‘ಮಾರ್ಟಿನ್’ ಖದರ್ ಬೇರೆಯದ್ದೇ ರೀತಿ ಇರುತ್ತದೆ: ಧ್ರುವ ಸರ್ಜಾ
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಟ್ರೈಲರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ನಡುವೆ ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾದಲ್ಲಿನ ತಮ್ಮ ಪಾತ್ರ ಹಾಗೂ ಸಿನಿಮಾದ ಕತೆಯ ಬಗ್ಗೆ ಮಾತನಾಡಿದ್ದಾರೆ.
ಧ್ರುವ ಸರ್ಜಾ ಆರಂಭದಲ್ಲಿ ಕೆಲ ಆಕ್ಷನ್ ಪ್ರೇಮಕತೆ ಸಿನಿಮಾಗಳಲ್ಲಿ ನಟಿಸಿದರಾದರೂ ಬಳಿಕ ಸಂಪೂರ್ಣವಾಗಿ ಆಕ್ಷನ್ ನಟರಾಗಿ ಬದಲಾಗಿದ್ದಾರೆ. ಅವರ ಭಾರಿ ದೇಹ, ಗಡಸು ದನಿ, ಮುಖಚಹರೆ ಆಕ್ಷನ್ ಸಿನಿಮಾಗಳಿಗೆ ಹೆಚ್ಚು ಸೂಟ್ ಆಗುತ್ತದೆ. ಇದೀಗ ‘ಮಾರ್ಟಿನ್’ ಹೆಸರಿನ ಮತ್ತೊಂದು ಆಕ್ಷನ್ ಸಿನಿಮಾದೊಂದಿಗೆ ಬರುತ್ತಿದ್ದಾರೆ ನಟ ಧ್ರುವ ಸರ್ಜಾ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆಗೆ ಮುನ್ನ ಧ್ರುವ ಸರ್ಜಾ, ಟಿವಿ9ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ‘ಮಾರ್ಟಿನ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ಮಾರ್ಟಿನ್’ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆಯೂ ಧ್ರುವ ಸರ್ಜಾ ಮಾತನಾಡಿದ್ದಾರೆ. ‘ಮಾರ್ಟಿನ್’ ಸಿನಿಮಾದ ಟ್ರೈಲರ್ ಆಗಸ್ಟ್ 05 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅಕ್ಟೋಬರ್ 11 ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ