ಮುಂಬೈ: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಇಂದು ಬೆಳಗಿನ ಜಾವ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಮ್ಮ ಸಹೋದರ ಸಾಜಿದ್ ಜೊತೆ ಸೇರಿ ಅನೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಸಾಜಿದ್-ವಾಜಿದ್ ಹೆಸರಿನಿಂದ ಈ ಸಹೋದರರು ಖ್ಯಾತರಾಗಿದ್ದರು.
ವಾಜಿದ್ ಖಾನ್ ಅವರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿದ್ದವು. ಕೆಲ ದಿನಗಳಿಂದ ವೆಂಟಿಲೇಟರ್ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇವರ ಆರೋಗ್ಯ ಗಂಭೀರವಾಗಿತ್ತು. ಕೆಲವು ತಿಂಗಳ ಹಿಂದೆಯಷ್ಟೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ಗೆ ಬಳಗಾಗಿದ್ದರು. ಅಲ್ಲದೆ ಇವರಿಗೆ ಕೊರೊನಾ ಸೊಂಕು ತಗುಲಿದೆ ಎಂದು ಮುಂಬೈನ ಖಾಸಗಿ ಆಸ್ಪತ್ರೆ ಶಂಕೆ ವ್ಯಕ್ತಪಡಿಸಿತ್ತು. ಸಾಜಿದ್ ನಿಧನಕ್ಕೆ ಗಾಯಕ ಸೋನು ಸೂದ್, ಪ್ರಿಯಾಂಕ ಚೋಪ್ರಾ, ಪ್ರೀತಿ ಜಿಂಟಾ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
Terrible news. The one thing I will always remember is Wajid bhai's laugh. Always smiling. Gone too soon. My condolences to his family and everyone grieving. Rest in peace my friend. You are in my thoughts and prayers.@wajidkhan7
— PRIYANKA (@priyankachopra) May 31, 2020
1998 ರಲ್ಲಿ ಬಿಡುಗಡೆಗೊಂಡ ಸಲ್ಮಾನ್ ಖಾನ್ ಅಭಿನಯದ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಸಿನಿಮಾದ ಮೂಲಕ ವಾಜಿದ್ ಖಾನ್ ಬಾಲಿವುಡ್ ಪ್ರವೇಶಿಸಿದರು. ಚೋರಿ ಚೋರಿ , ಹಲೋ ಬ್ರದರ್, ಮುಜ್ಸೆ ಶಾದಿ ಕರೋಗಿ, ಪಾರ್ಟ್ನರ್, ವಾಂಟೆಡ್, ದಬಾಂಗ್ ಸಲ್ಮಾನ್ ಖಾನ್ ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದರು. ಸಾಜಿದ್-ವಾಜಿದ್ ಬ್ರದರ್ಸ್ ಕಾಂಬಿನೇಷನ್ ನಿಂದ ಬಾಲಿವುಡ್ ಗೆ ಹಲವು ಸೂಪರ್ ಹಿಟ್ ಹಾಡುಗಳು ಲಭಿಸಿವೆ.
Published On - 10:05 am, Mon, 1 June 20