ಯಾರೇ ಬಿಟ್ಟರೂ ಕರ್ಮ ಬಿಡಲಿಲ್ಲ; ಮಾಡಿದ ತಪ್ಪಿಗೆ ಸೌಂದರ್ಯಾಗೆ ದೊಡ್ಡ ಶಿಕ್ಷೆ

ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿ ಸೌಂದರ್ಯಾ ಶೆಟ್ಟಿ ಆಸಿಯಾ ಫಿರ್ದೋಸ್ ಅತ್ತಾಗ ಅಣಕಿಸಿ ಟೀಕೆಗೆ ಒಳಗಾಗಿದ್ದರು. ಆದರೆ ವಿಮಾನದ ಕಿರಿದಾದ ಜಾಗದಲ್ಲಿ ಮಹಾಕವಿ ಮಂಜು ಮಾತುಗಳಿಂದ ಇರಿಟೇಟ್ ಆದ ಸೌಂದರ್ಯಾ ತಾವೇ ಕಣ್ಣೀರಿಟ್ಟು ಹೊರಬಂದಿದ್ದಾರೆ. ಮಾಡಿದ ತಪ್ಪಿಗೆ ಕರ್ಮ ತಕ್ಷಣವೇ ಶಿಕ್ಷೆ ನೀಡಿದೆ ಎಂದು ವೀಕ್ಷಕರು ಚರ್ಚಿಸುತ್ತಿದ್ದಾರೆ.

ಯಾರೇ ಬಿಟ್ಟರೂ ಕರ್ಮ ಬಿಡಲಿಲ್ಲ; ಮಾಡಿದ ತಪ್ಪಿಗೆ ಸೌಂದರ್ಯಾಗೆ ದೊಡ್ಡ ಶಿಕ್ಷೆ
ಸೌಂದರ್ಯಾ ಶೆಟ್ಟಿ
Image Credit source: Colors Kannada

Updated on: Sep 11, 2026 | 2:48 PM

ಮುಖ್ಯಾಂಶಗಳು

  • ಆಸಿಯಾ ಅತ್ತಿದ್ದನ್ನು ಅಣಕಿಸಿದ್ದ ಸೌಂದರ್ಯಾ ಶೆಟ್ಟಿ
  • ವಿಮಾನದ ಸಣ್ಣ ಜಾಗದಲ್ಲಿ ಕಣ್ಣೀರು ಹಾಕಿದ ನಟಿ
  • ಬಿಗ್ ಬಾಸ್ ಮನೆಯಲ್ಲಿ ಕೆಲಸ ಮಾಡಿತಾ 'ಕರ್ಮ'ದ ಫಲಾಫಲ?

ಸೌಂದರ್ಯಾ ಶೆಟ್ಟಿ ಅವರು ವಿವಿಧ ರೀತಿಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಅವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ. ಕರ್ಮ ಅವರನ್ನು ಬಿಟ್ಟು ಬಿಡದೆ ಕಾಡಿದೆ. ಕೊನೆಗೆ ಬೇರೆ ದಾರಿ ಇಲ್ಲದೆ ಅವರು ಕಣ್ಣೀರು ಹಾಕಿದ್ದಾರೆ. ಈ ಘಟನೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಆಸಿಯಾ ಫಿರ್ದೋಸ್ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ಆಡಲು ಮುಂದಾದರು. ಅವರು ಹಠ ಬಿಡದೆ ಟಾಸ್ಕ್ ಆಡುತ್ತೇನೆ ಎಂದು ಕುಳಿತರು. ಆದರೆ, ಇದಕ್ಕೆ ಅವರಿಗೆ ಅವಕಾಶ ಸಿಗಲೇ ಇಲ್ಲ. ಕೆಲವರು ಇದನ್ನು ವಿರೋಧಿಸಿದರು. ಆಸಿಯಾ ಅವರೇ ಹೇಳಿಕೊಂಡಂತೆ ಈ ರೀತಿಯ ಸ್ಥಿತಿಯಲ್ಲಿ ಅವರಿಗೆ ಕಣ್ಣೀರು ಬರುತ್ತದೆಯಂತೆ. ಆಗಲೂ ಹಾಗೆಯೇ ಆಯಿತು.

ಆಸಿಯಾ ಅವರು ಕಣ್ಣೀರು ಹಾಕಲು ಆರಂಭಿಸಿದರು. ‘ನನಗೆ ಅನ್ಯಾಯ ಆಗುತ್ತಿದೆ’ ಎಂಬರ್ಥದಲ್ಲಿ ಮಾತನಾಡಿದರು. ಇದು ಸೌಂದರ್ಯಾ ಶೆಟ್ಟಿ ಅವರನ್ನು ಟ್ರಿಗರ್ ಮಾಡಿತು. ಅವರು ನೇರವಾಗಿ ಕೂಗಾಡಲು ಆರಂಭಿಸಿದರು. ಆಸಿಯಾ ಯಾವ ರೀತಿಯಲ್ಲಿ ಅಳುತ್ತಿದ್ದರೋ ಅದೇ ರೀತಿ ಮುಖ ಮಾಡುತ್ತಾ ಅಣಕಿಸೋಕೆ ಆರಂಭಿಸಿದರು. ಸೌಂದರ್ಯಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ.

ಇದನ್ನೂ ಓದಿ: ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಆಸಿಯಾನ ಅಣಕಿಸಿದ ವಿಡಿಯೋ ವೈರಲ್

ಸೌಂದರ್ಯಾ ಶೆಟ್ಟಿ ಅವರು ಈ ವಾರ ಬಿಗ್ ಬಾಸ್ ಮನೆಯಲ್ಲಿರೋ ವಿಮಾನದಲ್ಲಿ ವಾಸವಿದ್ದಾರೆ. ಅಲ್ಲಿ ಜಾಗ ಕಿರಿದು. ಹೀಗಾಗಿ, ಯಾರೇ ಚಿಕ್ಕದಾಗಿ ಮಾತನಾಡಿದರೂ ಅದು ದೊಡ್ಡದಾಗಿ ಕೇಳುತ್ತದೆ. ಮಾಡರ್ನ್ ಮಹಾಕವಿ ಮಂಜು ಅವರು ಮಾತನಾಡಿದ್ದು ಸೌಂದರ್ಯಾ ಶೆಟ್ಟಿಗೆ ಇರಿಟೇಶನ್ ಅನಿಸಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕೋಕೆ ಆರಂಭಿಸಿದ್ದಾರೆ. ವಿಮಾನ ಡೋರ್ ತೆಗೆಯುವ ಪ್ರಯತ್ನವನ್ನು ಕೂಡ ಅವರು ಮಾಡಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಅವರನ್ನು ಮನೆಯವರು ಸಮಾಧಾನ ಮಾಡಲು ಪ್ರಯತ್ನಿಸದರೂ ಅದು ಆಗಿಲ್ಲ. ಕೊನೆಗೆ ವಿಮಾನದಿಂದ ಹೊರ ಬಂದು ಗಾರ್ಡನ್ ಏರಿಯಾದಲ್ಲಿ ಅಳುತ್ತಾ ಕುಳಿತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us