‘ಇಡ್ಲಿ-ಮಸಿ’ ಎಂದರೇನು? ಸ್ಪಷ್ಟನೆ ಕೊಟ್ಟು ಬಚಾವಾದರೇ ಲಿಖಿತ್?

ಲಿಖಿತ್ ಅವರು ಪ್ರಶಾಂತ್ ಅವರನ್ನು ‘ಇಡ್ಲಿ-ಮಸಿ’ ಎಂದು ಕರೆದಿದ್ದರು. ಪ್ರಶಾಂತ್ ನೋಡಲು ಕಪ್ಪು ವರ್ಣದವರಾಗಿದ್ದು, ಅದೇ ಕಾರಣಕ್ಕೆ ಅವರನ್ನು ಮಸಿಗೆ ಹೋಲಿಸಿದ್ದರು ಲಿಖಿತ್, ಪ್ರಶಾಂತ್ ಸಹ ಹೀಗೆಯೇ ತಿಳಿದುಕೊಂಡು ಲಿಖಿತ್ ಮೇಲೆ ಜಗಳ ಮಾಡಿದರು. ಪ್ರಶಾಂತ್ ಅವರು ತುಸು ಜೋರಾಗಿಯೇ ಜಗಳ ಮಾಡಿದ್ದರು. ಆದರೆ ಆ ವಿಷಯವನ್ನು ಅಲ್ಲಿಗೇ ಬಿಡಲಾಗಿತ್ತು. ಶನಿವಾರ ಆ ವಿಷಯವನ್ನು ಸುದೀಪ್ ಚರ್ಚೆಗೆ ಎಳೆದರು.

‘ಇಡ್ಲಿ-ಮಸಿ’ ಎಂದರೇನು? ಸ್ಪಷ್ಟನೆ ಕೊಟ್ಟು ಬಚಾವಾದರೇ ಲಿಖಿತ್?
Sudeep Likith

Updated on: Oct 03, 2026 | 11:17 PM

ಬಿಗ್​​ಬಾಸ್ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ತುಸು ಹೆಚ್ಚಾಗಿಯೇ ಗರಂ ಆಗಿದ್ದರು. ಅಥವಾ ಕೆಲ ಸ್ಪರ್ಧಿಗಳು ಸುದೀಪ್ ಅವರು ಸಿಟ್ಟಾಗುವಂತೆ ನಡೆದುಕೊಂಡರು. ಅದರಲ್ಲೂ ಗಾನವಿ ಅವರು ಸುದೀಪ್ ಎದುರು ವಿತಂಡ ವಾದ ಮಾಡಿದರೆ ಲಿಖಿತ್ ವಾರವೆಲ್ಲ ಮಾಡಿದ ಚೇಷ್ಟೆಯಿಂದ ಸುದೀಪ್ ಸಿಟ್ಟಾಗಿದ್ದರು. ಶನಿವಾರದ ಎಪಿಸೋಡಿನಲ್ಲಿ ಲಿಖಿತ್ ಅವರ ಬಗ್ಗೆ ಸುದೀಪ್ ಹಲವು ಬಾರಿ ಚರ್ಚೆ ಮಾಡಿದರು. ಅವರ ಬೇಜವಾಬ್ದಾರಿತನ, ಅಶಿಸ್ತಿನ ಬಗ್ಗೆ ಮಾತನಾಡಿ ‘ಮನೆಯಲ್ಲಿ ಇರಲು ಅರ್ಹರಲ್ಲ’ ಎಂದರು ಸುದೀಪ್. ಲಿಖಿತ್ ಅವರು ಮಾಡಿದ ಹಲವು ವಿಷಯಗ ಚರ್ಚೆ ಮಾಡಲಾಯ್ತಾದರೂ, ಎಪಿಸೋಡಿನ ಕೊನೆಯಲ್ಲಿ ಲಿಖಿತ್, ಪ್ರಶಾಂತ್ ಗೌಡ ಕುರಿತು ಆಡಿದ್ದ ಮಾತಿನ ವಿಷಯ ಚರ್ಚೆ ಎತ್ತಿಕೊಂಡರು ಸುದೀಪ್.

ಲಿಖಿತ್ ಅವರು ಪ್ರಶಾಂತ್ ಅವರನ್ನು ‘ಇಡ್ಲಿ-ಮಸಿ’ ಎಂದು ಕರೆದಿದ್ದರು. ಪ್ರಶಾಂತ್ ನೋಡಲು ಕಪ್ಪು ವರ್ಣದವರಾಗಿದ್ದು, ಅದೇ ಕಾರಣಕ್ಕೆ ಅವರನ್ನು ಮಸಿಗೆ ಹೋಲಿಸಿದ್ದರು ಲಿಖಿತ್, ಪ್ರಶಾಂತ್ ಸಹ ಹೀಗೆಯೇ ತಿಳಿದುಕೊಂಡು ಲಿಖಿತ್ ಮೇಲೆ ಜಗಳ ಮಾಡಿದರು. ಪ್ರಶಾಂತ್ ಅವರು ತುಸು ಜೋರಾಗಿಯೇ ಜಗಳ ಮಾಡಿದ್ದರು. ಆದರೆ ಆ ವಿಷಯವನ್ನು ಅಲ್ಲಿಗೇ ಬಿಡಲಾಗಿತ್ತು. ಶನಿವಾರ ಆ ವಿಷಯವನ್ನು ಸುದೀಪ್ ಚರ್ಚೆಗೆ ಎಳೆದರು.

ವ್ಯಕ್ತಿಯ ಬಣ್ಣದ ಬಗ್ಗೆ ತುಚ್ಛವಾಗಿ ಮಾತನಾಡುವುದು ಕೀಳಾದ ನಿಂದನೆ ಎಂದರು ಸುದೀಪ್, ಆದರೆ ಲಿಖಿತ್, ತಾವು ‘ಇಡ್ಲಿ-ಮಸಿ’ ಎಂದಿದ್ದು ಆ ಕಾರಣಕ್ಕೆ ಅಲ್ಲ ಎಂದರಲ್ಲದೆ, ನಮ್ಮ ಕಡೆ (ಉತ್ತರ ಕನ್ನಡ) ಇಡ್ಲಿ ಮಸಿ ಎಂದರೆ ಕೆಂಡ ಮತ್ತು ಇದ್ದಿಲು. ಒಂದಕ್ಕೊಂದು ಸಾಕ್ಷಿ ಎಂಬ ಗಾದೆಯ ರೀತಿಯಲ್ಲಿ ನಾವು ಅದನ್ನು ಬಳಸುತ್ತೇವೆ. ಅದನ್ನು ನಾನು ಅವರ ಬಣ್ಣದ ಕಾರಣಕ್ಕೆ ಹೇಳಿಲ್ಲ’ ಎಂದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಸುದೀಪ್ ಅವರು ಅದನ್ನು ಪೂರ್ಣವಾಗಿ ಒಪ್ಪಲಿಲ್ಲವಾದರು, ‘ಹಾಗಿದ್ದರೆ ನೀವು ಆಗಲೇ ಅಂದರೆ ಘಟನೆ ನಡೆದಾಗಲೇ ಈ ವಿಷಯವನ್ನು ಪ್ರಶಾಂತ್ ಅವರಿಗೆ ಏಕೆ ಹೇಳಲಿಲ್ಲ. ಪ್ರಶಾಂತ್ ಅವರು ನೀವು ಅವರ ಬಣ್ಣದ ಬಗ್ಗೆ ನಿಂದನೆ ಮಾಡಿದ್ದೀರಿ ಎಂದೇ ತಾನೆ ನಿಮ್ಮ ಮೇಲೆ ಜಗಳಕ್ಕೆ ಬಂದಿದ್ದು, ನೀವು ಹಾಗೆ ಮಾಡಿಲ್ಲವಾಗಿದ್ದರೆ ನೀವು ಆಗಲೇ ಏಕೆ ಅವರಿಗೆ ಅದನ್ನು ತಿಳಿಸಿ ಹೇಳಲಿಲ್ಲ?’ ಎಂದು ಪ್ರಶ್ನೆ ಮಾಡಿದರು. ಲಿಖಿತ್ ಅವರು ಪ್ರಶ್ನೆಗೆ ಸೂಕ್ತವಾದ ಉತ್ತರವನ್ನು ನೀಡಲಿಲ್ಲ. ಆದರೆ ಸುದೀಪ್ ಅವರು ಸಹ ವಿಷಯವನ್ನು ಇನ್ನೂ ಹೆಚ್ಚು ಕೆಣಕಲು ಹೋಗಲಿಲ್ಲ. ವರ್ಣಬೇಧ, ಜಾತಿಬೇಧಗಳು ಸರಿಯಲ್ಲ ಎಂಬರ್ಥದ ಮಾತು ಹೇಳಿ ಎಪಿಸೋಡ್ ಮುಗಿಸಿದರು.

ಆದರೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಉತ್ತರ ಕನ್ನಡದ ಭಾಷೆಯಲ್ಲಿ ‘ಇಡ್ಲಿ-ಮಸಿ’ ಎಂಬ ಹೇಳಿಕೆ ಅಥವಾ ಗಾದೆಯೇ ಇಲ್ಲ ಎಂದಿದ್ದಾರೆ. ಇನ್ನು ಕೆಲವರು ಲಿಖಿತ್, ‘ಇದ್ಲಿ-ಮಸಿ’ ಎಂದು ಹೇಳಲು ಹೋಗಿ ‘ಇಡ್ಲಿ-ಮಸಿ’ ಎಂದಿರಬೇಕು ಎಂದಿದ್ದಾರೆ. ಇನ್ನು ಕೆಲವರು ಸುದೀಪ್ ಅವರು ಇನ್ನಷ್ಟು ಗಂಭೀರವಾಗಿ ಈ ವಿಷಯವನ್ನು ಚರ್ಚಿಸಬೇಕಿತ್ತು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 pm, Sat, 3 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us