ಇನ್ನೂ ಗಂಭೀರ ಸ್ಥಿತಿಯಲ್ಲಿ ಖ್ಯಾತ ಗಾಯಕ SP ಬಾಲಸುಬ್ರಮಣ್ಯಂ ಆರೋಗ್ಯ

|

Updated on: Aug 20, 2020 | 10:17 PM

ಚೆನ್ನೈ: ಕೊರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌ ಪಿ ಬಾಲಸುಬ್ರಮಣಂ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ. ಈ ಸಂಬಂಧ ಇವತ್ತು ಎ‌ಂಜಿಎಂ ಆಸ್ಪತ್ರೆ ಎಸ್‌ಪಿ ಬಾಲಸುಬ್ರಮಣ್ಯಂ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಹಿಂದಿನ ರೀತಿಯಲ್ಲೇ ಎಸ್‌ಪಿಬಿ ಅವರ ಕ್ರಿಟಿಕಲ್ ಕಂಡಿಷನ್ ಮುಂದುವರಿದಿದೆ. ವೆಂಟಿಲೆಟರ್ ಮತ್ತು ಎಕ್ಮೋ ಮಷಿನ್ ಸಪೋರ್ಟ್ ನಿಂದ ಐಸಿಯುನಲ್ಲಿದ್ದಾರೆ. ನುರಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ ಎಂದು ಹೆಲ್ತ್‌ […]

ಇನ್ನೂ ಗಂಭೀರ ಸ್ಥಿತಿಯಲ್ಲಿ ಖ್ಯಾತ ಗಾಯಕ SP ಬಾಲಸುಬ್ರಮಣ್ಯಂ ಆರೋಗ್ಯ
Follow us on

ಚೆನ್ನೈ: ಕೊರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌ ಪಿ ಬಾಲಸುಬ್ರಮಣಂ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರಿದಿದೆ.

ಈ ಸಂಬಂಧ ಇವತ್ತು ಎ‌ಂಜಿಎಂ ಆಸ್ಪತ್ರೆ ಎಸ್‌ಪಿ ಬಾಲಸುಬ್ರಮಣ್ಯಂ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಹಿಂದಿನ ರೀತಿಯಲ್ಲೇ ಎಸ್‌ಪಿಬಿ ಅವರ ಕ್ರಿಟಿಕಲ್ ಕಂಡಿಷನ್ ಮುಂದುವರಿದಿದೆ. ವೆಂಟಿಲೆಟರ್ ಮತ್ತು ಎಕ್ಮೋ ಮಷಿನ್ ಸಪೋರ್ಟ್ ನಿಂದ ಐಸಿಯುನಲ್ಲಿದ್ದಾರೆ. ನುರಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ ಎಂದು ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಈ ನಡುವೆ ಹಲವಾರು ತಮಿಳುನಾಡಿನ ಕಲಾವಿದರು ಗಾಯಕ ಎಸ್‌ಪಿಬಿ ಅವರು ಶೀಘ್ರ ಗುಣಮುಖವಾಗಲಿ ಎಂದು ಚೆನ್ನೈನಲ್ಲಿ ಸಂಜೆ ವಿಶೇಷ ಗಾನ ಪ್ರಾರ್ಥನೆ ಕಾರ್ಯಕ್ರಮವನ್ನು ಕೂಡಾ ಮಾಡಿದ್ದಾರೆ.