
ಗಾಯಕಿ ಸುಹಾನಾ ಸೈಯ್ಯದ್ (Suhana) ಅವರು ‘ಸರಿಗಮಪ’ ಮೂಲಕ ಫೇಮಸ್ ಆಗಿದ್ದಾರೆ. ಅವರು ಮುಸ್ಲಿಂ ಧರ್ಮದವರಾದರೂ ಹಿಂದೂ ಹಾಡನ್ನು ಹಾಡಿದ್ದರು. ಈ ಮೂಲಕ ಚರ್ಚೆ ಹುಟ್ಟುಹಾಕಿದ್ದರು. ಆ ಬಳಿಕ ಅವರು ರಂಗಭೂಮಿ ಕಲಾವಿದ ನಿತೀನ್ ಶಿವಾಂಶ್ ಜೊತೆ ಮದುವೆ ಆಗಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದರು. ಅವರು ಮಂತ್ರ ಮಾಂಗಲ್ಯ ಮಾಡಿಕೊಂಡಿದ್ದಾರೆ. ಅವರಿಗೆ ಕೆಲವರು ಅಭಿನಂದನೆ ತಿಳಿಸಿದರೆ, ಇನ್ನೂ ಕೆಲವರು ವಿವಾಹವನ್ನು ಟೀಕೆ ಮಾಡಿದ್ದರು. ಭಕ್ತಿಗೀತೆ ಹಾಡಿದ ಬಳಿಕ ಆದ ಘಟನೆ ಬಗ್ಗೆ ಸುಹಾನಾ ಮಾಹಿತಿ ನೀಡಿದ್ದಾರೆ.
ಸುಹಾನಾ ಅವರು ಸರಿಗಮಪದಲ್ಲಿ ಹಿಂದೂ ಗೀತೆ ಹಾಡಿದ್ದಕ್ಕೆ ಚರ್ಚೆಗೆ ಒಳಗಾದರು. ಅವರ ಮೇಲೆ ದಾಳಿ ಪ್ರಯತ್ನ ಕೂಡ ಆಯಿತು. ಇದಾದ ಬಳಿಕ ಸುಹಾನಾಗೆ ಸಾಕಷ್ಟು ಭದ್ರತೆ ನೀಡಲಾಯಿತಂತೆ. ವಾಹಿನಿಯವರು ಸಚಿವರ ಬಳಿ ಮಾತನಾಡಿದ ಭದ್ರತೆ ಒದಗಿಸಿದ್ದರು.
ಸುಹಾನಾ ಉಳಿದುಕೊಂಡಿದ್ದ ಹೋಟೆಲ್ ರೂಂ ಅಕ್ಕ-ಪಕ್ಕದಲ್ಲಿ ಪೊಲೀಸರು ಇರುತ್ತಿದ್ದರು. ಯಾರಾದರೂ ಬಂದು ರೂಂ ಬೆಲ್ ಮಾಡಿದರೆ ಬಾಗಿಲು ತೆಗೆಯುವುದಕ್ಕೂ ಮೊದಲು ಇಂಟರ್ಕಾಮ್ ಮೂಲಕ ರಿಸೆಪ್ಶನ್ಗೆ ಕರೆ ಮಾಡಿ, ಅವರು ಸಿಸಿಟಿವಿಯಲ್ಲಿ ಯಾರು ಎಂದು ನೋಡಿ ಆ ಬಳಿಕವೇ ಸುಹಾನಾ ಬಾಗಿಲು ತೆಗೆಯಬೇಕಿತ್ತು. ಹೋಟೆಲ್ ಹೋಗುವಾಗ ಇವರ ವಾಹನದ ಹಿಂದೆ ಮುಂದೆ ಪೊಲೀಸರು ಇರುತ್ತಿದ್ದರು. ವಾಶ್ರೂಂ ಹೋಗುವಾಗಲೂ ಇವರಿಗೆ ಭದ್ರತೆ ಇರುತ್ತಿತ್ತು.
‘ಪ್ರೀತಿ ಹಂಚುವವರು ಹೆಚ್ಚಿದ್ದರು. ದ್ವೇಷಿಸಿಸುವರು ಇದ್ದರು. ಶೋ ಬೇಡ ಬಿಡು ಎಂದು ಹೇಳಿದ್ದರು. ಮಾನಸಿಕವಾಗಿ ಹಿಂಸೆ ಆಯಿತು. ಮನೆಯಲ್ಲೂ ಪೊಲೀಸರು ಇರುತ್ತಿದ್ದರು. ಆ ಸಮಯದಲ್ಲಿ ನಿತೀನ್ ತುಂಬಾ ಸಹಾಯ ಮಾಡಿದ್ದ. ಬೆಂಬಲಕ್ಕೆ ನಿಂತ. ಸರಿಗಮಪ ಚೆನ್ನಾಗಿ ಆಯ್ತು. ಆ ಶೋನಿಂದ ಸಾಕಷ್ಟು ಕಾನ್ಸರ್ಟ್ ಸಿಕ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ: ಮಂತ್ರ ಮಾಂಗಲ್ಯ ಮಾಡಿಕೊಂಡ ಸುಹಾನಾ; ನಿತೀನ್ ಜೊತೆ ಹೊಸ ಬಾಳಿಗೆ ಕಾಲಿಟ್ಟ ಸಿಂಗರ್
ಸುಹಾನಾ ಹಾಗೂ ನಿತೀನ್ 16 ವರ್ಷಗಳ ಹಿಂದೆ ಪರಿಚಯ ಆದರು. ಆ ಬಳಿಕ ಇವರ ಮಧ್ಯೆ ಪ್ರೀತಿ ಮೂಡಿತು. ಪ್ರತಿ ಹಂತದಲ್ಲೂ ಸುಹಾನಾ ಬೆಂಬಲಕ್ಕೆ ನಿತೀನ್ ನಿಂತಿದ್ದಾರೆ. ಈ ವಿಷಯಕ್ಕೆ ಸುಹಾನಾಗೆ ಖುಷಿ ಇದೆ. ಸುಹಾನಾ ಅವರು ಸಾಕಷ್ಟು ಕಾನ್ಸರ್ಟ್ಗಳನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:06 am, Thu, 9 April 26