ಜಾಮೀನು ಯಾವಾಗ ನಿರ್ಧಾರವಾಗುತ್ತೆ, ಹೇಳಿ? ಜಡ್ಜ್​ಗೆ ನಟಿ ಸಂಜನಾ ಗಲ್ರಾನಿ ಪ್ರಶ್ನೆ

| Updated By: ಸಾಧು ಶ್ರೀನಾಥ್​

Updated on: Sep 18, 2020 | 6:09 PM

ಬೆಂಗಳೂರು: ನಟಿ ಸಂಜನಾ ಗಲ್ರಾನಿಯ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ. ವಿಶೇಷ ಕೋರ್ಟ್ ಸಂಜನಾಗೆ  ಸೆಪ್ಟಂಬರ್ 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ನಟಿ ಈ ಮಧ್ಯೆ, ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ನಟಿ ಸಂಜನಾ ನಾನು 180 ಜನರಿಗೆ ಕೆಲಸ‌ ನೀಡಿದ್ದೇನೆ. ನಾನು ಜೈಲಿನಲ್ಲಿದ್ದರೆ ಅವರಿಗೆ ತೊಂದರೆಯಾಗಲಿದೆ. ಹಾಗಾಗಿ, ಜಾಮೀನು ಬಗ್ಗೆ ಆದೇಶ ನೀಡಲು ನಟಿ ಸಂಜನಾ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ನ್ಯಾಯಾಧೀಶ ಶೀನಪ್ಪ ಅವರು ನಿಮ್ಮ ಪರ […]

ಜಾಮೀನು ಯಾವಾಗ ನಿರ್ಧಾರವಾಗುತ್ತೆ, ಹೇಳಿ? ಜಡ್ಜ್​ಗೆ ನಟಿ ಸಂಜನಾ ಗಲ್ರಾನಿ ಪ್ರಶ್ನೆ
Follow us on

ಬೆಂಗಳೂರು: ನಟಿ ಸಂಜನಾ ಗಲ್ರಾನಿಯ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ. ವಿಶೇಷ ಕೋರ್ಟ್ ಸಂಜನಾಗೆ  ಸೆಪ್ಟಂಬರ್ 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.

ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ನಟಿ
ಈ ಮಧ್ಯೆ, ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ನಟಿ ಸಂಜನಾ ನಾನು 180 ಜನರಿಗೆ ಕೆಲಸ‌ ನೀಡಿದ್ದೇನೆ. ನಾನು ಜೈಲಿನಲ್ಲಿದ್ದರೆ ಅವರಿಗೆ ತೊಂದರೆಯಾಗಲಿದೆ. ಹಾಗಾಗಿ, ಜಾಮೀನು ಬಗ್ಗೆ ಆದೇಶ ನೀಡಲು ನಟಿ ಸಂಜನಾ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ನ್ಯಾಯಾಧೀಶ ಶೀನಪ್ಪ ಅವರು ನಿಮ್ಮ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ನಾಳೆಗೆ ಆಕ್ಷೇಪಣೆಗೆಂದು ನಿಗದಿಯಾಗಿದೆ. ಎರಡೂ ಕಡೆ ವಾದ ಕೇಳಿ ಜಾಮೀನು ಅರ್ಜಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.

ಇಂದು ಅಥವಾ ನಾಳೆ ಜಾಮೀನು ಬಗ್ಗೆ ನಿರ್ಧಾರ ಆಗುತ್ತಾ ಎಂದು ಆತುರಕ್ಕೆ ಬಿದ್ದು ನಟಿ ಸಂಜನಾ ಗಲ್ರಾನಿ, ನ್ಯಾಯಾಧೀಶರಿಗೆ ಮರು ಪ್ರಶ್ನಿಸಿದ್ದಾರೆ. ಅದನ್ನು ಹೇಳೋಕೆ ಆಗುವುದಿಲ್ಲ ಎಂದು ನ್ಯಾಯಾಧೀಶ ಶೀನಪ್ಪ ಅವರು ಸ್ಪಷ್ಟ ಮಾತುಗಳಲ್ಲಿ, ಕಟ್ಟಿಮುರಿದಂತೆ ಹೇಳಿದ್ದಾರೆ.

A5 ವೈಭವ್ ಜೈನ್‌ ಸಿಸಿಬಿ ಕಸ್ಟಡಿಗೆ
ಇತ್ತ ಪ್ರಕರಣದ A5 ಆರೋಪಿ ವೈಭವ್ ಜೈನ್‌ಗೆ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಸಿಸಿಬಿ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ.

Published On - 5:59 pm, Fri, 18 September 20