ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಹಾಗೂ ನಟಿ ಸಂಜನಾ ಗಲ್ರಾನಿ ನಡುವಿನ ಹಾವು-ಮುಂಗುಸಿ ಆಟ ಮುಂದುವರೆದಿದೆ. ಈಗ ನಟಿ ಸಂಜನಾ, ಪ್ರಶಾಂತ್ ಸಂಬರಗಿಯ ಆಡಿಯೋ ಒಂದನ್ನು ಹರಿಯಬಿಟ್ಟಿದ್ದಾರೆ.
ನಟಿ ಸಂಜನಾ ಹರಿಯಬಿಟ್ಟಿರುವ ಪ್ರಶಾಂತ್ ಸಂಬರಗಿಯ ಆಡಿಯೋದಲ್ಲಿ, ಪ್ರಶಾಂತ್ ಸಂಬರಗಿ ಹಾಗೂ ಸಂಜನಾ ಅಭಿಮಾನಿ ರಾಜ್ಯ ಒಕ್ಕೂಟದ ಅಧ್ಯಕ್ಷ ಪುರುಷೋತ್ತಮ್ ಎಂಬುವವರು ಸಂಭಾಷಣೆ ನಡೆಸಿದ್ದಾರೆ. ಇಬ್ಬರು ನಡೆಸಿರುವ ಸಂಭಾಷಣೆಯಲ್ಲಿ ಸಂಬರಗಿ ನನ್ನ ಹೆಸರನ್ನೇ ಹೇಳಿಲ್ಲ ಅಂತಿದ್ದಾನೆ. ಹೀಗಾಗಿ ಸಂಬರಗಿ ನಕಲಿ, ಅವನೇ ಡ್ರಗ್ಸ್ ತೆಗೆದುಕೊಂಡಿರಬೇಕು. ನಾನು ಹೇಳೋ ಹಾಗೆ ಅವನೊಬ್ಬ ಹಂದಿ, ನಾಯಿಯೇ ಎಂದು ಸಂಜನಾ ಗಲ್ರಾನಿ ತಮ್ಮ ತೀವ್ರ ಆಕ್ರೋಶ ಹೊರಹಾಕಿದ್ದಾರೆ.