ಚೆನ್ನೈ: ಅಮ್ಮನಿನ್ನ ತೋಳಿನಲ್ಲಿ ಕಂದ ನಾನು… ಸೇರಿ ಕನ್ನಡದಲ್ಲಿ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ಆರ್. ರತ್ನ (97) ಇಂದು ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಆರ್. ರತ್ನ ಬಳಲುತಿದ್ದರು. ಇಂದು ಬೆಳಗ್ಗೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ‘ಹೋಗದಿರಿ ಸಹೋದರರೇ…’ ‘ಜಲಲ ಜಲಲ ಜಲಧಾರೆ…’, ‘ಅಮ್ಮನಿನ್ನ ತೋಳಿನಲ್ಲಿ ಕಂದ ನಾನು…’ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳನ್ನ ರತ್ನ ನೀಡಿದ್ದಾರೆ.
ರತ್ನ ಅವರಿಗೆ ಕನ್ನಡ ಹಾಗೂ ಕರ್ನಾಟಕದ ಮೇಲೆ ಸಾಕಷ್ಟು ಅಭಿಮಾನ ಇತ್ತು. ಹೀಗಾಗಿ, ಕರ್ನಾಟಕದಲ್ಲೇ ಅಂತ್ಯಕ್ರಿಯೆ ಆಗಬೇಕು ಅನ್ನೋದು ಅವರ ಕೊನೆ ಆಸೆಯಾಗಿತ್ತು. ಅವರ ಪುತ್ರ ವೆಂಕಟ ರಾಮಯ್ಯ ಅವರಿಂದ ನಾಳೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Published On - 5:01 pm, Sat, 9 January 21