ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..

ಸನ್ನಿ ಲಿಯೋನ್​ ಕೂಡ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ವೀರ ಮಹಾದೇವಿ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.

ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..
ಸನ್ನಿ ಲಿಯೋನ್​
Edited By:

Updated on: Mar 24, 2021 | 4:48 PM

ಬಾಲಿವುಡ್​ನಲ್ಲಿ ಮಿಂಚಿರುವ ನಟಿ ಸನ್ನಿ ಲಿಯೋನ್​ ಕನ್ನಡದ ಲವ್​ ಯು ಆಲಿಯಾ ಹಾಗೂ ಡಿಕೆ ಸಿನಿಮಾದ ಹಾಡುಗಳಿಗೆ ಸೊಂಟ ಬಳುಕಿಸಿದ್ದಾರೆ. ನಂತರ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಈಗ ಅವರು ಮತ್ತೆ ಕನ್ನಡದ ಹಾಡಿಗೆ ಹೆಜ್ಜೆ ಹಾಕೋಕೆ ರೆಡಿ ಆಗಿದ್ದಾರೆ. ಅಷ್ಟಕ್ಕೂ ಸನ್ನಿ ಕನ್ನಡಕ್ಕೆ ಮತ್ತೆ ಬರೋಕೆ ಕಾರಣ ಏನು? ಯಾವುದು ಆ ಸಿನಿಮಾ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಸಚಿನ್​ ಧನಪಾಲ್- ನಟಿ ಅದಿತಿ ಪ್ರಭುದೇವ ನಟಿಸುತ್ತಿರುವ ‘ಚಾಂಪಿಯನ್’​ ಸಿನಿಮಾದಲ್ಲಿ ಸನ್ನಿ ಲಿಯೋನ್​ ಐಟಮ್​ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಹಾಡಿನ ಶೂಟಿಂಗ್​ ನಡೆಯುತ್ತಿದೆ. ಇನ್ನು, ಈ ಸಿನಿಮಾದಲ್ಲಿ ಸನ್ನಿ ಲಿಯೋನ್​ ನಟಿಸುತ್ತಿರುವ ವಿಚಾರವನ್ನು ನಟಿ ಅದಿತಿ ಪ್ರಭುದೇವ ಕೂಡ ಖಚಿತಪಡಿಸಿದ್ದಾರೆ.

ಈ ಚಿತ್ರ ಕ್ರೀಡೆಯ ಸುತ್ತ ಹೆಣೆದಿರುವ ಚಿತ್ರ. ಈ ಹಾಡಿನಲ್ಲಿ ಬರುವ ಐಟಂ ಸಾಂಗ್​ನಲ್ಲಿ ಸನ್ನಿ ಲಿಯೋನ್​ ಸಖತ್​ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಸಿನಿಮಾದ ಶೂಟಿಂಗ್​ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ಸಚಿನ್​ ಧನಪಾಲ್​ ಚಿತ್ರದ ನಾಯಕ. ಅದಿತಿ ಪ್ರಭುದೇವ ಚಿತ್ರದ ನಾಯಕಿ. ಈ ಸಿನಿಮಾ ಇದೇ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಸದ್ಯ, ಈ ಸಿನಿಮಾ ಬಹಳಷ್ಟು ನಿರೀಕ್ಷೆ ಮೂಡಿಸಿದೆ.

ನಟಿ ಅದಿತಿ ಪ್ರಭುದೇವ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಕೈಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿವೆ. ಗಣೇಶ್​ ನಟನೆಯ ತ್ರಿಬಲ್​ ರೈಡಿಂಗ್​ ಚಿತ್ರಕ್ಕೆ ಅದಿತಿ ನಾಯಕಿ. ಇದಲ್ಲದೆ, ತೋತಾಪುರಿ, ತೋತಾಪುರಿ 2, ಓಲ್ಡ್​ ಮಾಂಕ್​, ಒಂಭತ್ತನೆ ದಿಕ್ಕು, ದಿಲ್​ಮಾರ್​ ಮೊದಲಾದ ಸಿನಿಮಾಗಳಲ್ಲಿ ಅದಿತಿ ನಟಿಸುತ್ತಿದ್ದಾರೆ.

ಸನ್ನಿ ಲಿಯೋನ್​ ಕೂಡ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ವೀರ ಮಹಾದೇವಿ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಶೂಟಿಂಗ್​ ಕೂಡ ಸಾಗುತ್ತಿದ್ದು, ಈ ವರ್ಷ ಸಿನಿಮಾ ರಿಲೀಸ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬಿಹಾರದ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ!

Published On - 4:45 pm, Wed, 24 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us