ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಆದ ನಂತರ ಸಿನಿಮಾದ ಹವಾ ಹೆಚ್ಚಿದೆ. ಟೀಸರ್ ನೋಡಿದವರು ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ತುದಿಗಾಲಿನಲ್ಲಿ ನಿಂತಿದ್ದರು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶಕ ಪ್ರಶಾಂತ್ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ಕೆಜಿಎಫ್-2 ಜುಲೈ 16ರಂದು ರಿಲೀಸ್ ಆಗಲಿದೆ. ಈ ಮೊದಲು ಚಿತ್ರಮಂದಿರದಲ್ಲಿ ಶೇ.50 ಆಸನಗಳಿಗೆ ಮಾತ್ರ ಅವಕಾಶ ಇತ್ತು. ಆದರೆ, ಈಗ ಈ ನಿಯಮವನ್ನು ಕೇಂದ್ರ ಸರ್ಕಾರ ಸಡಿಲ ಮಾಡಿದೆ. ಜುಲೈ ವೇಳೆಗೆ ಶೇ. 100 ಆಸನ ವ್ಯವಸ್ಥೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಇದು ಕೆಜಿಎಫ್ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ.
#KGFChapter2 Worldwide Theatrical Release On July 16th, 2021.#KGFChapter2onJuly16@TheNameIsYash @prashanth_neel @VKiragandur @hombalefilms @duttsanjay @TandonRaveena @SrinidhiShetty7 @prakashraaj @BasrurRavi @bhuvangowda84 @excelmovies @AAFilmsIndia @VaaraahiCC @PrithvirajProd pic.twitter.com/fFIEojSpmQ
— Prashanth Neel (@prashanth_neel) January 29, 2021
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೆಜಿಎಫ್-2 ದಸರಾ ಪ್ರಯುಕ್ತ ಕಳೆದ ಅಕ್ಟೋಬರ್ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಸೊಂಕು ಕಾಣಿಸಿಕೊಂಡಿದ್ದರಿಂದ ಅದು ಸಾಧ್ಯವಾಗಿರಲ್ಲ. ಈಗ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದ್ದು, ಸಿನಿ ಪ್ರಿಯರು ಸಖತ್ ಖುಷಿ ಆಗಿದ್ದಾರೆ. ಒಂದೇ ಬಾರಿಗೆ ಐದು ಭಾಷೆಗಳಲ್ಲಿ ಕೆಜಿಎಫ್-2 ರಿಲೀಸ್ ಆಗ್ತಿರೋದು ವಿಶೇಷ.
https://twitter.com/hombalefilms/status/1355139129382735873/photo/1
ಕೆಜಿಎಫ್ ಚಾಪ್ಟರ್-2ನಲ್ಲಿ ಯಶ್ ಲೀಡ್ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಖಳನಾಗಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಹಿಂದಿ ನಟಿ ರವೀನಾ ಟಂಡನ್ ಈ ಚಿತ್ರದಲ್ಲಿ ರಾಜಕಾರಣಿ ಪಾತ್ರ ಮಾಡಿದ್ದಾರೆ. ಯೂಟ್ಯೂಬ್ನಲ್ಲಿ ಕೆಜಿಎಫ್-2 ಸಿನಿಮಾ ಟೀಸರ್ ದಾಖಲೆ ವೀಕ್ಷಣೆ ಕಂಡಿದೆ.
ಕೆಜಿಎಫ್ ಚಾಪ್ಟರ್-2 ಟೀಸರ್ ಯೂಟ್ಯೂಬ್ನಿಂದ ಗಳಿಸಿದ್ದೆಷ್ಟು ಗೊತ್ತಾ?
Published On - 6:32 pm, Fri, 29 January 21