ಹೊಸ ಗೀತರಚನೆಕಾರರಿಗೆ ವಿ. ಮನೋಹರ್ ಆಫರ್; ನೀವು ಸಾಹಿತ್ಯ ಬರೆಯಬಹುದು
ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಹೊಸ ಗೀತರಚನೆಕಾರರಿಗೆ ಸುವರ್ಣ ಅವಕಾಶ ನೀಡಿದ್ದಾರೆ. ತಾವು ಸಿದ್ಧಪಡಿಸಿದ ಟ್ಯೂನ್‌ಗೆ ಸೂಕ್ತ ಸಾಹಿತ್ಯ ಬರೆದು ಕಳುಹಿಸುವಂತೆ ಕೋರಿದ್ದಾರೆ. ಆಯ್ಕೆಯಾಗುವ ಅತ್ಯುತ್ತಮ ಸಾಹಿತ್ಯವನ್ನು ತಮ್ಮ ಮುಂಬರುವ ಆಲ್ಬಮ್‌ನಲ್ಲಿ ಬಳಸಿ, ಬರಹಗಾರರ ಹೆಸರು ಪ್ರಕಟಿಸುವುದಾಗಿ ಪ್ರಕಟಿಸಿದ್ದಾರೆ. ಹೊಸಬರಿಗೆ ಇದೊಂದು ಅಪರೂಪದ ವೇದಿಕೆಯಾಗಿದೆ.

ಮುಖ್ಯಾಂಶಗಳು
- ಹೊಸಬರಿಗೆ ವಿ. ಮನೋಹರ್ ಆಫರ್
- ಸಾಹಿತ್ಯ ಬರೆಯುವ ಆಸಕ್ತಿ ಇದ್ದರೆ ಈಗಲೇ ಕಾಮೆಂಟ್ ಮಾಡಿ
- ಟ್ಯೂನ್‌ಗೆ ತಕ್ಕಂತೆ ಸಾಹಿತ್ಯ ರಚನೆ
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಾಹಿತ್ಯಕಾರ ವಿ. ಮನೋಹರ್ ಅವರು ಹೊಸ ಹಾಗೂ ಉದಯೋನ್ಮುಖ ಗೀತರಚನೆಕಾರರಿಗೆ ಸುವರ್ಣ ಅವಕಾಶವೊಂದನ್ನು ನೀಡಿದ್ದಾರೆ. ಉದಯೋನ್ಮುಖ ಗೀತ ಸಾಹಿತಿಗಳಿಗೆ ಮನೋಹರ್ ಅವಕಾಶ ನೀಡೋದಾಗಿ ಹೇಳಿದ್ದಾರೆ. ಟೋನ್ ಕೊಟ್ಟು, ಸಾಹಿತ್ಯ ಬರೆಯುವಂತೆ ಹೇಳಿದ್ದಾರೆ.
‘ಅನೇಕ ಜನರು ನನಗೆ ಮೆಸೇಜ್ ಹಾಗೂ ಕಾಮೆಂಟ್ಸ್ ಮೂಲಕ ನಾವು ಹಾಡು ಬರೆಯುತ್ತೇವೆ, ನಮಗೆ ಅವಕಾಶ ಕೊಡಿ ಎಂದು ಕೇಳುತ್ತಿರುತ್ತಾರೆ. ಆದರೆ ಚಿತ್ರರಂಗದಲ್ಲಿ ಸಾಹಿತ್ಯಕ್ಕೆ ಟ್ಯೂನ್ ಮಾಡುವುದಕ್ಕಿಂತ, ಈಗಾಗಲೇ ಸಂಯೋಜಿಸಿದ ಟ್ಯೂನ್ ಮತ್ತು ಅದರ ಮೀಟರ್‌ಗೆ ತಕ್ಕಂತೆ ಸಾಹಿತ್ಯ ಬರೆಯುವುದು ಮುಖ್ಯವಾಗಿರುತ್ತದೆ’ ಎಂದು ಮನೋಹರ್ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ತಾವು ಒಂದು ಹೊಸ ಟ್ಯೂನ್ ಅನ್ನು (ಪಲ್ಲವಿ ಹಾಗೂ ಚರಣ) ಸಿದ್ಧಪಡಿಸಿದ್ದು, ಹಾಡು ಬರೆಯುವ ಆಸಕ್ತಿ ಇರುವವರಿಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಆಸಕ್ತರು ಕಾಮೆಂಟ್ ಬಾಕ್ಸ್‌ನಲ್ಲಿ ‘Tune’ ಎಂದು ಕಾಮೆಂಟ್ ಮಾಡಿದರೆ, ಅವರಿಗೆ ಇಮೇಲ್ ಐಡಿ ಕಳುಹಿಸಿಕೊಡಲಾಗುವುದು. ಆ ಟ್ಯೂನ್ ಕೇಳಿದಾಗ ಮನಸ್ಸಿಗೆ ಬರುವ ಭಾವನೆಗೆ ತಕ್ಕಂತೆ ಸಾಹಿತ್ಯ ಬರೆದು ಇಮೇಲ್ ಮೂಲಕ ಕಳುಹಿಸಬೇಕಾಗುತ್ತದೆ.
View this post on Instagram
ಆಯ್ಕೆಯಾಗುವ ಅತ್ಯುತ್ತಮ ಸಾಹಿತ್ಯವನ್ನು ತಮ್ಮ ಮುಂಬರುವ ಸಂಗೀತ ಆಲ್ಬಮ್‌ನಲ್ಲಿ ಬಳಸಿಕೊಳ್ಳುವುದಾಗಿ ಹಾಗೂ ಗೀತರಚನೆಕಾರರ ಹೆಸರನ್ನು ಪ್ರಕಟಿಸುವುದಾಗಿ ವಿ. ಮನೋಹರ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ ‘ಪ್ರೇಮದ ಊರಲಿ’; ಮಂಗಳವಾರದ ಗಳಿಕೆ ಇಷ್ಟೊಂದಾ?
ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಹೊಸ ಸಾಹಿತ್ಯಕಾರರನ್ನು ಪ್ರೋತ್ಸಾಹಿಸಲು ಮುಂದಾಗಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಹೊಸ ಬರಹಗಾರರಿಗೆ ಒಂದು ಅತ್ಯುತ್ತಮ ಅವಕಾಶವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭೆ ತೋರಿಸಲು ಕಾಯುತ್ತಿರುವ ಹೊಸಬರಿಗೆ ಇದೊಂದು ಸುವರ್ಣ ವೇದಿಕೆಯಾಗಿದ್ದು, ಚಿತ್ರರಂಗದ ಹಿರಿಯ ದಿಗ್ಗಜರ ಜೊತೆ ಕೆಲಸ ಮಾಡುವ ಕನಸಿಗೆ ಇದು ಹಾದಿ ಮಾಡಿಕೊಡಲಿದೆ. ಈ ಅಪರೂಪದ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ತಮ್ಮಲ್ಲಿರುವ ಸಾಹಿತ್ಯ ಕೌಶಲವನ್ನು ಪ್ರದರ್ಶಿಸಲು ಆಸಕ್ತ ಬರಹಗಾರರಿಗೆ ಇದು ಸೂಕ್ತ ಸಮಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




