CCB ತಂಡ ಇನ್ನೂ ಯಾವ ನಗರಗಳಿಗೆ ರಾಗಿಣಿಯನ್ನ ಕರೆದೊಯ್ದು ವಿಚಾರಣೆ ಮಾಡಲಿದೆ ಗೊತ್ತಾ!?
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಯನ್ನು ಸೆಷನ್ಸ್ ನ್ಯಾಯಲಯ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಸಿಸಿಬಿ ವಿಚಾರಣೆ ವೇಳೆ ನಟಿ ರಾಗಿಣಿ ದ್ವಿವೇದಿ ಹಲವು ಪಾರ್ಟಿಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ಪಾರ್ಟಿ ನಡೆದ ಸ್ಥಳಗಳಿಗೆ CCB ಅಧಿಕಾರಿಗಳು ನಟಿ ರಾಗಿಣಿ ಕರೆದೊಯ್ದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಬೆಂಗಳೂರಿನ ನಾನಾ ಸ್ಥಳಗಳು, ಚೆನ್ನೈ, ಮುಂಬೈ,ಹೈದರಾಬಾದ್ ಸೇರಿದಂತೆ ಹಲವು ಕಡೆ ಪಾರ್ಟಿಗಳಲ್ಲಿ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಯನ್ನು ಸೆಷನ್ಸ್ ನ್ಯಾಯಲಯ ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಸಿಸಿಬಿ ವಿಚಾರಣೆ ವೇಳೆ ನಟಿ ರಾಗಿಣಿ ದ್ವಿವೇದಿ ಹಲವು ಪಾರ್ಟಿಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ಪಾರ್ಟಿ ನಡೆದ ಸ್ಥಳಗಳಿಗೆ CCB ಅಧಿಕಾರಿಗಳು ನಟಿ ರಾಗಿಣಿ ಕರೆದೊಯ್ದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಬೆಂಗಳೂರಿನ ನಾನಾ ಸ್ಥಳಗಳು, ಚೆನ್ನೈ, ಮುಂಬೈ,ಹೈದರಾಬಾದ್ ಸೇರಿದಂತೆ ಹಲವು ಕಡೆ ಪಾರ್ಟಿಗಳಲ್ಲಿ ನಟಿ ರಾಗಿಣಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಹೀಗಾಗಿ ಪಾರ್ಟಿ ನಡೆದ ಸ್ಥಳಕ್ಕೆ ನಟಿ ರಾಗಿಣಿಯನ್ನು ಕರೆದೊಯ್ದು ಸ್ಥಳ ಮಹಜರು ಸೇರಿದಂತೆ ಸಿಸಿಬಿ ಅಧಿಕಾರಿಗಳಿಂದ ವಿಚಾರಣೆ ಸಾಧ್ಯತೆಗಳಿವೆ. ಉಳಿದಂತೆ ಮಹಿಳಾ ಸಾಂತ್ವನ ಕೇಂದ್ರದಲ್ಲೇ ನಟಿ ರಾಗಿಣಿಯ ವಿಚಾರಣೆ ನಡೆಯಲಿದೆ.