Bhajarangi 2: ಶಿವಣ್ಣಗೆ ಇನ್ನೂ 35 ಎಂದ ಫ್ಯಾನ್ಸ್; ಭಜರಂಗಿ 2 ವೀಕ್ಷಿಸಿದ ಅಭಿಮಾನಿಗಳ ರಿಯಾಕ್ಷನ್ ಇಲ್ಲಿದೆ
Bhajarangi 2 fans reaction: ಭಜರಂಗಿ 2 ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎಂದಿದ್ಧಾರೆ. ಇಂತಹ ಚಿತ್ರವನ್ನು ಕನ್ನಡದಲ್ಲಿ ನೋಡಿರಲೇ ಇಲ್ಲ ಎನ್ನುವುದು ಅಭಿಮಾನಿಗಳ ಮಾತು.
ರಾಜ್ಯದಲ್ಲಿ ಭಜರಂಗಿ 2 ಚಿತ್ರದ ಫ್ಯಾನ್ಸ್ ಶೋ ಹೌಸ್ಫುಲ್ ಆಗಿತ್ತು. ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ವಿಶೇಷ ಶೋ ಏರ್ಪಡಿಸಲಾಗಿತ್ತು. ಇದೀಗ ಅಭಿಮಾನಿಗಳು ಚಿತ್ರಮಂದಿರದಿಂದ ಹೊರಬಂದಿದ್ದು, ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ಧಾರೆ. ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್ ಮೋಡಿ ಮಾಡಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ತಾಂತ್ರಿಕ ಗುಣಮಟ್ಟ ಹಾಗೂ ಹಾಡುಗಳು ಸಖತ್ತಾಗಿವೆ ಎನ್ನುವುದು ಕೆಲವು ಅಭಿಮಾನಿಗಳ ಅಭಿಪ್ರಾಯ. ಅಲ್ಲದೇ ಅಭಿಮಾನಿಗಳೋಉ ವಿಶೇಷವಾಗಿ ಶೃತಿ ಹಾಗೂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡ ಚೆಲುವ ರಾಜ್ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಇನ್ನೂ 35, ಅವರಿಗೆ ವಯಸ್ಸೇ ಆಗಲ್ಲ ಎಂದು ಅಭಿಮಾನಿಗಳು ಶಿವಣ್ಣ ಅಭಿನಯವನ್ನು ಹೊಗಳಿದ್ದಾರೆ.
ಇದನ್ನೂ ಓದಿ:
Bhajarangi 2: ಶಿವಣ್ಣನ ‘ಭಜರಂಗಿ 2’ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್; ಇಲ್ಲಿದೆ ಫೋಟೋ ಗ್ಯಾಲರಿ

