ ವಿಜಯ್​ ‘ಮೇಲೊಬ್ಬ ಮಾಯಾವಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾ ಹೆಸರಿನಂತೆ ಸಂಚಾರಿ ವಿಜಯ್​ ಕೂಡ ಮೇಲಿರುವ ಮಾಯಾವಿಯ ಆಟದ ಕೈಗೊಂಬೆಯಾಗಿ ಮೃತಪಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ.

Loading...
Unable to load recommendations.
Follow Us