ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ: ‘ಮೆಜೆಸ್ಟಿಕ್​ 2’ ಚಿತ್ರದಲ್ಲಿ ಹೀಗೊಂದು ಹಾಡು

ರೌಡಿಸಂ ಕಹಾನಿ ಇರುವ ‘ಮೆಜೆಸ್ಟಿಕ್​ 2’ ಸಿನಿಮಾದಲ್ಲಿ ಭರತ್​ ಹಾಗೂ ಸಂಹಿತಾ ವಿನ್ಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ತಾಯಿ ಪಾತ್ರದಲ್ಲಿ ಶ್ರುತಿ ಅಭಿನಯಿಸುತ್ತಿದ್ದಾರೆ. ವಿನು ಮನಸು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ' ಹಾಡಿನ ಚಿತ್ರೀಕರಣ ನಡೆದಿದೆ.

ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ: ‘ಮೆಜೆಸ್ಟಿಕ್​ 2’ ಚಿತ್ರದಲ್ಲಿ ಹೀಗೊಂದು ಹಾಡು
‘ಶೆಡ್ಡಿಗೆ ಹೋಗಣ ಬಾ..’ ಹಾಡಿನ ಶೂಟಿಂಗ್​

Updated on: Jul 27, 2024 | 7:31 PM

ಶೀರ್ಷಿಕೆಯ ಕಾರಣದಿಂದ ‘ಮೆಜೆಸ್ಟಿಕ್​ 2’ ಸಿನಿಮಾ ಗಮನ ಸೆಳೆಯುತ್ತಿದೆ. ನಟ ದರ್ಶನ್​ ಅವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟ ಸಿನಿಮಾ ‘ಮೆಜೆಸ್ಟಿಕ್​’. ಆದರೆ ಈಗ ‘ಮೆಜೆಸ್ಟಿಕ್​ 2’ ಸಿನಿಮಾದಲ್ಲಿ ಅವರು ನಟಿಸುತ್ತಿಲ್ಲ. ಬದಲಿಗೆ, ಹೊಸ ನಟ ಭರತ್​ ಅವರು ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾದ ಐಟಂ ಸಾಂಗ್ ಚಿತ್ರೀಕರಣ ಮಾಡಲಾಯಿತು. ವಿಶೇಷ ಏನೆಂದರೆ, ಈ ಸಿನಿಮಾದ ಕಥಾನಾಯಕ ದರ್ಶನ್​ ಫ್ಯಾನ್​ ಆಗಿರುತ್ತಾನೆ. ಈಗಿನ ಟ್ರೆಂಡ್​ಗೆ ತಕ್ಕಂತೆ ಹಾಡುಗಳು ಇರಲಿವೆ ಎಂದು ಚಿತ್ರತಂಡ ತಿಳಿಸಿದೆ.

ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ‘ಅಮ್ಮಾ ಎಂಟರ್​ಪ್ರೈಸಸ್’ ಬ್ಯಾನರ್​ ಮೂಲಕ ಚಿತ್ರದುರ್ಗದ ಹೆಚ್. ಹನುಮಂತಪ್ಪ ಅವರು ‘ಮೆಜೆಸ್ಟಿಕ್​ 2’ ನಿರ್ಮಿಸುತ್ತಿದ್ದಾರೆ. 2002ರಲ್ಲಿ ತೆರೆಕಂಡ ‘ಮೆಜೆಸ್ಟಿಕ್’ ಚಿತ್ರದಲ್ಲಿ 90ರ ದಶಕದಲ್ಲಿ ರೌಡಿಸಂ ಕಹಾನಿ ಇತ್ತು. ಆದರೆ ಈಗ ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ಮೆಜೆಸ್ಟಿಕ್​ನ ರೌಡಿಸಂ, ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳನ್ನು ತೋರಿಸಲಾಗುವುದು. ನಿರ್ದೇಶಕ ರಾಮು ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಮಗ ಭರತ್ ಅವರು ‘ಮೆಜೆಸ್ಟಿಕ್​ 2’ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಕಂಠೀರವ ಸ್ಟುಡಿಯೋ’ದಲ್ಲಿ ಕಲರ್​ಫುಲ್​ ಸೆಟ್​ ನಿರ್ಮಿಸಿ ಹಾಡಿನ ಶೂಟಿಂಗ್​ ಮಾಡಲಾಗಿದೆ. ಈ ಹಾಡಿಗೆ ನಿರ್ದೇಶಕ ರಾಮು ಅವರೇ ಸಾಹಿತ್ಯ ಬರೆದಿದ್ದಾರೆ. ಸದ್ಯಕ್ಕೆ ಟ್ರೆಂಡ್ ಅನುಸಾರ ಅವರು ಲಿರಿಕ್ಸ್​ ಬರೆದಿದ್ದಾರೆ. ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ’ ಎಂಬ ಈ ಹಾಡನ್ನು ಮೇಘನಾ ಹಳ್ಳಿಹಾಳ ಅವರು ಹಾಡಿದ್ದಾರೆ. ಕಳೆದ 3 ದಿನಗಳಿಂದ ನಡೆಯುತ್ತಿರುವ ಈ ಸಾಂಗ್​ ಶೂಟಿಂಗ್​ನಲ್ಲಿ ಐಟಂ ಡ್ಯಾನ್ಸರ್ ಮತ್ತು ನಾಯಕನ ಜತೆಗೆ ಸಹ ಕಲಾವಿದರು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಭೇಟಿ

‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ’ ಸಾಂಗ್​ಗೆ ಸಂತೋಷ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಮೋಹಳ್ಳಿ, ಮಾಕಳಿ ಸಮೀಪದ ಸಕ್ರೆ ಅಡ್ಡ, ಹೆಚ್.ಎಂ.ಟಿ., ಆರ್.ಟಿ. ನಗರದ ನಿಸರ್ಗ ಹೌಸ್ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಈಗಾಗಲೇ ಶೇಕಡ 50ರಷ್ಟು ಶೂಟಿಂಗ್​ ಮಾಡಲಾಗಿದೆ. ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಹಾಡನ್ನು ಚಿತ್ರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us