Bahubali: ‘ಬಾಹುಬಲಿ’ಯ ಬಲ್ಲಾಳದೇವ ಪಾತ್ರಕ್ಕೆ ಮೊದಲ ಆಯ್ಕೆ ರಾಣಾ ದಗ್ಗುಬಾಟಿ ಅಲ್ಲ ಮತ್ಯಾರು?

|

Updated on: Aug 04, 2024 | 9:40 AM

‘ಬಾಹುಬಲಿ’ ಸಿನಿಮಾದಲ್ಲಿ ಪ್ರಭಾಸ್​ ಪಾತ್ರದಷ್ಟೆ ವಿಲನ್ ಬಲ್ಲಾಳದೇವನ ಪಾತ್ರಕ್ಕೂ ಪ್ರಶಂಸೆ ವ್ಯಕ್ತವಾಗಿತ್ತು. ಅಸಲಿಗೆ ಬಲ್ಲಾಳದೇವ ಪಾತ್ರಕ್ಕೆ ರಾಣಾ ದಗ್ಗುಬಾಟಿಗೂ ಮುಂಚೆ ಬೇರೊಬ್ಬ ನಟನನ್ನು ಹಾಕಿಕೊಳ್ಳುವ ಆಲೋಚನೆಯನ್ನು ಎಸ್​ಎಸ್ ರಾಜಮೌಳಿ ಮಾಡಿದ್ದರು. ಯಾರು ಆ ನಟ?

Bahubali: ‘ಬಾಹುಬಲಿ’ಯ ಬಲ್ಲಾಳದೇವ ಪಾತ್ರಕ್ಕೆ ಮೊದಲ ಆಯ್ಕೆ ರಾಣಾ ದಗ್ಗುಬಾಟಿ ಅಲ್ಲ ಮತ್ಯಾರು?
Follow us on

ಭಾರತೀಯ ಚಿತ್ರರಂಗದ ಇತಿಹಾಸದ ಅತ್ಯುತ್ತಮ ಸಿನಿಮಾಗಳಲ್ಲಿ ‘ಬಾಹುಬಲಿ’ಯೂ ಒಂದು. ಈ ಸಿನಿಮಾ ಸರಣಿಯ ಎರಡೂ ಸಿನಿಮಾಗಳು ಹೊಸ ದಾಖಲೆಯನ್ನೇ ಬರೆದವು. ಪ್ರಭಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಇಂದಿಗೂ ಅತ್ಯಂತ ಹೆಚ್ಚು ಹಣ ಗಳಿಸಿದ ಸಿನಿಮಾಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತರಿಸಿದ್ದು, ವಿದೇಶಗಳಲ್ಲಿ ಭಾರತದ ಸಿನಿಮಾಗಳಿಗೆ ಬೇಡಿಕೆ ಹುಟ್ಟು ಹಾಕಿದ ಸಿನಿಮಾ ಇದು. ಈ ಸಿನಿಮಾದ ಪಾತ್ರಗಳು ಇಂದಿಗೂ ಜನಪ್ರಿಯ. ಸಿನಿಮಾದ ಎಲ್ಲ ಪಾತ್ರಗಳಿಗೂ ಮಹತ್ವವಿತ್ತು. ವಿಲನ್ ಬಲ್ಲಾಳದೇವನ ಪಾತ್ರಕ್ಕೂ ಸಹ ಹೀರೋ ಪಾತ್ರದಷ್ಟೆ ತೂಕವಿತ್ತು. ಅಂದಹಾಗೆ ಬಲ್ಲಾಳದೇವ ಪಾತ್ರಕ್ಕೆ ಮೊದಲಿಗೆ ಬೇರೆ ನಟನನ್ನು ಆಯ್ಕೆ ಮಾಡಿದ್ದರಂತೆ ನಿರ್ದೇಶಕ ರಾಜಮೌಳಿ.

‘ಬಾಹುಬಲಿ’ ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ತೆಲುಗಿನ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ವಿಶೇಷವಾಗಿ ದೇಹ ದಂಡಿಸಿಕೊಂಡು ಭರ್ಜರಿಯಾಗಿ ರೆಡಿಯಾಗಿದ್ದ ರಾಣಾ, ಅಷ್ಟೇ ಅದ್ಭುತವಾಗಿ ತೆರೆಯ ಮೇಲೆ ನಟಿಸಿದ್ದಾರೆ. ಪ್ರಭಾಸ್​ಗೆ ತಕ್ಕನಾದ ವಿಲನ್ ಎಂದೆನಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಆದಾಗ ಪ್ರಭಾಸ್ ಅಷ್ಟೇ ಪ್ರಶಂಸೆ ರಾಣಾ ದಗ್ಗುಬಾಟಿಗೂ ವ್ಯಕ್ತವಾಯ್ತು. ಆದರೆ ರಾಣಾ ದಗ್ಗುಬಾಟಿ ಪಾತ್ರಕ್ಕೆ ಬೇರೊಬ್ಬ ನಟನನ್ನು ನಿರ್ದೇಶಕ ರಾಜಮೌಳಿ ಆಯ್ಕೆ ಮಾಡಿದ್ದರು.

ಇದನ್ನೂ ಓದಿ:‘ಬಾಹುಬಲಿ’ ವಿವಾದಾತ್ಮಕ ದೃಶ್ಯದ ಬಗ್ಗೆ ರಾಜಮೌಳಿ ಮಾತು

ರಾಣಾ ದಗ್ಗುಬಾಟಿ ಬಳಿ ಹೋಗಿ, ‘ಬಾಹುಬಲಿ’ ಸಿನಿಮಾದ ಬಲ್ಲಾಳದೇವನ ಪಾತ್ರದಲ್ಲಿ ನೀವು ನಟಿಸಬೇಕು ಎಂದು ರಾಜಮೌಳಿ ಕೇಳಿದರಂತೆ. ಆಗ ರಾಣಾ ಕೇಳಿದ ಒಂದೇ ಮಾತೆಂದರೆ ಇದಕ್ಕೆ ಮುನ್ನ ಈ ಪಾತ್ರದಲ್ಲಿ ಯಾರು ನಟಿಸಬೇಕು ಎಂದುಕೊಂಡಿದ್ದಿರಿ ಎಂದು. ಆಗ ರಾಜಮೌಳಿ ‘ಹಾಲಿವುಡ್ ನಟ ಜೇಸನ್ ಮೋಮೊ ಅವರನ್ನು ಹಾಕಿಕೊಳ್ಳೋಣ ಎಂದುಕೊಂಡಿದ್ದೆ ಆದರೆ ಸಾಧ್ಯವಾಗಲಿಲ್ಲ’ ಎಂದರಂತೆ. ಈ ಮಾತು ಕೇಳಿದ ಕೂಡಲೇ ರಾಣಾ ದಗ್ಗುಬಾಟಿ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ.

ಅಂದಹಾಗೆ ಜೇಸನ್ ಮೋಮಾ ಹಾಲಿವುಡ್​ನ ಸ್ಟಾರ್ ನಟರಲ್ಲಿ ಒಬ್ಬರು. ‘ಅಕ್ವಾಮ್ಯಾನ್’ ಸಿನಿಮಾದ ಹೀರೋ ಜೇಸನ್ ಮೋಮಾ ‘ಸೂಪರ್ ಮ್ಯಾನ್ vs ಬ್ಯಾಟ್​ಮ್ಯಾನ್’, ‘ಜಸ್ಟೀಸ್ ಲೀಗ್’, ‘ಡ್ಯೂನ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ಬ್ರೇವನ್’, ‘ದಿ ಬ್ಯಾಡ್ ಬ್ಯಾಚ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶ್ವವಿಖ್ಯಾತ ‘ಗೇಮ್ ಆಫ್ ಥ್ರೋನ್ಸ್​’ನಲ್ಲಿ ಕಾಲ್ ಡ್ರಾಗೋ ಪಾತ್ರದಲ್ಲಿ ಸಹ ಜೇಸನ್ ಮೋಮಾ ನಟಿಸಿದ್ದಾರೆ. ಅವರನ್ನು ಬಲ್ಲಾಳದೇವ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ ರಾಜಮೌಳಿ ಆದರೆ ಸಂಭಾಷಣೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಕಷ್ಟವಾಗಬಹುದು ಎಂಬ ಕಾರಣಕ್ಕೆ ಅವರನ್ನು ಬೇಡ ಎಂದುಕೊಂಡು ರಾಣಾ ದಗ್ಗುಬಾಟಿಯನ್ನು ಆಯ್ಕೆ ಮಾಡಿದರಂತೆ ರಾಜಮೌಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ