PSI ಪರಶುರಾಮ್ ಮೃತ ದೇಹ ನೋಡಿ ಕಣ್ಣೀರಿಟ್ಟ ಅಮ್ಮ
ಯಾದಗಿರಿ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಗ್ರಾಮ ಕಾರಟಗಿ ತಾಲೂಕಿನ ಸೋಮನಾಳದಲ್ಲಿ ಮೃತ ಪರಶುರಾಮ ಅವರ ಅಂತ್ಯಕ್ರಿಯೆ ನಡೆದಿದೆ. ಇತ್ತ ಮಗನ ಪಾರ್ಥಿವ ಶರೀರದ ಮುಂದೆ ತಾಯಿ, ಪತ್ನಿ, ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.
ಕೊಪ್ಪಳ, ಆ.03: ಯಾದಗಿರಿ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಗ್ರಾಮ ಕಾರಟಗಿ ತಾಲೂಕಿನ ಸೋಮನಾಳದಲ್ಲಿ ಮೃತ ಪರಶುರಾಮ ಅವರ ಅಂತ್ಯಕ್ರಿಯೆ ನಡೆದಿದೆ. ಶವಸಂಸ್ಕಾರಕ್ಕೂ ಮುನ್ನ ಸಾವಿರಾರು ಜನರು ಅಂತಿಮ ದರ್ಶನ ಪಡೆದರು. ಇತ್ತ ಮಗನ ಪಾರ್ಥಿವ ಶರೀರದ ಮುಂದೆ ತಾಯಿ, ಪತ್ನಿ, ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಮಗನ ಶವ ನೋಡುತ್ತಿದ್ದಂತೆ ಅಯ್ಯೋ ಮಗನೇ ಎಂದು ಪರಶುರಾಮ ತಾಯಿ ಗೋಳಾಡಿದ್ದು, ಕಲ್ಲು ಹೃದಯ ಕೂಡ ಕರಗುವಂತಿತ್ತು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Sat, 3 August 24