‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ರಜನಿಕಾಂತ್​ ಜೀವನವೇ ಸ್ಫೂರ್ತಿ: ನಟ ಸಾರ್ಥಕ್​

South Indian Hero Kannada Movie: ಟೀಸರ್​ ಮೂಲಕ ಗಮನ ಸೆಳೆದಿರುವ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕುರಿತು ಅನೇಕ ವಿಷಯಗಳನ್ನು ನಟ ಸಾರ್ಥಕ್​ ಅವರು ಹಂಚಿಕೊಂಡಿದ್ದಾರೆ.

‘ಸೌತ್​ ಇಂಡಿಯನ್​ ಹೀರೋ’ ಚಿತ್ರಕ್ಕೆ ರಜನಿಕಾಂತ್​ ಜೀವನವೇ ಸ್ಫೂರ್ತಿ: ನಟ ಸಾರ್ಥಕ್​
ಸಾರ್ಥಕ್

Updated on: Jan 21, 2023 | 8:09 PM

‘ಸೌತ್​ ಇಂಡಿಯನ್​ ಹೀರೋ’ (South Indian Hero) ಸಿನಿಮಾದಲ್ಲಿ ನಟ ಸಾರ್ಥಕ್​ ಅವರು ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಹಲವು ಶೇಡ್​ಗಳಿರುವ ಪಾತ್ರವಿದೆ. ಚಿತ್ರರಂಗದ ಕುರಿತ ಕಥೆಯೇ ಈ ಸಿನಿಮಾದಲ್ಲಿದೆ. ಸ್ಟಾರ್​ ಹೀರೋಗಳ ಇಮೇಜ್​, ಮಾಸ್​ ಹೀರೋಗಳ ಬಿಲ್ಡಪ್​, ಅಭಿಮಾನಿಗಳ ನಡುವೆ ನಡೆಯುವ ಸ್ಟಾರ್​ ವಾರ್ (Star War) ಇತ್ಯಾದಿ ವಿಷಯಗಳು ಈ ಸಿನಿಮಾದಲ್ಲಿ ಇದೆ. ಈ ಎಲ್ಲ ವಿಷಯಗಳ ಬಗ್ಗೆ ನಟ ಸಾರ್ಥಕ್​ ಅವರು ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ಸಂದರ್ಶನದಲ್ಲಿ ಅವರು ಸಿನಿಮಾದ ಥೀಮ್​ ಬಗ್ಗೆ ಮಾತನಾಡಿದ್ದಾರೆ. ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾಗೆ ರಜನಿಕಾಂತ್​ (Rajinikanth) ಅವರ ರಿಯಲ್​ ಲೈಫ್​ ಕಥೆಯೇ ಸ್ಫೂರ್ತಿ ಎಂದು ಸಾರ್ಥಕ್​ ಹೇಳಿದ್ದಾರೆ.

ಎಲ್ಲದರಲ್ಲೂ ಲಾಜಿಕ್​ ಹುಡುಕುವಂತಹ ಫಿಸಿಕ್ಸ್​ ಟೀಚರ್​ ಒಬ್ಬನು ಚಿತ್ರರಂಗಕ್ಕೆ ಬಂದು ಹೇಗೆ ಹೀರೋ ಆಗುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಾರ್ಥಕ್​ ಅವರಿಗೆ ಹೀರೋ ಆಗಿ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಹಲವು ಶೇಡ್​ ಇರುವ ಪಾತ್ರವನ್ನು ನಿಭಾಯಿಸುವ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಇದೆ.

ಈ ಸಿನಿಮಾದಲ್ಲಿ ಏನೆಲ್ಲ ಇದೆ?

‘ಮನೆಯಲ್ಲಿ ಕುಳಿತುಕೊಂಡು ವಿಮರ್ಶೆ ಹೇಳೋದು ಸುಲಭ. ಆದರೆ ಹೊಸಬರ ಚಿತ್ರವನ್ನು ನೋಡೋಕೆ ಚಿತ್ರಮಂದಿರಕ್ಕೆ ಬರೋರು ಕಡಿಮೆ ಆಗಿದ್ದಾರೆ. ನಮ್ಮದು ಒಳ್ಳೆಯ ಸಿನಿಮಾ. ಡಿಫರೆಂಟ್​ ಆದ ಒಂದು ಲವ್​ ಸ್ಟೋರಿ ಇದೆ. ಚಿತ್ರರಂಗದಲ್ಲಿನ ಅನೇಕ ವಿಚಾರಗಳು ಈ ಸಿನಿಮಾದಲ್ಲಿ ಇವೆ. ಒಬ್ಬ ಹೀರೋ ಬದುಕಿನಲ್ಲಿ ಏನೆಲ್ಲ ಆಗುತ್ತದೆ ಎಂಬುದನ್ನು ತೋರಿಸಿದ್ದೇವೆ. ಮನರಂಜನೆ ಜೊತೆ ಸಂದೇಶ ಕೂಡ ನೀಡಿದ್ದೇವೆ. ಎಲ್ಲವೂ ಒಂದು ಪ್ಯಾಕೇಜ್​ ರೀತಿ ಇದೆ. ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡಿ ನಿಮ್ಮ ವಿಮರ್ಶೆ ತಿಳಿಸಿ’ ಎಂದು ನಟ ಸಾರ್ಥಕ್​ ಹೇಳಿದ್ದಾರೆ.

ಇದನ್ನೂ ಓದಿ
Bholaa: ತ್ರಿಶೂಲ ಹಿಡಿದು ಬಂದ ಅಜಯ್​ ದೇವಗನ್​; ಕೌತುಕ ಮೂಡಿಸಿದೆ ‘ಭೋಲಾ’ ಚಿತ್ರದ ಪೋಸ್ಟರ್​
Kantara 2 Shooting: ‘ಕಾಂತಾರ 2’ ಆರಂಭಿಸಲು ಮಳೆಗಾಲಕ್ಕೆ ಕಾದಿರುವ ರಿಷಬ್​ ಶೆಟ್ಟಿ; ಮಾಹಿತಿ ನೀಡಿದ ವಿಜಯ್​ ಕಿರಗಂದೂರು
Emergency: ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್​
Rajamouli: ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್​’ ನಿರ್ದೇಶಕನಿಂದ ಆಹ್ವಾನ

ಇದನ್ನೂ ಓದಿ: ‘ಸೌತ್​ ಇಂಡಿಯನ್​ ಹೀರೋ’ ಬಗ್ಗೆ ನಿಮಗೆಷ್ಟು ಗೊತ್ತು? ಇವನ ಅವತಾರ ಒಂದೆರಡಲ್ಲ

‘ಸೌತ್​ ಇಂಡಿಯನ್​ ಹೀರೋ ಅಂತ ಹೇಳಿಸಿಕೊಳ್ಳೋಕೆ ಬೇರೆ ಹೀರೋಗಳು ಅನೇಕ ಸಿನಿಮಾಗಳನ್ನು ಮಾಡಬೇಕು. ಆದರೆ ನನಗೆ ಮೊದಲ ಚಿತ್ರದಲ್ಲಿ ಆ ಟೈಟಲ್​ ಸಿಕ್ಕಿದೆ’ ಎಂದು ನಗು ಚೆಲ್ಲಿದ್ದಾರೆ ಸಾರ್ಥಕ್​. ಈ ಸಿನಿಮಾದ ಫಸ್ಟ್​ಲುಕ್​ ಗಮನ ಸೆಳೆದಿತ್ತು. ಟೀಸರ್​ನಲ್ಲೂ ಖಡಕ್​ ಡೈಲಾಗ್​ ಹೈಲೈಟ್​ ಆಗಿತ್ತು. ಅದಕ್ಕೆ ಜನರಿಂದ ಸಿಕ್ಕ ಒಳ್ಳೆಯ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ.

ಫೆಬ್ರವರಿಯಲ್ಲಿ ‘ಸೌತ್​ ಇಂಡಿಯನ್​ ಹೀರೋ’ ಸಿನಿಮಾ ಬಿಡುಗಡೆ ಆಗಲಿದೆ. ಯಾವುದೇ ಒಬ್ಬ ಹೀರೋವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿಲ್ಲ. ಯಾವ ಡೈಲಾಗ್​ ಮೂಲಕವೂ ಯಾರನ್ನೂ ಟಾರ್ಗೆಟ್​ ಮಾಡುವ ಉದ್ದೇಶ ತಮಗಿಲ್ಲ ಎಂದು ಸಾರ್ಥಕ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:09 pm, Sat, 21 January 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us