ಲಾಕ್​ಡೌನ್​ ಸಮಯದಲ್ಲಿ 15 ಲಕ್ಷ ರೂ. ಗಳಿಕೆ, ಸಹ ಕಲಾವಿದರ ನೆರವಿಗೆ ಪಣತೊಟ್ಟ ಗಾಯಕ

| Updated By:

Updated on: Jun 28, 2020 | 2:17 PM

ಚೆನ್ನೈ: ಕೊರೊನಾ ಮಹಾಮರಿಯ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಘೋಷಿಸಿದ ಲಾಕ್​​ಡೌನ್​ನಿಂದ ದೇಶದ ಎಲ್ಲಾ ಚಿತ್ರರಂಗಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವು. ಕೇವಲ ನಟರಲ್ಲದೆ ಇತರೆ ಕಲಾವಿದರು ಮತ್ತು ತಂತ್ರಜ್ಞರು ಸಹ ಈ ವೇಳೆಯಲ್ಲಿ ಆದಾಯವಿಲ್ಲದೆ ಬಳಲಿ ಬೆಂಡಾಗಿ ಹೋದರು. ಇದರಲ್ಲಿ ತಮಿಳುನಾಡಿನ ಕಾಲಿವುಡ್ ಚಿತ್ರರಂಗದ ಕಲಾವಿದರು ಕೂಡ ಒಬ್ಬರು. ಸಹ ಗಾಯಕರ ನೆರವಿಗೆ ನಿಂತ ಸತ್ಯನ್​ ಮಹಾಲಿಂಗಂ ಆದರೆ, ಇಂಥ ಸಮಯದಲ್ಲಿ ಧೃತಿಗೆಡದೆ, ಕಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕನೊಬ್ಬ ತನ್ನ ಸಹ ಗಾಯಕರ ನೆರವಿಗೆ ಮುಂದಾಗಿದ್ದಾರೆ. ಸೋಷಿಯಲ್​ […]

ಲಾಕ್​ಡೌನ್​ ಸಮಯದಲ್ಲಿ 15 ಲಕ್ಷ ರೂ. ಗಳಿಕೆ, ಸಹ ಕಲಾವಿದರ ನೆರವಿಗೆ ಪಣತೊಟ್ಟ ಗಾಯಕ
Follow us on

ಚೆನ್ನೈ: ಕೊರೊನಾ ಮಹಾಮರಿಯ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಘೋಷಿಸಿದ ಲಾಕ್​​ಡೌನ್​ನಿಂದ ದೇಶದ ಎಲ್ಲಾ ಚಿತ್ರರಂಗಗಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವು. ಕೇವಲ ನಟರಲ್ಲದೆ ಇತರೆ ಕಲಾವಿದರು ಮತ್ತು ತಂತ್ರಜ್ಞರು ಸಹ ಈ ವೇಳೆಯಲ್ಲಿ ಆದಾಯವಿಲ್ಲದೆ ಬಳಲಿ ಬೆಂಡಾಗಿ ಹೋದರು. ಇದರಲ್ಲಿ ತಮಿಳುನಾಡಿನ ಕಾಲಿವುಡ್ ಚಿತ್ರರಂಗದ ಕಲಾವಿದರು ಕೂಡ ಒಬ್ಬರು.

ಸಹ ಗಾಯಕರ ನೆರವಿಗೆ ನಿಂತ ಸತ್ಯನ್​ ಮಹಾಲಿಂಗಂ
ಆದರೆ, ಇಂಥ ಸಮಯದಲ್ಲಿ ಧೃತಿಗೆಡದೆ, ಕಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕನೊಬ್ಬ ತನ್ನ ಸಹ ಗಾಯಕರ ನೆರವಿಗೆ ಮುಂದಾಗಿದ್ದಾರೆ. ಸೋಷಿಯಲ್​ ಮೀಡಿಯಾವನ್ನ ಅಸ್ತ್ರವಾಗಿ ಬಳಸಿಕೊಂಡು ತಮ್ಮ ಪ್ರತಿಭೆಯ ಆಧಾರದ ಮೇಲೆ ಕಳೆದ 64ದಿನಗಳಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ಸಂಪಾದಿಸಿದ್ದಾರೆ. ಇವರು ಬೇರೆ ಯಾರು ಅಲ್ಲ ಚೆನ್ನೈ ಮೂಲದ ಸತ್ಯನ್​ ಮಹಾಲಿಂಗಂ.

ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ‘ಸತ್ಯನ್​ ಉತ್ಸವ’ ಎಂಬ ಹೆಸರಿನ ಲೈವ್ ಕಾರ್ಯಕ್ರಮದ ಮೂಲಕ ಸತತವಾಗಿ ಹಾಡುಗಳನ್ನ ಹಾಡಿದ ಸತ್ಯನ್ ಅದರಲ್ಲಿ ಬಂದ ಹಣವನ್ನ ತಮ್ಮ ಸಹ ಗಾಯಕರಿಗೆ ನೀಡಿದ್ದಾರೆ. ‘ಮ್ಯೂಸಿಕ್​ ಫಾರ್​ ಮ್ಯುಸಿಶಿಯನ್ಸ್​ ’ ಎಂಬ ಯೋಜನೆ ಅಡಿಯಲ್ಲಿ ಇಂಡಸ್ಟ್ರಿಯ ಇತರರ ಸಹಾಯಕ್ಕೆ ಮುಂದಾಗಿದ್ದಾರೆ. ಗಾಯಕರ ಸಂಕಷ್ಟಗಳನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಹೇಳಿರುವ ಸತ್ಯನ್​ ಕಳೆದ ಮೇ 30ರಂದು 25 ಗಂಟೆಗಳ ಕಾಲ ನಿರಂತರವಾಗಿ ಹಾಡುತ್ತಾ ಆರ್ಕೆಸ್ಟ್ರಾ ಗಾಯಕರ ನೆರವಿಗೆ ಮುಂದಾಗಿದ್ದರು.