Rajinikanth: ರಜನಿಕಾಂತ್ 170ನೇ ಚಿತ್ರ ಘೋಷಣೆ; ‘ಜೈ ಭೀಮ್​’ ನಿರ್ದೇಶಕನ ಜೊತೆ ಸೂಪರ್​ ಸ್ಟಾರ್ ಸಿನಿಮಾ  

Thalaivar 170: ಇಂದು (ಮಾರ್ಚ್​ 2) ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಅವರ ಜನ್ಮದಿನ. ಈ ವಿಶೇಷ ದಿನದಂದು ಲೈಕಾ ಸಂಸ್ಥೆ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.

Rajinikanth: ರಜನಿಕಾಂತ್ 170ನೇ ಚಿತ್ರ ಘೋಷಣೆ; ‘ಜೈ ಭೀಮ್​’ ನಿರ್ದೇಶಕನ ಜೊತೆ ಸೂಪರ್​ ಸ್ಟಾರ್ ಸಿನಿಮಾ  
ರಜನಿಕಾಂತ್

Updated on: Mar 02, 2023 | 2:41 PM

ರಜನಿಕಾಂತ್ (Rajinikanth) ಅವರ ವಯಸ್ಸು 72 ದಾಟಿದೆ. ಈ ವಯಸ್ಸಿನಲ್ಲೂ ಅವರು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 169ನೇ ಸಿನಿಮಾ ಆಗಿ ‘ಜೈಲರ್​’ ಬರುತ್ತಿದೆ. ಈ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿರುವಾಗಲೇ ರಜನಿ ಅವರ 170ನೇ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಜೈ ಭೀಮ್​’ ಖ್ಯಾತಿಯ ಟಿಜಿ ಜ್ಞಾನವೇಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅನಿರುದ್ಧ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್​’ (Lyca Production) ಬಂಡವಾಳ ಹೂಡುತ್ತಿದೆ. ಈ ಮೊದಲು ರಜನಿ ನಟನೆಯ ‘ದರ್ಬಾರ್’ ಹಾಗೂ ‘ಕಾಲ’ ಚಿತ್ರಗಳು ಇದೇ ಪ್ರೊಡಕ್ಷನ್​ಹೌಸ್ ಅಡಿಯಲ್ಲಿ ಸಿದ್ಧಗೊಂಡಿದ್ದವು.

‘ಜೈಲರ್​’ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ಈ ಚಿತ್ರದಲ್ಲಿ ರಜನಿ ಜೊತೆ ಶಿವರಾಜ್​ಕುಮಾರ್ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಚಿತ್ರದ ಶೂಟಿಂಗ್ ನಡೆದಿತ್ತು. ಸೆಟ್​ನ ಫೋಟೋಗಳು ವೈರಲ್ ಆಗಿದ್ದವು. ನೆಲ್ಸನ್ ದಿಲೀಪ್​ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಾಕಿ ಶ್ರಾಫ್​, ಯೋಗಿ ಬಾಬು, ರಮ್ಯಾ ಕೃಷ್ಣ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ. ಹೀಗಿರುವಾಗಲೇ ರಜನಿ ಹೊಸ ಚಿತ್ರದ ಘೋಷಣೆ ಆಗಿದೆ.

ಇದನ್ನೂ ಓದಿ
ವಿಶೇಷ ಫೋಟೋ ಹಂಚಿಕೊಂಡು ದೀಪಾವಳಿ ವಿಶ್ ಮಾಡಿದ ನಟಿ ತಮನ್ನಾ
Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
ಸಮುದ್ರ ತೀರದಲ್ಲಿ ಜೋಕಾಲಿ ಆಡುತ್ತ ವೆಕೇಶನ್ ಎಂಜಾಯ್ ಮಾಡಿದ ನಟಿ ತಮನ್ನಾ
ತಮನ್ನಾ ರೀತಿ ಡ್ಯಾನ್ಸ್​ ಮಾಡ್ತಾರಾ ಈ ಸೆಲೆಬ್ರಿಟಿಗಳು? ಹೊಸ ಸವಾಲು ಹಾಕಿದ ‘ಮಿಲ್ಕಿ ಬ್ಯೂಟಿ’

ಇದನ್ನೂ ಓದಿ: Jailer: ಮಂಗಳೂರಿನಲ್ಲಿ ‘ಜೈಲರ್​’ ಶೂಟಿಂಗ್; ಒಟ್ಟಿಗೆ ಕುಳಿತು ಹರಟೆ ಹೊಡೆದ ಶಿವಣ್ಣ-ರಜನಿ

ಇಂದು (ಮಾರ್ಚ್​ 2) ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಅವರ ಜನ್ಮದಿನ. ಈ ವಿಶೇಷ ದಿನದಂದು ಲೈಕಾ ಸಂಸ್ಥೆ ಟ್ವಿಟರ್ ಮೂಲಕ ಮಾಹಿತಿ ನೀಡಿದೆ. ಈ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಸೃಷ್ಟಿ ಆಗಿದೆ. ‘ಜೈ ಭೀಮ್​’ ಚಿತ್ರ 2021ರಲ್ಲಿ ರಿಲೀಸ್ ಆಯಿತು. ಸೂರ್ಯ ನಟನೆಯ ಈ ಚಿತ್ರ ಸೂಪರ್ ಹಿಟ್ ಆಯಿತು.  ಈ ಚಿತ್ರಕ್ಕೆ ಟಿಜಿ ಜ್ಞಾನವೇಲ್ ನಿರ್ದೇಶನ ಮಾಡಿದ್ದರು. ಬಳಿಕ ಅವರ ಬೇಡಿಕೆ ಹೆಚ್ಚಿದೆ. ಈಗ ರಜನಿ ಜೊತೆ ಕೆಲಸ ಮಾಡುವ ಅವಕಾಶ ಅವರದ್ದಾಗಿದೆ.

ರಜನಿಕಾಂತ್ ಅವರು ಈ ಮೊದಲು ರಾಜಕೀಯಕ್ಕೆ ಎಂಟ್ರಿ ಕೊಡುವ ಪ್ರಯತ್ನ ಮಾಡಿದ್ದರು. ಹೊಸ ಪಕ್ಷ ಕಟ್ಟಲೂ ಮುಂದಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಅವರಿಗೆ ಅನಾರೋಗ್ಯ ಕಾಡಿತು. ಈ ಕಾರಣಕ್ಕೆ ಪಕ್ಷ ಕಟ್ಟುವ ನಿರ್ಧಾರದಿಂದ ಹಿಂದೆ ಸರಿದರು. ಈಗ ಅವರು ಬ್ಯಾಕ್​ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Thu, 2 March 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us