ಸ್ಯಾಂಡಲ್ವುಡ್ನಲ್ಲಿ ಗೆಳೆತನದ ಕಂಪು; ಕೆಲವು ಉಳಿದವು, ಕೆಲವು ಅಳಿದವು
Friendship Day: ಗೆಳೆತನಕ್ಕೆ ಮೀಸಲಾದ ಸ್ನೇಹಿತರ ದಿನಾಚರಣೆ ಇಂದು (ಆಗಸ್ಟ್ 04). ಕನ್ನಡ ಚಿತ್ರರಂಗದಲ್ಲಿ ಹಲವು ಉತ್ತಮ ಸ್ನೇಹಿತರಿದ್ದಾರೆ. ಒಳ್ಳೆಯ ಗೆಳೆತನದ ಜೋಡಿಗಳಿವೆ. ಅವುಗಳಲ್ಲಿ ಕೆಲವರ ಹೆಸರುಗಳು ಇಲ್ಲಿವೆ.
ಇಂದು (ಆಗಸ್ಟ್ 4) ಫ್ರೆಂಡ್ಶಿಫ್ ಡೇ. ಗೆಳೆತನ ಅನ್ನೋದು ಕೇವಲ ಸಾಮಾನ್ಯ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅನೇಕ ಹೀರೋ-ಹೀರೋಯಿನ್ಗಳ ನಡುವೆ ಉತ್ತಮ ಗೆಳೆತನ ಇದೆ. ಎಷ್ಟೇ ಅಡೆ-ತಡೆ ಬಂದರೂ ಜಗ್ಗದೆ ನಿಂತ ಸ್ಯಾಂಡಲ್ವುಡ್ನ ಅನೇಕ ಗೆಳೆತನ ಇದೆ. ಇನ್ನೂ ಕೆಲವು ಗೆಳೆತನಗಳು ಮುರಿದು ಹೋಗಿವೆ. ರಾಜ್ಕುಮಾರ್ ಅಜಾತಶತ್ರು ಎನಿಸಿಕೊಂಡಿದ್ದರು. ಇಂಡಸ್ಟ್ರಿಯ ಎಲ್ಲರ ಜೊತೆಯೂ ಅವರಿಗೆ ಗೆಳೆತನ ಇತ್ತು. ಬೆಸ್ಟ್ ಫ್ರೆಂಡ್ಸ್ ಎನಿಸಿಕೊಂಡ ಕನ್ನಡ ಸ್ಟಾರ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ವಿಷ್ಣುವರ್ಧನ್ ಹಾಗೂ ಅಂಬರೀಷ್
ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರು ಸ್ಯಾಂಡಲ್ವುಡ್ನ ಬೆಸ್ಟ್ ಬಡ್ಡೀಸ್ ಎನಿಸಿಕೊಂಡಿದ್ದರು. ‘ನಾಗರಹಾವು’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದರು. ಆ ಬಳಿಕ ಇವರ ಮಧ್ಯೆ ಗೆಳೆತನ ಬೆಳೆಯಿತು. ಮೊದಲು ವಿಷ್ಣುವರ್ಧನ್ ಮೃತಪಟ್ಟರು. ಇದಾದ ಕೆಲ ವರ್ಷಗಳಲ್ಲಿ ಅಂಬರೀಷ್ ನಿಧನ ಹೊಂದಿದರು. ಆದರೆ, ಇವರ ಗೆಳೆತನ ಈಗಲೂ ಮಾದರಿ.
ಸುದೀಪ್ ಹಾಗೂ ದರ್ಶನ್
ಸುದೀಪ್ ಹಾಗೂ ದರ್ಶನ್ ಅವರು ಒಳ್ಳೆಯ ಗೆಳೆಯರು ಎನಿಸಿಕೊಂಡಿದ್ದರು. ಇವರ ಮಧ್ಯೆ ಆಪ್ತತೆ ಇತ್ತು. ಆದರೆ, ಇಬ್ಬರೂ ಈಗ ಬೇರೆ ಆಗಿದ್ದಾರೆ. ಕೆಲವು ಕಾರಣಗಳಿಂದ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಿಲ್ಲ.
ಶಿವರಾಜ್ಕುಮಾರ್ ಹಾಗೂ ಉಪೇಂದ್ರ
‘ಉಪೇಂದ್ರ’ ನಿರ್ದೇಶನದ ‘ಓಂ’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಹೀರೋ ಆಗಿ ನಟಿಸಿದ್ದರು. ಈ ಸಿನಿಮಾ ಗಮನ ಸೆಳೆಯಿತು. ಈ ಚಿತ್ರದಿಂದ ಇಬ್ಬರ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದ್ದು, ಈಗಲೂ ಮುಂದುವರಿದಿದೆ. ‘ಕಬ್ಜ’ ಸಿನಿಮಾದಲ್ಲಿ ಇವರು ಮತ್ತೆ ಒಂದಾಗಿದ್ದರು.
ಯಶ್ ಹಾಗೂ ಪುನೀತ್ ರಾಜ್ಕುಮಾರ್
ಯಶ್ ಹಾಗೂ ಪುನೀತ್ ರಾಜ್ಕುಮಾರ್ ಗೆಳೆತನ ಅನೇಕರಿಗ ಮಾದರಿ. ಆದರೆ, ಪುನೀತ್ ಇಂದು ನಮ್ಮ ಜೊತೆಗಿಲ್ಲ. ಆದರೆ, ಪುನೀತ್ ಅವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಯಶ್ ಅನೇಕ ಬಾರಿ ಮಾಡಿದ್ದಾರೆ.
ಶರಣ್ ಹಾಗೂ ನಂದಕಿಶೋರ್
ಕಾಮಿಡಿ ಸಿನಿಮಾಗಳ ಮೂಲಕ ಗಮನ ಸೆಳೆದ ಶರಣ್ ಅವರು ನಿರ್ದೇಶಕ ನಂದಕಿಶೋರ್ ಜೊತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಇವರ ಗೆಳೆತನ ಇಂದು ನಿನ್ನೆಯದಲ್ಲ. ಸಣ್ಣ ವಯಸ್ಸಿನಿಂದ ಇಬ್ಬರೂ ಗೆಳೆಯರು. ‘ವಿಕ್ಟರಿ’ ಸಿನಿಮಾನ ನಂದ ಕಿಶೋರ್ ನಿರ್ದೇಶನ ಮಾಡಿದರು. ಶರಣ್ ಈ ಚಿತ್ರಕ್ಕೆ ಹೀರೋ ಆಗಿದ್ದರು.
ಯೋಗಿ ಹಾಗೂ ದಿಗಂತ್
ಲೂಸ್ ಮಾದ ಯೋಗಿ ಅವರು ದಿಗಂತ್ ಜೊತೆ ಈಗಲೂ ಗೆಳೆತನ ಹೊಂದಿದ್ದಾರೆ. ಅವರು ಇಂಡಸ್ಟ್ರಿಗೆ ಬಂದಾಗಿನಿಂದ ಗೆಳೆಯರು. ಇತ್ತೀಚೆಗೆ ಇವರು ‘ಬ್ಯಾಚುಲರ್ ಪಾರ್ಟಿ’ ಹೆಸರಿನ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.
ಗಣೇಶ್ ಹಾಗೂ ದುನಿಯಾ ವಿಜಯ್
ಗಣೇಶ್ ಹಾಗೂ ದುನಿಯಾ ವಿಜಯ್ ತಮ್ಮ ಸ್ವಂತ ಶ್ರಮದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಇಬ್ಬರೂ ಚಿತ್ರರಂಗದಲ್ಲಿ ಸಾಕಷ್ಟು ಸೈಕಲ್ ಹೊಡೆದು ಸ್ಟಾರ್ ಹೀರೋಗಳು ಎನಿಸಿಕೊಂಡಿದ್ದಾರೆ. ಇಬ್ಬರ ಮಧ್ಯೆ ಮೊದಲು ಬೆಳೆದ ಫ್ರೆಂಡ್ಶಿಫ್ ಈಗಲೂ ಹಾಗೆಯೇ ಇದೆ.
ಯಶ್ ಹಾಗೂ ರಾಧಿಕಾ ಪಂಡಿತ್
ಯಶ್ ಹಾಗೂ ರಾಧಿಕಾ ಪಂಡಿತ್ ಧಾರಾವಾಹಿ ಸಮಯದಿಂದ ಒಳ್ಳೆಯ ಗೆಳೆಯರು. ಆ ಬಳಿಕ ಇವರ ಗೆಳೆತನ ಪ್ರೀತಿಗೆ ತಿರುಗಿತು. ಈಗ ಇಬ್ಬರೂ ಪತಿ-ಪತ್ನಿ ಆಗಿದ್ದಾರೆ. ಆದರೂ ಇವರ ಮಧ್ಯೆ ಗೆಳೆತನ ಇದೆ.
ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್
ಕಾಮಿಡಿ ಶೋಗಳ ಮೂಲಕ, ಸಿನಿಮಾಗಳ ಮೂಲಕ ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಎಲ್ಲರನ್ನೂ ನಗಿಸಿದ್ದಾರೆ. ಇವರು ಸ್ಯಾಂಡಲ್ವುಡ್ನಲ್ಲಿ ಒಳ್ಳೆಯ ಗೆಳೆತನ ಹೊಂದಿದ್ದಾರೆ.
ಸುದೀಪ್ ಹಾಗೂ ಅರುಣ್ ಸಾಗರ್
ಸುದೀಪ್ ಹಾಗೂ ಅರುಣ್ ಸಾಗರ್ ಗೆಳೆತನ ತುಂಬಾ ಹಿಂದಿನಿಂದಲೂ ಇದೆ. ಇವರು ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ ಅರುಣ್ ಸಾಗರ್ ಫಿನಾಲೆ ತಲುಪಿದ್ದರು. ಸುದೀಪ್ ಗೆಳೆಯ ಎನ್ನುವ ಕಾರಣಕ್ಕೆ ಅವರಿಗೆ ಫಿನಾಲೆವರೆಗೆ ಬರೋಕೆ ಸಾಧ್ಯವಾಯಿತು ಎಂದು ಅನೇಕರು ಮಾತನಾಡಿಕೊಂಡಿದ್ದೂ ಇದೆ.
ವಿಷ್ಣುವರ್ಧನ್ ಹಾಗೂ ದ್ವಾರಕೀಶ್
ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಮಧ್ಯೆ ಗೆಳೆತನ ಇದೆ. ಆದರೆ, ಇವರು ಕಾರಣಾಂತರಗಳಿಂದ ಬೇರೆ ಆದರು. ಆ ಬಳಿಕ ಮತ್ತೆ ಒಂದಾದರು. ಈಗ ಇಬ್ಬರೂ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ