AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ’ ವಿವಾದಾತ್ಮಕ ದೃಶ್ಯದ ಬಗ್ಗೆ ರಾಜಮೌಳಿ ಮಾತು

SS Rajamouli: ‘ಬಾಹುಬಲಿ’ ಸಿನಿಮಾದ ವಿವಾದಾತ್ಮಕ ದೃಶ್ಯದ ಬಗ್ಗೆ ನಿರ್ದೇಶಕ ಎಸ್​ಎಸ್ ರಾಜಮೌಳಿ ಮಾತನಾಡಿದ್ದಾರೆ. ಅಂದಹಾಗೆ ಆ ದೃಶ್ಯ ಯಾವುದು? ವಿವಾದ ಏಕೆ?

‘ಬಾಹುಬಲಿ’ ವಿವಾದಾತ್ಮಕ ದೃಶ್ಯದ ಬಗ್ಗೆ ರಾಜಮೌಳಿ ಮಾತು
ಮಂಜುನಾಥ ಸಿ.
|

Updated on: Aug 04, 2024 | 7:43 AM

Share

ರಾಜಮೌಳಿ, ಭಾರತದ ಟಾಪ್ ನಿರ್ದೇಶಕ. ಅವರ ಸಿನಿಮಾಗಳಿಗೆ ಸಾವಿರಾರು ಕೋಟಿ ಗಳಿಕೆ ಎನ್ನುವುದು ತೀರ ಸಾಮಾನ್ಯ. ರಾಜಮೌಳಿ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಸಹ ಸೂಪರ್ ಹಿಟ್ ಆಗುತ್ತವೆ. ಭಾರತೀಯ ಸಿನಿಮಾವನ್ನು ಇತ್ತೀಚೆಗಿನ ವರ್ಷಗಳಲ್ಲಿ ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದ ಶ್ರೇಯ ರಾಜಮೌಳಿಗೆ ಸಲ್ಲುತ್ತದೆ. ಆದರೆ ಏನೇ ಆದರೂ ರಾಜಮೌಳಿ ಸಹ ಟೀಕೆಯಿಂದ ಹೊರತಲ್ಲ. ಅವರ ಬ್ಲಾಕ್ ಬಸ್ಟರ್ ಸಿನಿಮಾ ‘ಬಾಹುಬಲಿ’ಯ ಕೆಲವು ಸೀನ್​ಗಳ ಬಗ್ಗೆ ಕೆಲವರು ತಕರಾರು ಎತ್ತಿದ್ದರು. ಈ ಬಗ್ಗೆ ಸ್ವತಃ ರಾಜಮೌಳಿ ಮಾತನಾಡಿದ್ದಾರೆ.

‘ಬಾಹುಬಲಿ’ ಪಾರ್ಟ್ 1 ಸಿನಿಮಾದಲ್ಲಿ ಪ್ರಭಾಸ್, ತಮನ್ನಾರನ್ನು ಹುಡುಕಿಕೊಂಡು ಭಾರಿ ಜಲಪಾತವನ್ನು ಹತ್ತು ಕುಂತಲ ದೇಶಕ್ಕೆ ಹೋಗುತ್ತಾನೆ. ಅಲ್ಲಿ ತಮನ್ನಾ ಏನೋ ಸಿಗುತ್ತಾಳೆ. ಆದರೆ ಆಕೆ ಪ್ರಭಾಸ್ ಊಹಿಸಿದಂತೆ ಇರುವುದಿಲ್ಲ ಬದಲಿಗೆ ಹೆಣ್ತನವನ್ನೇ ಮರೆತ ಯೋಧೆಯಾಗಿರುತ್ತಾಳೆ. ಆದರೆ ಪ್ರಭಾಸ್ ಹಾಡೊಂದರಲ್ಲಿ ತಮನ್ನಾಳಿಗೆ ಆಕೆ ಹೆಣ್ಣು ಎಂಬುದನ್ನು ಪುನಃ ನೆನಪಿಸುತ್ತಾನೆ. ಆದರೆ ಆ ದೃಶ್ಯದಲ್ಲಿ ಪ್ರಭಾಸ್, ತಮನ್ನಾಳ ಒಪ್ಪಿಗೆ ಇಲ್ಲದೆ ಬಲವಂತದಿಂದ ಆಕೆಯೊಂದಿಗೆ ನಡೆದುಕೊಳ್ಳುತ್ತಾನೆ ಎಂಬ ಟೀಕೆ ವ್ಯಕ್ತವಾಗಿತ್ತು. ತಮನ್ನಾಳ ಒಪ್ಪಿಗೆ ಪಡೆಯದೆ ಪ್ರಭಾಸ್ ಪಾತ್ರ ಆಕೆಯೊಂದಿಗೆ ಬಲತ್ಕಾರದ ಕೃತ್ಯ ಎಸಗಿದೆ ಎಂದು ಕೆಲವರು ಟೀಕಿಸಿದ್ದರು.

ಇದನ್ನೂ ಓದಿ:ರಾಜಮೌಳಿಯ ಮೊದಲ ಸಿನಿಮಾ ಬಿಡುಗಡೆಯೇ ಆಗಲಿಲ್ಲ ಏಕೆ?

ಆರೋಪಕ್ಕೆ ತಮ್ಮ ಡಾಕ್ಯುಮೆಂಟರಿಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಮೌಳಿ, ಅಸಲಿಗೆ ಪ್ರಭಾಸ್ ಪಾತ್ರಕ್ಕೆ ಗೊತ್ತು, ತಮನ್ನಾಗೆ ಅದೆಲ್ಲ (ಕ್ರಾಂತಿ, ಯುದ್ಧ) ಇಷ್ಟವಿಲ್ಲವೆಂದು, ಏಕೆಂದರೆ ತಮನ್ನಾ ಬೇಸರದಲ್ಲಿ ತನ್ನ ಮುಖವನ್ನು ನದಿಯಲ್ಲಿ ನೋಡಿಕೊಂಡಿದ್ದನ್ನು ಪ್ರಭಾಸ್ ನೋಡಿರುತ್ತಾನೆ. ಪ್ರಭಾಸ್ ಹಾಗೂ ತಮನ್ನಾ ಪಾತ್ರ ಮೊದಲ ಬಾರಿ ಎದುರು ಬದುರಾದಾಗ, ತಮನ್ನಾ ಕತ್ತಿಯನ್ನು ಪ್ರಭಾಸ್ ಎದೆಗೆ ಇಟ್ಟಾಗ ಪ್ರಭಾಸ್ ಆಡುವ ಮಾತು, ಅದಕ್ಕೆ ತಮನ್ನಾ ಪ್ರತಿಕ್ರಿಯಿಸುವ ರೀತಿಯಲ್ಲಿಯೇ ಪ್ರಭಾಸ್​ಗೆ ಒಪ್ಪಿಗೆ ಸಿಕ್ಕಿರುತ್ತದೆ. ಅಷ್ಟಕ್ಕೂ ಮೀರಿ ಟೀಕೆ ಮಾಡುವವರಿಗೆ ‘ಡ್ರಾಮಾ’ದ ಅರ್ಥ ಗೊತ್ತಿಲ್ಲವೆಂದೇ ಹೇಳಬೇಕು ಎಂದಿದ್ದಾರೆ ರಾಜಮೌಳಿ.

‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದ ಅತ್ಯುತ್ತಮ ಸಿನಿಮಾಗಳಾಗಿವೆ. ಆ ಸಿನಿಮಾಗಳಿಗೆ ಮುಂಚೆ ಅಷ್ಟು ದೊಡ್ಡ ಬಜೆಟ್​ನಲ್ಲಿ ಯಾವ ಸಿನಿಮಾವನ್ನೂ ಮಾಡಿರಲಿಲ್ಲ. ಮಾತ್ರವಲ್ಲದೆ ಆ ಸಿನಿಮಾಗಳಷ್ಟು ದೊಡ್ಡ ಮಟ್ಟದ ಹಣವನ್ನು ಗಳಿಸಿದ ಯಾವ ಸಿನಿಮಾಗಳು ಇಲ್ಲ. ರಾಜಮೌಳಿ ಸಿನಿಮಾಗಳ ಕುರಿತು ನೆಟ್​ಫ್ಲಿಕ್ಸ್​ನಲ್ಲಿ ಡಾಕ್ಯುಮೆಂಟರಿ ಬಿಡುಗಡೆ ಆಗಿದ್ದು, ಡಾಕ್ಯುಮೆಂಟರಿಯಲ್ಲಿ ರಾಜಮೌಳಿ, ‘ಬಾಹುಬಲಿ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"