
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದ ಮೂಲಕ ರಜನಿಕಾಂತ್ ಮತ್ತೊಂದು ಗೆಲುವು ಕಂಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಮಂಡ್ಯದ ಡಾನ್ ಆಗಿ ಮಿಂಚಿದ್ದಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಬಗ್ಗೆ ಭರಪೂರ ಮೆಚ್ಚುಗೆ ಸಿಗುತ್ತಿದೆ. ಕೆಲವೇ ನಿಮಿಷ ತೆರೆಮೇಲೆ ಕಾಣಿಸಿಕೊಂಡರೂ ಅವರ ನಟನೆಗೆ ಎಲ್ಲರ ಗಮನ ಸೆಳೆದಿದೆ. ಪರಭಾಷಿಗರು ಶಿವಣ್ಣ (Shivanna Movie) ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಶಿವರಾಜ್ಕುಮಾರ್ ಖದರ್ನೆಸ್ ನೋಡಿ ಅನೇಕರು ಭೇಷ್ ಎನ್ನುತ್ತಿದ್ದಾರೆ.
ಶಿವರಾಜ್ಕುಮಾರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 125ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಪೈಕಿ ಅವರ ಖಾತೆಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳು ಇವೆ. ಶಿವರಾಜ್ಕುಮಾರ್ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಅವರು ರಗಡ್ ಪಾತ್ರ ಮಾಡಿದರೆ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗುತ್ತದೆ. ‘ಜೈಲರ್’ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಅವರು ಮಾಡಿರುವ ನರಸಿಂಹ ಪಾತ್ರ ಜನರಿಗೆ ಇಷ್ಟವಾಗಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ‘ಜೈಲರ್’ ಸಿನಿಮಾ; ಮೊದಲ ದಿನದ ಕಲೆಕ್ಷನ್ ವಿವರ ಇಲ್ಲಿದೆ
ಟ್ವಿಟರ್ನಲ್ಲಿ ಶಿವರಾಜ್ಕುಮಾರ್ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಕ್ಲೈಮ್ಯಾಕ್ಸ್ನಲ್ಲಿ ಅವರು ಕಾಣಿಸಿಕೊಳ್ಳುವ ರೀತಿಗೆ ಜನರು ಭೇಷ್ ಎಂದಿದ್ದಾರೆ. ಕೆಲ ಪರಭಾಷಿಗರು ಶಿವರಾಜ್ಕುಮಾರ್ ನಟನೆಯ ಬೆಸ್ಟ್ ಸಿನಿಮಾಗಳು ಯಾವವು ಎಂಬುದರ ಲಿಸ್ಟ್ ತೆಗೆದಿದ್ದಾರೆ.
‘ಜೈಲರ್’ ಸಿನಿಮಾ ಭಾರತದಲ್ಲಿ ಮೊದಲ ದಿನ 50+ ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಶಿವರಾಜ್ಕುಮಾರ್ ಇರುವ ಕಾರಣಕ್ಕೆ ಕರ್ನಾಕಟದಲ್ಲಿ ಹಾಗೂ ಮೋಹನ್ಲಾಲ್ ಇರುವುದಕ್ಕೆ ಕೇರಳದಲ್ಲಿ ಸಿನಿಮಾ ಉತ್ತಮ ಕಮಾಯಿ ಮಾಡುತ್ತಿದೆ.