ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸ್ಪೆಷಲ್ ವೀಕೆಂಡ್!
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ರನ್ನು ಫೇಸ್ಬುಕ್ ಲೈವ್ನಲ್ಲಿ ನೋಡಲು ಅಭಿಮಾನಿಗಳೆಲ್ಲಾ ಕಾತುರದಿಂದ ಕಾಯ್ತಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ದರ್ಶನ್ ಅಭಿಮಾನಿಗಳಲ್ಲಿರುವ ಪ್ರಶ್ನೆಗಳಿಗೆ ಬ್ರೇಕ್ ಬೀಳುತ್ತಾ?
ಬೆಂಗಳೂರು: ಇಂದು ಬೆಳಿಗ್ಗೆ 11 ಗಂಟೆಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ಬುಕ್ ಲೈವ್ಗೆ ಬರ್ತಿದ್ದಾರಂತೆ. ಈ ನಿಟ್ಟಿನಲ್ಲಿ ಈ ವರ್ಷದ ಫೆಬ್ರವರಿ 16ಕ್ಕೆ ದರ್ಶನ್ ಬರ್ತ್ಡೇ ಸೆಲೆಬ್ರೇಶನ್ಗೆ ಬ್ರೇಕ್ ಬೀಳುತ್ತಾ ಎಂಬೆಲ್ಲಾ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ.
ಯಶ್ ಬರ್ತ್ ಡೇ ನಂತರ ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈ ಹಿನ್ನೆಲೆಯಲ್ಲೇ ದರ್ಶನ್ ಫೇಸ್ಬುಕ್ ಲೈವ್ ಬರ್ತಿದ್ದು ಅಭಿಮಾನಿಗಳ ಗೊಂದಲಕ್ಕೆ ಇಂದು ಬ್ರೇಕ್ ಬೀಳಲಿದೆ.
ತಮ್ಮ ಬರ್ತ್ ಡೇ ಕುರಿತು ದರ್ಶನ್ ಹೇಳ್ತಾರಾ? ಇಲ್ಲವೇ ರಾಬರ್ಟ್ ಸಿನಿಮಾದ ರಿಲೀಸ್ ದಿನಾಂಕ ಹೇಳೋಕೆ ದರ್ಶನ್ ರೆಡಿಯಾಗಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳಿಗೆ ಎದುರಾಗಿದೆ. ಇದರಿಂದ, ಅಭಿಮಾನಿಗಳೆಲ್ಲ ದರ್ಶನ್ರನ್ನು ಲೈವ್ನಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
Published On - 8:44 am, Sun, 10 January 21