ಯಶ್, ರಾವಣನ ಲುಕ್ನ ಹಿಂದಿರುವ ವ್ಯಕ್ತಿ ಇವರೇ ನೋಡಿ
‘ರಾಮಾಯಣ’ ಸಿನಿಮಾನಲ್ಲಿ ಯಶ್, ತೆರೆಯ ಮೇಲೆ ಬಂದಾಗಲೆಲ್ಲ ಅಬ್ಬರಿಸಿದ್ದಾರೆ, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಅದರಂತೆ ಯಶ್ ಅವರ ರಾವಣನ ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯೂ ಅದ್ಭುತವಾಗಿದೆ. ಯಶ್ ಅವರ ‘ರಾವಣ’ ಪಾತ್ರಕ್ಕೆ ವಿವಿಧ ಲುಕ್ಗಳು ಇವೆ. ತಪಸ್ವಿ, ಯೋಧ, ಮಹಾರಾಜ, ಮುನಿ ಹೀಗೆ ಬೇರೆ ಬೇರೆ ಲುಕ್ಗಳಲ್ಲಿ ರಾವಣನ ಪಾತ್ರ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ಲುಕ್ಗಳ ಹಿಂದೆ ಇದ್ದಿದ್ದು ಒಬ್ಬರೇ ವ್ಯಕ್ತಿ, ಅದುವೇ ಸಾನಿಯಾ ಸರ್ಧಾರಿಯಾ.

ಮುಖ್ಯಾಂಶಗಳು
- ‘ರಾಮಾಯಣ’ ಸಿನಿಮಾನಲ್ಲಿ ಯಶ್ ಲುಕ್
- ಯಶ್ ಲುಕ್ ಹಿಂದಿರುವ ಸಾನಿಯಾ
- ರಾವಣ ಲುಕ್ ಬಗ್ಗೆ ಹೇಳಿದ್ದೇನು?
‘ರಾಮಾಯಣ’ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ನೋಡಿದವರೆಲ್ಲ ಯಶ್ ಅವರ ರಾವಣನ ಪಾತ್ರವನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಕೆಲವರಂತೂ ‘ರಾಮಾಯಣ’ವನ್ನು ‘ರಾವಣಾಯಣ’ ಎಂದೂ ತಮಾಷೆಯಾಗಿ ಕರೆದಿದ್ದಿದೆ. ಆ ಮಟ್ಟಿಗೆ ಯಶ್, ಸಿನಿಮಾದ ಮೇಲೆ ಛಾಪು ಮೂಡಿಸಿದ್ದಾರೆ. ಯಶ್, ತೆರೆಯ ಮೇಲೆ ಬಂದಾಗಲೆಲ್ಲ ಅಬ್ಬರಿಸಿದ್ದಾರೆ, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಅದರಂತೆ ಯಶ್ ಅವರ ರಾವಣನ ಪಾತ್ರವನ್ನು ತೆರೆಯ ಮೇಲೆ ತೋರಿಸಿರುವ ರೀತಿಯೂ ಅದ್ಭುತವಾಗಿದೆ. ಯಶ್ ಅವರ ‘ರಾವಣ’ ಪಾತ್ರಕ್ಕೆ ವಿವಿಧ ಲುಕ್ಗಳು ಇವೆ. ತಪಸ್ವಿ, ಯೋಧ, ಮಹಾರಾಜ, ಮುನಿ ಹೀಗೆ ಬೇರೆ ಬೇರೆ ಲುಕ್ಗಳಲ್ಲಿ ರಾವಣನ ಪಾತ್ರ ಕಾಣಿಸಿಕೊಳ್ಳುತ್ತದೆ. ಈ ಎಲ್ಲ ಲುಕ್ಗಳ ಹಿಂದೆ ಇದ್ದಿದ್ದು ಒಬ್ಬರೇ ವ್ಯಕ್ತಿ, ಅದುವೇ ಸಾನಿಯಾ ಸರ್ಧಾರಿಯಾ.
ಸಾನಿಯಾ ಸರ್ಧಾರಿಯಾ ಜನಪ್ರಿಯ ಫ್ಯಾಷನ್ ಕಲಾವಿದೆ. ಕಳೆದ 11 ವರ್ಷಗಳಿಂದಲೂ ಸಾನಿಯಾ ಅವರು ಯಶ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಯಶ್ ಅವರ ಸಿನಿಮಾಗಳ ಪಾತ್ರಗಳಿಗೆ ಮಾತ್ರವೇ ಅಲ್ಲ ಅವರ ಇತರೆ ಕಾರ್ಯಕ್ರಮಗಳಿಗೂ ಸಹ ಲುಕ್ ರೆಡಿ ಮಾಡುತ್ತಾ ಬರುತ್ತಿದ್ದಾರೆ. ‘ಕೆಜಿಎಫ್’ನ ರಾಖಿಭಾಯ್ ಇಂದ ಹಿಡಿದು, ‘ಟಾಕ್ಸಿಕ್’ ಸಿನಿಮಾದ ಹಲವು ಲುಕ್ಗಳನ್ನೂ ಸಹ ಸಾನಿಯಾ ಅವರೇ ರೆಡಿ ಮಾಡಿದ್ದರು. ಈಗ ‘ರಾಮಾಯಣ’ ಸಿನಿಮಾನಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ. ಯಶ್ ಅವರು ಅತ್ಯದ್ಭುತವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವಂತೆ ಮಾಡಿದ್ದಾರೆ.
ಇದನ್ನೂ ಓದಿ:‘ರಾಮಾಯಣ’ ಬಾಕ್ಸ್ ಆಫೀಸ್ ಕಲೆಕ್ಷನ್: ‘ಜವಾನ್’, ‘ಸ್ತ್ರೀ 2’ ಚಿತ್ರಗಳ ಲೈಫ್‌ಟೈಮ್ ದಾಖಲೆ ಉಡೀಸ್
‘ರಾವಣ’ ಸಿನಿಮಾನಲ್ಲಿ ಯಶ್ ಅವರಿಗೆ ಕಾಸ್ಟ್ಯೂಮ್, ಆಭರಣ, ಹೇರ್ ಸ್ಟೈಲ್ ಇನ್ನಿತರೆಗಳನ್ನು ನಿರ್ಧಾರ ಮಾಡಿದ ಪ್ರಕ್ರಿಯೆ ಕುರಿತು ಮಾತನಾಡಿರುವ ಸಾನಿಯಾ ಸರ್ಧಾರಿಯಾ, ‘ಯಶ್ ಅವರ ‘ಕೆಜಿಎಫ್’ ಮತ್ತು ‘ಟಾಕ್ಸಿಕ್’ ಗಿಂತಲೂ ಬಹಳ ಕ್ಲಿಷ್ಟವಾದ ಪ್ರಕ್ರಿಯೆ ಇದಾಗಿತ್ತು. ರಾವಣನ ಮಿಶ್ರ ವ್ಯಕ್ತಿತ್ವಗಳನ್ನೇ ಆ ಪಾತ್ರದ ಲುಕ್ ಅನ್ನು ಡಿಸೈನ್ ಮಾಡಲು ನಾವು ಮೂಲವಾಗಿ ಬಳಸಿಕೊಂಡೆವು. ವೀರತ್ವ, ಶಿವಭಕ್ತ, ಅಹಂ, ಧೈರ್ಯ, ಜ್ಞಾನ, ಮಹಾತ್ವಾಕಾಂಕ್ಷೆ ಎಲ್ಲವನ್ನೂ ಆಧಾರವಾಗಿರಿಸಿಕೊಂಡು ಪಾತ್ರದ ಉಡುಪು, ಬಣ್ಣ ಮತ್ತು ಆಭರಣಗಳನ್ನು ಡಿಸೈಡ್ ಮಾಡಿದೆವು’ ಎಂದಿದ್ದಾರೆ ಸಾನಿಯಾ.
ರಾವಣನ ಪಾತ್ರಕ್ಕೆ ಮಾಡಿದ ಆಭರಣಗಳೆಲ್ಲವೂ ಒಂದು ರೀತಿ ಶಸ್ತ್ರಾಸ್ತ್ರಗಳಿಂದಲೇ ಸ್ಪೂರ್ತಿ ಪಡೆದು ವಿನ್ಯಾಸ ಮಾಡಿದ ಆಭರಣಗಳಾಗಿವೆ. ರಾವಣನ ಕಿರೀಟವೂ ಸಹ. ಉಡುಪಿನಲ್ಲೂ ಸಹ ಯೋಧನ ಛಾಯೆಗಳು ಸದಾ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಇನ್ನು ರಾವಣ ತಾಂಡವ ಸೀಕ್ವೆನ್ಸ್ಗೆ ಸಂಪೂರ್ಣ ಭಿನ್ನವಾದ ಐಡಿಯಾ ಮೂಲಕ ನಾವು ವಿನ್ಯಾಸ ಮಾಡಿದೆವು. ಅಲ್ಲಿ ನಾವು ರಾವಣನನ್ನು ಕೇವಲ ಶಿವ ಭಕ್ತ ಎಂದು ಮಾತ್ರವೇ ವಿನ್ಯಾಸ ಮಾಡಿದೆವು’ ಎಂದಿದ್ದಾರೆ.
ಯಶ್ ಅವರೊಟ್ಟಿಗೆ ದಶಕಕ್ಕೂ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿರುವ ಅನುಭವದ ಬಗ್ಗೆ ಮಾತನಾಡಿದ ಸಾನಿಯಾ, ಯಶ್ ಅವರು ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಆದರೆ ಅವರಿಗೆ ಬೇಕಾಗಿರುವುದು ಅವರ ಮೇಲೆ ವಸ್ತ್ರ ಅಥವಾ ಇನ್ಯಾವುದೇ ಲುಕ್ ಹೇರಿದಂತೆ ಇರಬಾರದು ಬದಲಿಗೆ ಯಶ್ ಅವರಿಗೆ ಅಥವಾ ಅವರ ಪಾತ್ರಕ್ಕೆ ಸ್ವಾಭಾವಿಕವಾದ ಲುಕ್ ಆಗಿರುವಂತೆ ಇರಬೇಕು. ಅದೊಂದೇ ಅವರು ಕೇಳುವುದು’ ಎಂದಿದ್ದಾರೆ ಸಾನಿಯಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




