ಅಭಿಮಾನಿಗಳು ರೀಲ್ ರಮ್ಯಾನ್ನ ನೋಡಿದ್ದೀರಿ.. ಆದ್ರೆ ರಿಯಲ್ ರಮ್ಯಾ ಹೇಗಿದ್ದಾರೆ ಗೊತ್ತಾ!?

Keeping it real ಕ್ಯಾಪ್ಶನ್ ಕೊಟ್ಟು ಫೊಟೊ ಒಂದನ್ನು ಹಂಚಿಕೊಂಡಿರುವ ರಮ್ಯಾ, ಮೇಕಪ್ ಇಲ್ಲದೆ ಮಿಂಚಿದ್ದಾರೆ. ಇದನ್ನು ನೋಡಿ ಸ್ಯಾಂಡಲ್​ವುಡ್​ಗೆ ಮರಳುವಂತೆ ಅಭಿಮಾನಿಗಳು ಕೇಳಿಕೊಂಡಿದ್ದಾರೆ.

ಅಭಿಮಾನಿಗಳು ರೀಲ್ ರಮ್ಯಾನ್ನ ನೋಡಿದ್ದೀರಿ.. ಆದ್ರೆ ರಿಯಲ್ ರಮ್ಯಾ ಹೇಗಿದ್ದಾರೆ ಗೊತ್ತಾ!?
ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣ ದಿಂದ ಒಂದಷ್ಟು ಕಾಲ ವಿಮುಖರಾಗಿದ್ದರು. ಆದ್ರೆ ಇತ್ತೀಚೆಗೆ ಆಗಾಗ ಇಣುಕಿ ನೋಡುವಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಜಾ ಆಗಿ ಹೀಗೆ ಕಾಣಿಸಿಕೊಂಡಿದ್ದಾರೆ, ನೋಡಿ..
Edited By:

Updated on: Apr 07, 2022 | 5:32 PM

ರೀಲ್​ ಲೈಫ್​ನಲ್ಲಿ ಸುಂದರವಾಗಿ ಕಾಣೋ ತಾರೆಯರು ರಿಯಲ್ಲಾಗಿ ಹೇಗಿರ್ತಾರೆ? ಅಯ್ಯೋ.. ಹೀರೋಯಿನ್​ಗಳೆಲ್ಲಾ ಇಂಚುದ್ದ ಮೇಕಪ್ ಹಾಕೊಂಡು ಇರ್ತಾರೆ, ಮೇಕಪ್​ನಿಂದಾನೇ ಅವರು ಮೆರೆಯೋದು.. ಹೀಗೆಲ್ಲಾ ನೀವು ಗುಸುಗುಸು ಮಾತಾಡಿರಬಹುದು. ಆದ್ರೆ, ರೀಲಲ್ಲಿ ಅಷ್ಟೇ ಅಲ್ಲ, ರಿಯಲ್ಲಾಗಿ ಚೆನ್ನಾಗಿರಿ ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ ‘ಸ್ಯಾಂಡಲ್​ವುಡ್  ಪದ್ಮಾವತಿ’  ರಮ್ಯಾ.

Keeping it real ಎಂಬ ಕ್ಯಾಪ್ಶನ್ ಕೊಟ್ಟು ತಮ್ಮ ಫೊಟೊ ಒಂದನ್ನು ಹಂಚಿಕೊಂಡಿರುವ ರಮ್ಯಾ, ಮೇಕಪ್ ಇಲ್ಲದೆ ಮಿಂಚಿದ್ದಾರೆ. ಅವರ ಫೊಟೊ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಮತ್ತೆ ಯಾವಾಗ ನಟಿಸ್ತೀರಿ? ನಿಮ್ಮ ನಟನೆ ನೋಡೋಕೆ ಕಾಯ್ತಾ ಇದ್ದೇವೆ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಹಲವಷ್ಟು ಜನರು ರಮ್ಯಾರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ದುಃಖ ತೋಡಿಕೊಂಡಿದ್ದು, ಸ್ಯಾಂಡಲ್​ವುಡ್​ಗೆ ನೀವು ಬೇಕು ಎಂದು ಕೇಳಿಕೊಂಡಿದ್ದಾರೆ. ಅಲಂಕಾರಗಳಿಲ್ಲದೆ ಸುಂದರವಾಗಿ ಕಾಣುತ್ತೀರಿ ಎಂದೂ ಷರಾ ಹಾಕಿದ್ದಾರೆ.

ರಮ್ಯಾ ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ‘ರಿಯಲ್​’ ಫೋಟೊ

1 ವರ್ಷದ ಬಳಿಕ Facebook ನಲ್ಲಿ ರಮ್ಯಾ ಫುಲ್ ಆ್ಯಕ್ಟೀವ್! ಏನಂತ ಪೋಸ್ಟ್ ಮಾಡಿದ್ದಾರೆ ಗೊತ್ತಾ?

Published On - 4:59 pm, Wed, 9 December 20