Tamannaah: ಒಂದೇ ಹಾಡಿಗೆ 5 ಕೋಟಿ ರೂ. ಡಿಮ್ಯಾಂಡ್​ ಮಾಡಿದ್ರಾ ತಮನ್ನಾ? ಬಾಲಯ್ಯ ಚಿತ್ರದ ಗಾಸಿಪ್​ಗೆ ನಟಿ ಪ್ರತಿಕ್ರಿಯೆ

ನಂದಮೂರಿ ಬಾಲಕೃಷ್ಣ ಅವರ 108ನೇ ಸಿನಿಮಾದಲ್ಲಿನ ಒಂದು ಐಟಂ ಸಾಂಗ್​ನಲ್ಲಿ ಕುಣಿಯುವಂತೆ ತಮನ್ನಾಗೆ ಆಫರ್​ ನೀಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಅದಕ್ಕೆ ನಟಿಯ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿದೆ.

Tamannaah: ಒಂದೇ ಹಾಡಿಗೆ 5 ಕೋಟಿ ರೂ. ಡಿಮ್ಯಾಂಡ್​ ಮಾಡಿದ್ರಾ ತಮನ್ನಾ? ಬಾಲಯ್ಯ ಚಿತ್ರದ ಗಾಸಿಪ್​ಗೆ ನಟಿ ಪ್ರತಿಕ್ರಿಯೆ
ತಮನ್ನಾ ಭಾಟಿಯಾ, ನಂದಮೂರಿ ಬಾಲಕೃಷ್ಣ

Updated on: May 21, 2023 | 12:10 PM

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಅವರ ಬಗ್ಗೆ ಕೇಳಿಬಂದ ಗಾಸಿಪ್​ಗಳು ಹಲವು. ಹಾಗಂತ ಅವರು ಎಲ್ಲದಕ್ಕೂ ಸ್ಪಷ್ಟನೆ ನೀಡಲ್ಲ. ಒಂದು ವೇಳೆ ಅವರ ವೃತ್ತಿಜೀವನಕ್ಕೆ ಡ್ಯಾಮೇಜ್​ ಆಗುವಂತಹ ಗಾಸಿಪ್​ (Gossip) ಕೇಳಿಬಂದರೆ ಆಗ ಪ್ರತಿಕ್ರಿಯೆ ನೀಡುವುದು ಅನಿವಾರ್ಯ ಆಗುತ್ತದೆ. ಅದರಲ್ಲೂ ಆ ಗಾಸಿಪ್​ನಲ್ಲಿ ದೊಡ್ಡ ದೊಡ್ಡ ಹೀರೋ ಮತ್ತು ನಿರ್ದೇಶಕ-ನಿರ್ಮಾಪಕರ ಹೆಸರು ಪ್ರಸ್ತಾಪ ಆಗಿದ್ದರೆ ವಿವಾದ ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಅಂಥದ್ದಕ್ಕೆಲ್ಲ ಅವಕಾಶ ನೀಡುವುದು ಬೇಡ ಎಂಬ ಕಾರಣಕ್ಕೆ ತಮನ್ನಾ ಅವರು ಆರಂಭದಲ್ಲೇ ಒಂದು ಗಾಸಿಪ್​ಗೆ ಅಂತ್ಯ ಹಾಡಿದ್ದಾರೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಸಿನಿಮಾದಲ್ಲಿನ ಐಟಂ ಡ್ಯಾನ್ಸ್​ ಬಗ್ಗೆ ಹಬ್ಬಿದ್ದ ಅಂತೆ-ಕಂತೆಗೆ ತಮನ್ನ ಭಾಟಿಯಾ ಅವರು ಫುಲ್​ ಸ್ಟಾಪ್​ ಇಟ್ಟಿದ್ದಾರೆ.

ಬಾಲಕೃಷ್ಣ ನಟನೆಯ 108ನೇ ಸಿನಿಮಾಗೆ ಅನಿಲ್​ ರವಿಪುಡಿ ನಿರ್ದೇಶಕ. ಈ ಸಿನಿಮಾದಲ್ಲಿನ ಒಂದು ಐಟಂ ಸಾಂಗ್​ನಲ್ಲಿ ಕುಣಿಯುವಂತೆ ತಮನ್ನಾಗೆ ಆಫರ್​ ನೀಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಷ್ಟೇ ಅಲ್ಲದೇ, ಆ ಹಾಡಿನಲ್ಲಿ ಡ್ಯಾನ್ಸ್​ ಮಾಡಲು ತಮನ್ನಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಕೂಡ ಗಾಸಿಪ್​ ಮಂದಿ ಮಾತನಾಡಿಕೊಂಡಿದ್ದರು. ಅದು ತಮನ್ನಾ ಗಮನಕ್ಕೂ ಬಂದಿದ್ದು, ಸ್ಪಷ್ಟನೆ ನೀಡಿದ್ದಾರೆ.

ತಮನ್ನಾ ಭಾಟಿಯಾ-ವಿಜಯ್​ ವರ್ಮಾ ಮನೆಯಲ್ಲಿ ನಡೆಯುತ್ತಿದೆ ಮದುವೆ ಮಾತುಕತೆ?

‘ನಿರ್ದೇಶಕ ಅನಿಲ್​ ರವಿಪುಡಿ ಅವರ ಜೊತೆ ಕೆಲಸ ಮಾಡುವುದನ್ನು ನಾನು ಯಾವಾಗಲೂ ಎಂಜಾಯ್​ ಮಾಡಿದ್ದೇನೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಅವರ ಬಗ್ಗೆಯೂ ನನಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಸಿನಿಮಾದಲ್ಲಿನ ಹಾಡಿನಲ್ಲಿ ನಾನು ಇರುವುದಾಗಿ ಗಾಸಿಪ್​ ಹಬ್ಬಿರುವುದು ನನಗೆ ಬೇಸರ ಮೂಡಿಸಿದೆ. ಆಧಾರ ಇಲ್ಲದ ಆರೋಪ ಮಾಡುವುದಕ್ಕೂ ಮುನ್ನ ನೀವು ಸ್ವಲ್ಪ ರಿಸರ್ಚ್​ ಮಾಡಿಕೊಳ್ಳಿ’ ಎಂದು ಗಾಸಿಪ್​ ಮಂದಿಗೆ ತಮನ್ನಾ ತಿರುಗೇಟು ನೀಡಿದ್ದಾರೆ.

ತಮನ್ನಾ ಭಾಟಿಯಾ ಮತ್ತು ಬಾಲಿವುಡ್​ ನಟ ವಿಜಯ್​ ವರ್ಮಾ ನಡುವೆ ಇತ್ತೀಚೆಗೆ ಆಪ್ತತೆ ಹೆಚ್ಚಿದೆ. ಹಾಗಾಗಿ ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಕಾರಣದಿಂದಲೂ ತಮನ್ನಾ ಅವರು ಆಗಾಗ ಸುದ್ದಿ ಆಗುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ ತಮನ್ನಾ ಮತ್ತು ವಿಜಯ್​ ವರ್ಮಾ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಲವ್​ ಬಗ್ಗೆ ಇವರಿಬ್ಬರು ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us