AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್​​ಡೇಟ್

ರವಿಚಂದ್ರನ್ ಅವರ ಬಿಗ್ ಬಜೆಟ್ ಸಿನಿಮಾ ‘ಶಾಂತಿ ಕ್ರಾಂತಿ’ ರೀ-ರಿಲೀಸ್‌ಗೆ ಅಭಿಮಾನಿಗಳಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈ ಕುರಿತು ರವಿಚಂದ್ರನ್ ಮಗ ವಿಕ್ರಮ್ ಅಪ್‌ಡೇಟ್ ನೀಡಿದ್ದು, ತಂದೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮರು ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದು ರವಿಚಂದ್ರನ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್​​ಡೇಟ್
ಶಾಂತಿ ಕ್ರಾಂತಿ
ರಾಜೇಶ್ ದುಗ್ಗುಮನೆ
|

Updated on:Aug 06, 2026 | 11:30 AM

Share

ಮುಖ್ಯಾಂಶಗಳು

  • ಶಾಂತಿ ಕ್ರಾಂತಿ ರೀ-ರಿಲೀಸ್‌ಗೆ ಬೇಡಿಕೆ
  • ರವಿಚಂದ್ರನ್ ಕೊಟ್ಟ ಗ್ರೀನ್ ಸಿಗ್ನಲ್
  • 10 ಕೋಟಿ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ

1991ರಲ್ಲಿ ರಿಲೀಸ್ ಆಗಿದ್ದ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಬಜೆಟ್​​ನಲ್ಲಿ ಸಿದ್ಧವಾಗಿತ್ತು. ಆದರೆ, ಅಂದುಕೊಂಡಂತೆ ಸಿನಿಮಾ ಕಮಾಲ್ ಮಾಡಲಿಲ್ಲ. ಆಗಿನ ಕಾಲದಲ್ಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸಿದ್ಧಪಡಿಸಲಾಗಿತ್ತು. ರವಿಚಂದ್ರನ್ (Ravichandran) ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ಈ ಚಿತ್ರವನ್ನು ಈಗ ರೀ ರಿಲೀಸ್ ಮಾಡುವ ಆಗ್ರಹ ಕೇಳಿ ಬರುತ್ತಿದೆ. ಇದಕ್ಕೆ ರವಿಚಂದ್ರನ್ ಅವರ ಮಗ ಉತ್ತರಿಸಿದ್ದಾರೆ.

ರವಿಚಂದ್ರನ್ ಅವರಿಗೆ ಸಿನಿಮಾ ಬಗ್ಗೆ ಅಪಾರ ಪ್ರೇಮ. ಈ ಪ್ರೇಮದ ಕಾರಣಕ್ಕೆ ಆಗಿನ ಕಾಲದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಿದ್ದರು. ಆದರೆ, ‘ಶಾಂತಿ ಕ್ರಾಂತಿ’ ಅಂದುಕೊಂಡಂತೆ ಕಮಾಯಿ ಮಾಡಲೇ ಇಲ್ಲ. ಈ ಚಿತ್ರ ಅಂದು ಸೋತಿತ್ತು. 10 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾಗಿದ್ದ ಈ ಚಿತ್ರವನ್ನು ‘ನಾವು ಗೆಲ್ಲಿಸುತ್ತೇವೆ ರಿಲೀಸ್ ಮಾಡಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಬರುತ್ತಿದೆ. ಈ ಬಗ್ಗೆ ರವಿಚಂದ್ರನ್ ಮಗ ವಿಕ್ರಮ್ ಮಾತನಾಡಿದ್ದಾರೆ.

‘ಶಾಂತಿ ಕ್ರಾಂತಿ ಸಿನಿಮಾ ರೀ-ರಿಲೀಸ್ ಮಾಡುವಂತೆ ತುಂಬಾ ಜನ ತಂದೆ ಬಳಿ ಕೇಳಿದ್ದಾರೆ. ಇವತ್ತು ನಾನು ಡ್ಯಾಡಿ ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರ ಬಗ್ಗೆ ಒಂದು ಮಾತುಕತೆ ನಡೀತಾ ಇದೆ. ನಮ್ಮ ಅಣ್ಣ ಮನು ಈ ಸಿನಿಮಾನ ರೀ ರೀಲೀಸ್ ಮಾಡಬೇಕು ಅಂತ ಆಸೆ ಪಟ್ಟರು’ ಎಂದರು ವಿಕ್ರಮ್.

View this post on Instagram

A post shared by SVN (@worldofsvn)

‘ಇಷ್ಟೊಂದು ಜನ ಆಸೆ ಪಡ್ತಾ ಇದ್ದಾರೆ, ನೋಡು ಏನು ಮಾಡ್ತೀಯಾ ಅಂದ್ರು. ಆ ಗ್ರೀನ್ ಸಿಗ್ನಲ್ ನನಗೆ ಬಂದಿದೆ. ಇವತ್ತು ಶುರು ಮಾಡಿದ್ದೀನಿ ಅದರ ಬಗ್ಗೆ. ಎಲ್ಲಾ ಏನು ಪಾಸಿಟಿವ್ಸ್ ಏನಿದೆ, ಹೆಂಗೆ ಆಗುತ್ತೆ, ಯಾವ ತರ ಆಗುತ್ತೆ ನೋಡೋಣ’ ಎಂದಿದ್ದಾರೆ ವಿಕ್ರಮ್.

ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

‘ಸೆಪ್ಟೆಂಬರ್ 19, 1991ರಲ್ಲಿ ಆ ಸಿನಿಮಾ ರಿಲೀಸ್ ಆಯ್ತು. ಅದರ ಬಗ್ಗೆ ತುಂಬಾ ವಿಷಯ ಆಡಿಯನ್ಸ್ ಮಾತಾಡ್ತಾ ಇದ್ದಾರೆ. ಆ ಸಿನಿಮಾ 10 ಕೋಟಿ ಅಲ್ಲ, 10 ಕೋಟಿಗಿಂತ ಜಾಸ್ತಿ ಖರ್ಚಾಗಿದೆ’ ಎಂಬ ಮಾಹಿತಿ ನೀಡಿದರು.

ಪ್ರಶ್ನೆ: ಶಾಂತಿ ಕ್ರಾಂತಿ ರಿಲೀಸ್ ಆಗಿದ್ದು ಯಾವಾಗ? ಉತ್ತರ: ಸೆಪ್ಟೆಂಬರ್ 19, 1991

ಪ್ರಶ್ನೆ:ಶಾಂತಿ ಕ್ರಾಂತಿ ಸಿನಿಮಾ ಬಜೆಟ್ ಎಷ್ಟು? ಉತ್ತರ: 10 ಕೋಟಿ ರೂಪಾಯಿ

ಪ್ರಶ್ನೆ: ಶಾಂತಿ ಕ್ರಾಂತಿ ನಿರ್ದೇಶಕರು ಯಾರು? ಉತ್ತರ: ರವಿಚಂದ್ರನ್

Published On - 9:22 am, Thu, 6 August 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!