ರಾಜಕಾರಣಿಗಳಷ್ಟೇ ಅಲ್ಲ, IAS ಜತೆಗೂ ಸಂಜನಾ ಲಿಂಕ್! ಗಲ್ರಾನಿಗಿದ್ಯಾ ಆ ಅಧಿಕಾರಿಯ ಶ್ರೀರಕ್ಷೆ?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಪ್ರಕರಣ ಸಂಬಂಧ ನಟಿ ಸಂಜನಾ ಗಲ್ರಾನಿ ಬಂಧಿಸದಂತೆ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಒತ್ತಡ ಹೇರಿದ್ದಾರಂತೆ. ಈ ಅಧಿಕಾರಿ ಸಂಜನಾ ಜತೆ 3 ವರ್ಷದಿಂದ ಸ್ನೇಹ ಹೊಂದಿದ್ದಾರೆ. ಕೆಲ ಸರ್ಕಾರಿ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೇ ಕರ್ತವ್ಯ ನಿರ್ವಹಿಸಿದ್ರು. ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಬಂಧನವಾಗುತ್ತಿದ್ದಂತೆ ಒತ್ತಡ ಹೆಚ್ಚಾಗಿದೆ. ನಂತರ ಈ ಕೇಸ್‌ನಲ್ಲಿ ಸಂಜನಾ ಹೆಸರು ತರದಂತೆ ಒತ್ತಡ ಹೇರಿದ್ದರು. ಐಪಿಎಸ್ ಅಧಿಕಾರಿ ಮೇಲೆ ಐಎಎಸ್ ಅಧಿಕಾರಿಯಿಂದಲೇ ಒತ್ತಡ ಹೇರಲಾಗಿದೆಯಂತೆ. ಆದ್ರೆ ಪ್ರಕರಣದ […]

ರಾಜಕಾರಣಿಗಳಷ್ಟೇ ಅಲ್ಲ, IAS ಜತೆಗೂ ಸಂಜನಾ ಲಿಂಕ್! ಗಲ್ರಾನಿಗಿದ್ಯಾ ಆ ಅಧಿಕಾರಿಯ ಶ್ರೀರಕ್ಷೆ?
Edited By:

Updated on: Sep 13, 2020 | 10:12 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಪ್ರಕರಣ ಸಂಬಂಧ ನಟಿ ಸಂಜನಾ ಗಲ್ರಾನಿ ಬಂಧಿಸದಂತೆ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಒತ್ತಡ ಹೇರಿದ್ದಾರಂತೆ.

ಈ ಅಧಿಕಾರಿ ಸಂಜನಾ ಜತೆ 3 ವರ್ಷದಿಂದ ಸ್ನೇಹ ಹೊಂದಿದ್ದಾರೆ. ಕೆಲ ಸರ್ಕಾರಿ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೇ ಕರ್ತವ್ಯ ನಿರ್ವಹಿಸಿದ್ರು. ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ಬಂಧನವಾಗುತ್ತಿದ್ದಂತೆ ಒತ್ತಡ ಹೆಚ್ಚಾಗಿದೆ. ನಂತರ ಈ ಕೇಸ್‌ನಲ್ಲಿ ಸಂಜನಾ ಹೆಸರು ತರದಂತೆ ಒತ್ತಡ ಹೇರಿದ್ದರು. ಐಪಿಎಸ್ ಅಧಿಕಾರಿ ಮೇಲೆ ಐಎಎಸ್ ಅಧಿಕಾರಿಯಿಂದಲೇ ಒತ್ತಡ ಹೇರಲಾಗಿದೆಯಂತೆ.

ಆದ್ರೆ ಪ್ರಕರಣದ ಪ್ರತಿ ಹಂತದಲ್ಲಿ ಸಂಜನಾ ಹೆಸರು ಇದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದರು. ಸಂಜನಾ ಮನೆ ಮೇಲೆ ಸಿಸಿಬಿ ದಾಳಿ ವೇಳೆ ಆ ಐಎಎಸ್‌ ಅಧಿಕಾರಿಗೆ ಸೇರಿದ ಚೆಕ್‌ಗಳು ಪತ್ತೆಯಾಗಿದ್ದವು. ಸಂಜನಾ ಬಂಧನ ಬಳಿಕ ಆಕೆಗೆ ಟಾರ್ಚರ್ ನೀಡದಂತೆ ಸಿಸಿಬಿ ಅಧಿಕಾರಿಗಳ ಮೇಲೆ ಐಎಎಸ್ ಅಧಿಕಾರಿ ಒತ್ತಡ ಹೇರಿದ್ದರು ಎಂದು ತಿಳಿದು ಬಂದಿದೆ.

Published On - 8:09 am, Sun, 13 September 20