AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಸ್ಕ್​ ನೆಪದಲ್ಲಿ ಇಡೀ ಬಿಗ್ ಬಾಸ್ ಮನೆಯನ್ನು ಕೊಚ್ಚೆಗುಂಡಿ ಮಾಡಿದ ಸ್ಪರ್ಧಿಗಳು

ಬಿಗ್ ಬಾಸ್ ಮನೆಯನ್ನು ಸ್ಪರ್ಧಿಗಳು ಟಾಸ್ಕ್ ನೆಪದಲ್ಲಿ ಕೊಚ್ಚೆಗುಂಡಿ ಮಾಡಿದ್ದಾರೆ. ರಾಕ್ಷಸರು ಮತ್ತು ಗಂಧರ್ವರ ಆಟದಲ್ಲಿ ಆಹಾರ, ಶ್ಯಾಂಪೂ ಹಾಗೂ ಲೋಷನ್ ನೆಲಕ್ಕೆ ಚೆಲ್ಲಿ, ಪ್ರಾಪರ್ಟಿ ಹಾಳುಗೆಡವಿದ್ದಾರೆ. ನೈರ್ಮಲ್ಯ ಮತ್ತು ಅಚ್ಚುಕಟ್ಟಿಲ್ಲದ ಸ್ಪರ್ಧಿಗಳ ಈ ಬೇಜವಾಬ್ದಾರಿ ನಡೆಗೆ ವೀಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಾರಾಂತ್ಯದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಟಾಸ್ಕ್​ ನೆಪದಲ್ಲಿ ಇಡೀ ಬಿಗ್ ಬಾಸ್ ಮನೆಯನ್ನು ಕೊಚ್ಚೆಗುಂಡಿ ಮಾಡಿದ ಸ್ಪರ್ಧಿಗಳು
ಬಿಗ್ ಬಾಸ್ Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on: Oct 09, 2026 | 7:37 AM

Share

ಮುಖ್ಯಾಂಶಗಳು

  • ಟಾಸ್ಕ್ ನೆಪದಲ್ಲಿ ಅದ್ದೂರಿ ಮನೆ ಕೊಚ್ಚೆಗುಂಡಿ
  • ಅಸಮಾಧಾನ ಹೊರಹಾಕಿದ ವೀಕ್ಷಕರು
  • ಬಿಗ್ ಬಾಸ್ ನಿಯಮಗಳಿಗೆ ಎಳ್ಳುನೀರು?

‘ಬಿಗ್ ಬಾಸ್’ ಮನೆ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಹಾಗೂ ಹಣ ಎರಡೂ ಖರ್ಚಾಗುತ್ತದೆ. ಮೂರು ತಿಂಗಳ ಕಾಲ ಸ್ಪರ್ಧಿಗಳಿಗೆ ಇದುವೇ ಮನೆ. ಮನೆ ಎಂದಮೇಲೆ ಅದನ್ನು ಉತ್ತಮವಾಗಿ ನೋಡಿಕೊಳ್ಳುವುದು ಸ್ಪರ್ಧಿಗಳ ಜವಾಬ್ದಾರಿ ಆಗಿರುತ್ತದೆ. ಆದರೆ, ಇದನ್ನು ಸ್ಪರ್ಧಿಗಳು ಮರೆತಿದ್ದಾರೆ. ಟಾಸ್ಕ್ ನೆಪದಲ್ಲಿ ಇಡೀ ಮನೆಯನ್ನು ಕೊಚ್ಚೆಗುಂಡಿ ಮಾಡಿದ್ದಾರೆ. ಈ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಗೆ ಬಂದ ಸ್ಪರ್ಧಿಗಳನ್ನು ನೋಡಿ ವೀಕ್ಷಕರಿಗೆ ಅಸಮಾಧಾನ ಉಂಟಾಗಿದೆ. ಸ್ಪರ್ಧಿಗಳು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಈ ವಿಷಯ ಚರ್ಚೆಗೆ ಕಾರಣ ಆಗಿದೆ. ಬಿಗ್ ಬಾಸ್ ಮನೆಯನ್ನು ಹಾಳು ಮಾಡಿದ ರೀತಿ ನೋಡಿ ವೀಕ್ಷಕರಿಗೆ ಬೇಸರ ಆಗಿದೆ.

ಈ ಬಾರಿಯ ಬಿಗ್ ಬಾಸ್ ಮನೆ ತುಂಬಾನೇ ಅದ್ಭುತವಾಗಿದೆ. ಅತ್ಯಂತ ಅದ್ದೂರಿಯಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ಮನೆಯ ಫ್ಲೋರ್ ಕೂಡ ಉತ್ತಮವಾಗಿದೆ. ಆದರೆ, ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್ ವೇಳೆ ಟೊಮ್ಯಾಟೋ ಜ್ಯೂಸ್, ಅನ್ನವನ್ನು ಎದುರಾಳಿಯ ಮೇಲೆ ಹಾಕಿದ್ದಾರೆ. ಇದು ನೆಲಕ್ಕೆ ಬಿದ್ದಿದೆ. ಇನ್ನು, ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಇಡೀ ಮನೆಯ ಅಂದವನ್ನು ಸ್ಪರ್ಧಿಗಳು ಕೆಡಿಸಿದ್ದಾರೆ.

ಇನ್ನು ಬಾತ್​ರೂಂ ಭಾಗದಲ್ಲಿ ಶ್ಯಾಂಪೂ, ಬಾಡಿ ಲೋಷನ್ ಸೇರಿದಂತೆ ಎಲ್ಲವನ್ನೂ ನೆಲಕ್ಕೆ ಚೆಲ್ಲಲಾಗಿದೆ. ಡಸ್ಟ್​ಬಿನ್ ಕಸವನ್ನು ನೆಲದ ಮೇಲೆ ಎಸೆಯಲಾಗಿದೆ. ಇವು ಬಿಗ್ ಬಾಸ್ ಮನೆಯ ಪ್ರಾಪರ್ಟಿ ನಾಶದ ಭಾಗವೇ ಆಗಿದೆ. ಈ ವಿಷಯವನ್ನು ವೀಕೆಂಡ್​ನಲ್ಲಿ ಗಂಭೀರವಾಗಿ ಪರಿಗಣಿಸಿ ಚರ್ಚಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಮಂಜು ಈ ವಾರ ಎಲಿಮಿನೇಟ್ ಫಿಕ್ಸ್’; ವಿಶೇಷ ಅಧಿಕಾರ ಬಳಸ್ತಾರಾ ಸುದೀಪ್?

ಬಿಗ್ ಬಾಸ್ ಮನೆಯ ಪ್ರಾಪರ್ಟಿ ಹಾಗೂ ಆಹಾರ ಪದಾರ್ಥಗಳನ್ನು ಈ ರೀತಿ ಪೋಲು ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆಹಾರ ಮತ್ತು ಸ್ವಚ್ಛತೆಗೆ ಕನಿಷ್ಠ ಗೌರವ ನೀಡದ ಸ್ಪರ್ಧಿಗಳಿಗೆ ಸುದೀಪ್ ಅವರು ಈ ವಾರಾಂತ್ಯದ ಸಂಚಿಕೆಯಲ್ಲಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮನೆ ಹಾಳು ಮಾಡಿದ ಸ್ಪರ್ಧಿಗಳಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಬಿಗ್ ಬಾಸ್ ಆಸ್ತಿಯನ್ನು ಗೌರವಿಸುವುದನ್ನು ಕಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More