ಧೋನಿ ಪಾತ್ರಧಾರಿ ಸುಶಾಂತ್​, ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಶಿಕ್ಷಣ ತೊರೆಯಲು ಕಾರಣ ಆಕೆ..?!

| Updated By: ಆಯೇಷಾ ಬಾನು

Updated on: Jun 15, 2020 | 11:09 AM

ಹಿಂದಿ​ ಚಿತ್ರರಂಗಕ್ಕೆ 2020ನೇ ವರ್ಷ ಬಹಳ ಆಘಾತಕಾರಿಯಾಗಿ ಪರಿಣಮಿಸಿದೆ. ಇರ್ಫಾನ್​ ಖಾನ್​, ರಿಷಿ ಕಪೂರ್​ ಮತ್ತು ವಾಜಿದ್​ ಖಾನ್​ರಂಥ ಘಟಾನುಘಟಿಗಳನ್ನು ಕಳೆದುಕೊಂಡ ಬಾಲಿವುಡ್​ ಈಗ ಮತ್ತೊಬ್ಬ ಪ್ರತಿಭಾವಂತ ಕಲಾವಿದ ಸುಶಾಂತ್​ ಸಿಂಗ್​ ರಜಪೂತ್​ರನ್ನು ಕಳೆದುಕೊಂಡಿದೆ. ಇತರೆ ಅಗಲಿದ ಚಿತ್ರರಂಗದ ಗಣ್ಯರಂತೆ ಸುಶಾಂತ್​ ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಛಾಪು ಮೂಡಿಸಿಬಿಟ್ಟಿದ್ದರು. ಸ್ಟ್ಯಾನ್​ಫರ್ಡ್​ ವಿದ್ಯಾಭ್ಯಾಸದ ಅವಕಾಶ ತೊರೆಯಲು ಕಾರಣ ಆ ಒಂದು ಆಸೆ..! ಭಾರತೀಯ ಕ್ರಿಕೆಟ್​ ರಂಗದ ದೈತ್ಯ ಪ್ರತಿಭೆ ಧೋನಿ ಅವರ ಜೀವನಾಧಾರಿತ ಸಿನಿಮಾದಲ್ಲಿ ತಮ್ಮ […]

ಧೋನಿ ಪಾತ್ರಧಾರಿ ಸುಶಾಂತ್​, ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಶಿಕ್ಷಣ ತೊರೆಯಲು ಕಾರಣ ಆಕೆ..?!
Follow us on

ಹಿಂದಿ​ ಚಿತ್ರರಂಗಕ್ಕೆ 2020ನೇ ವರ್ಷ ಬಹಳ ಆಘಾತಕಾರಿಯಾಗಿ ಪರಿಣಮಿಸಿದೆ. ಇರ್ಫಾನ್​ ಖಾನ್​, ರಿಷಿ ಕಪೂರ್​ ಮತ್ತು ವಾಜಿದ್​ ಖಾನ್​ರಂಥ ಘಟಾನುಘಟಿಗಳನ್ನು ಕಳೆದುಕೊಂಡ ಬಾಲಿವುಡ್​ ಈಗ ಮತ್ತೊಬ್ಬ ಪ್ರತಿಭಾವಂತ ಕಲಾವಿದ ಸುಶಾಂತ್​ ಸಿಂಗ್​ ರಜಪೂತ್​ರನ್ನು ಕಳೆದುಕೊಂಡಿದೆ. ಇತರೆ ಅಗಲಿದ ಚಿತ್ರರಂಗದ ಗಣ್ಯರಂತೆ ಸುಶಾಂತ್​ ಕೂಡ ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಛಾಪು ಮೂಡಿಸಿಬಿಟ್ಟಿದ್ದರು.

ಸ್ಟ್ಯಾನ್​ಫರ್ಡ್​ ವಿದ್ಯಾಭ್ಯಾಸದ ಅವಕಾಶ ತೊರೆಯಲು ಕಾರಣ ಆ ಒಂದು ಆಸೆ..!
ಭಾರತೀಯ ಕ್ರಿಕೆಟ್​ ರಂಗದ ದೈತ್ಯ ಪ್ರತಿಭೆ ಧೋನಿ ಅವರ ಜೀವನಾಧಾರಿತ ಸಿನಿಮಾದಲ್ಲಿ ತಮ್ಮ ಮನೋಜ್ಞ ನಟನೆಯಿಂದ ಇಡೀ ದೇಶದಲ್ಲೇ ಗುರುತಿಸಿಕೊಂಡಿದ್ದ ಈ ನಟ ಮೂಲತ: ಬಣ್ಣದ ಲೋಕದ ಬಗ್ಗೆ ಯಾವುದೇ ಆಸಕ್ತಿ ಹೊಂದಿರಲಿಲ್ಲ ಎಂದು ಹೇಳಿದರೆ ಯಾರೂ ಸಹ ನಂಬೋದಿಲ್ಲ.

ಚೆನ್ನಾಗಿ ಓದಿ ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಹಂಬಲವನ್ನು ಸುಶಾಂತ್​ ಹೊಂದಿದ್ದರು. ಅವರ ಆಸೆಯಂತೆ ಸ್ಟ್ಯಾನ್​ಫರ್ಡ್​ ವಿಶ್ವವಿದ್ಯಾಲಯದಿಂದ ಇವರಿಗೆ ಸ್ಕಾಲರ್​ಶಿಪ್​ ಸಹ ದೊರೆತಿತ್ತು. ಆದರೆ ಅಲ್ಲೇ ನೋಡಿ ಇವರ ಕಥೆಯಲ್ಲಿ ಟ್ವಿಸ್ಟ್​ ಹುಟ್ಟಿದ್ದು.

ಸುಂದರ ಹುಡುಗಿಯ ಹಂಬಲದಲ್ಲಿ ವಿದ್ಯಾಭ್ಯಾಸ ಬಿಟ್ಟರು!
ಅದೇಕೋ ಏನೋ ತನ್ನ ಜೀವನದಲ್ಲಿ ಯಾವುದಾದರೂ ಒಂದು ಸುಂದರ ಹುಡುಗಿಯೊಂದಿಗೆ ಲವ್ವಲ್ಲಿ ಬೀಳುವ ಹಂಬಲ ತನ್ನಲ್ಲಿ ಹುಟ್ಟಿತ್ತು ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಸುಶಾಂತ್​ ಹೇಳಿಕೊಂಡಿದ್ದರು. ಆ ಒಂದು ಆಸೆಯಿಂದಾಗಿ, ಸುಶಾಂತ್​ಗೆ ಸಿಕ್ಕಿದ್ದ ಸ್ಕಾಲರ್​ಶಿಪ್ ತೊರೆದು, ಕನಸಿನ ನಗರಿ ಮುಂಬೈನತ್ತ ಮುಖ ಮಾಡಲು ಪ್ರೇರಣೆಯಾಯಿಗಿತ್ತಂತೆ.

ಬಣ್ಣದ ಲೋಕದತ್ತ ಸುಶಾಂತ್​ ಪಯಣ
ಮುಂಬೈಗೆ ಮೊಟ್ಟಮೊದಲ ಬಾರಿ ಬಂದ ಸುಶಾಂತ್​, ನಗರದ ವರ್ಸೋವಾದಲ್ಲಿ 6 ಜನ ಸ್ನೇಹಿತರೊಂದಿಗೆ ಒಂದು ರೂಮ್​ ಶೇರ್​ ಮಾಡಿದ್ರು. ಅಲ್ಲಿಂದಲೇ ಶುರುವಾಗಿದ್ದು ಅವರ ನಟನಾ ಪಯಣ.  ಹಲವು ಸತತ ಪ್ರಯತ್ನಗಳ ನಂತರ ಪ್ರತಿಷ್ಠಿತ ಹಿಂದಿ ಧಾರಾವಾಹಿ ನಿರ್ಮಾಪಕಿ ಏಕ್ತಾ ಕಪೂರ್​ ನಿರ್ಮಾಣದ ‘ಪವಿತ್ರ ರಿಷ್ತಾ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ರು.

ಕೆಲವು ಧಾರಾವಾಹಿಗಳ ನಂತ್ರ ಬೆಳ್ಳಿ ಪರದೆಯ ಮೇಲೆ ಮಿಂಚ ಬೇಕು ಎಂಬ ಆಸೆ ಹೊತ್ತ ಸುಶಾಂತ್​ ‘ಕಾಯ್​ ಪೋಚೆ’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳ ನಂತ್ರ ನಟಿಸಿದ ಎಂ.ಎಸ್.​ ಧೋನಿ (ದಿ ಅನ್​ಟೋಲ್ಡ್​ ಸ್ಟೋರಿ) ಮೂಲಕ ಖ್ಯಾತಿ ಪಡೆದ ಸುಶಾಂತ್​ರ ನಾಗಾಲೋಟವನ್ನ ತಡೆಯುವವರೇ ಇರಲಿಲ್ಲ.

‘ಶಾರೂಖ್​ ಖಾನ್​ರ DDLJ ನನಗೆ ಪ್ರೇರಣೆ’
ಬಾಲಿವುಡ್​ ದಿಗ್ಗಜ ಶಾರೂಖ್​ ಖಾನ್​ರ​ ದೊಡ್ಡ ಅಭಿಮಾನಿಯಾಗಿದ್ದ ಸುಶಾಂತ್​ ತಮ್ಮ ಜಿವನದಲ್ಲಿ ಅವರ ಸಿನಿಮಾವೊಂದು ಪ್ರೇರಣೆ ಎಂದು ಒಮ್ಮೆ ಹೇಳಿದ್ರು. ಶಾರೂಖ್​ ನಟನೆಯ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಚಿತ್ರವನ್ನು ತಮ್ಮ ಬಾಲ್ಯದಲ್ಲಿ ನೋಡಿದ್ದ ಸುಶಾಂತ್​ಗೆ ಜೀವನದ ದಿಕ್ಕೇ ಬದಲಾಗಿ ಹೋಯ್ತಂತೆ.

ದೇಶದ ಸಂಪ್ರದಾಯಕ್ಕೂ ಗೌರವ ಕೊಡುತ್ತಾ ತನ್ನತನವನ್ನು ಬಿಟ್ಟುಕೊಡದೆ ಬಾಳುವುದನ್ನು ಶಾರೂಖ್​ರ​ ಪಾತ್ರ ಹೇಳಿಕೊಟ್ಟಿತಂತೆ. ಹಲವು ಬಾರಿ ಕನ್ನಡಿಯ ಮುಂದೆ ಶಾರೂಖ್​ ಸಿನಿಮಾದ ಹಾಡಿನ ನಕಲು ಸಹ ಮಾಡುತ್ತಿದ್ರು ಎಂದು ಹೇಳಿಕೊಂಡಿದ್ದರು.

ಅದೇನೇ ಇರಲಿ, ಯಶಸ್ಸಿನ ಹಾದಿಯಲ್ಲಿ ಇನ್ನೂ ಬಹಳಷ್ಟು ದೂರ ಪಯಣಿಸಬೇಕಿದ್ದ ಈ ನಟ ಇಷ್ಟು ಬೇಗ ಇಹಲೋಕ ತ್ಯಜಿಸಲು ಕಾರಣವೇನು ಎಂದು ಗೊತ್ತಾಗಿಲ್ಲ. ಒಟ್ಟಾರೆ, ಮುಂಬರುವ ದಿನಗಳಲ್ಲಿ ಆ್ಯಂಕ್ಟಿಂಗ್​ನಲ್ಲಿ  ಹಲವು ಮೈಲಿಗಲ್ಲನ್ನು ದಾಟಬೇಕಿದ್ದ ನಟ ಇಂದು ತನ್ನ ಬದುಕಿನ ಕೊನೆಯ ಅಧ್ಯಾಯವನ್ನು ಮುಗಿಸಿ ವಿದಾಯ ಹೇಳಿದ್ದಾರೆ.

Published On - 6:44 pm, Sun, 14 June 20