ಶಕ್ತಿಧಾಮದ ಮಕ್ಕಳಿಗೆ ಲಾಲ್ಬಾಗ್ ತೋರಿಸಿದ ಶಿವಣ್ಣ
ಶಿವರಾಜ್ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿನ ಲಾಲ್ಬಾಗ್ಗೆ ಕರೆತಂದಿದ್ದಾರೆ. ಅವರಿಗೆ ಲಾಲ್ಬಾಗ್ ತೋರಿಸಿದ್ದಾರೆ.
ಶಿವರಾಜ್ಕುಮಾರ್ (Shivarajkumar) ಅವರಿಗೆ ಶಕ್ತಿಧಾಮ ಮಕ್ಕಳ ಮೇಲೆ ಅಪಾರ ಪ್ರೀತಿ ಇದೆ. ಸಮಯ ಸಿಕ್ಕಾಗ ಅವರು ಮೈಸೂರಿಗೆ ತೆರಳಿ ಶಕ್ತಿಧಾಮದ ಮಕ್ಕಳನ್ನು ಭೇಟಿ ಮಾಡುತ್ತಾರೆ. ಇಂದು (ಜುಲೈ 29) ಶಿವರಾಜ್ಕುಮಾರ್ ಅವರು ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿನ ಲಾಲ್ಬಾಗ್ಗೆ ಕರೆತಂದಿದ್ದಾರೆ. ಅವರಿಗೆ ಲಾಲ್ಬಾಗ್ (Lalbagh) ತೋರಿಸಿದ್ದಾರೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ರಾಜ್ಕುಮಾರ್ ಅವರ ಗಾಜನೂರಿನ ಮನೆ ಸಿದ್ಧಗೊಳ್ಳಲಿದೆ. ಇದರ ಸಿದ್ಧತೆಯನ್ನೂ ಶಿವರಾಜ್ಕುಮಾರ್ ಅವರು ವೀಕ್ಷಿಸಿದರು.