ಬಿಗ್ ಬಾಸ್: ಜನರು ಕೇಳಿಸಿಕೊಳ್ಳಲು ಸಾಧ್ಯವಾಗದಷ್ಟು ಅಶ್ಲೀಲವಾಗಿ ಮಾತನಾಡಿದ ಮಂಜ

ಬಿಗ್ ಬಾಸ್ ಕನ್ನಡ: ಮೊದಲು ರಾಕ್ಷಸನಾಗಿದ್ದ ಮಂಜ ಈಗ ಗಂಧರ್ವನಾಗಿದ್ದಾರೆ. ಆದ್ದರಿಂದ ಅವರು ಬಾಯಿಗೆ ಬಂದಂತೆ ಮಾತನಾಡುವಂತಿಲ್ಲ. ರಾಕ್ಷಸರ ಮೇಲೆ ಕೋಪ ಮಾಡಿಕೊಳ್ಳುವಂತಿಲ್ಲ. ರಾಕ್ಷಸರು ಹೇಳಿದ ಎಲ್ಲ ಕೆಲಸವನ್ನೂ ಮಂಜ ಮಾಡಬೇಕಾಗಿದೆ. ಆದರೂ ಕೂಡ ಮಂಜ ತುಂಬ ಕೆಟ್ಟದಾಗಿ, ಅಶ್ಲೀಲವಾಗಿ ಮಾತನಾಡಿದ್ದಾರೆ.

ಬಿಗ್ ಬಾಸ್: ಜನರು ಕೇಳಿಸಿಕೊಳ್ಳಲು ಸಾಧ್ಯವಾಗದಷ್ಟು ಅಶ್ಲೀಲವಾಗಿ ಮಾತನಾಡಿದ ಮಂಜ
Manja
Image Credit source: Colors Kannada

Updated on: Oct 08, 2026 | 10:47 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮಾಡರ್ನ್ ಮಹಾಕವಿ ಮಂಜ ಮೊದಲಿನಿಂದಲೂ ಅಬ್ಬರದ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ ಬಂದಾಗ ಅವರ ವರ್ತನೆ ಬದಲಾಗಬೇಕಿತ್ತು. ಮೊದಲು ರಾಕ್ಷಸರ ತಂಡದಲ್ಲಿ ಮಂಜ ಇದ್ದರು. ಆಗ ಆರ್ಭಟಕ್ಕೆ ಹೊಸ ಹುರುಪು ಬಂದಿತ್ತು. ನಂತರದಲ್ಲಿ ಅವರು ಗಂಧರ್ವರ ಪಾತ್ರ ನಿಭಾಯಿಸುವಾಗ ಎಲ್ಲವೂ ಉಲ್ಟಾಪಲ್ಟಾ ಆಗಬೇಕಿತ್ತು. ರಾಕ್ಷಸರು ಹೇಳಿದಂತೆ ಕೇಳುವುದು ಮಂಜ ಅವರಿಗೆ ಅನಿವಾರ್ಯವಾಗಬೇಕಿತ್ತು. ಹಾಗಿದ್ದರೂ ಕೂಡ ಮಂಜ ತುಂಬಾ ಕೀಳುಮಟ್ಟದ ಭಾಷೆ ಬಳಸಿದ್ದಾರೆ.

ಟಾಸ್ಕ್ ನಿಭಾಯಿಸುವಾಗ ಮಂಜನಿಗೆ ಸೋಲಿನ ಭಯ ಕಾಣಿಸಿದೆ. ಆಗ ಅವರು ಅಶ್ಲೀಲವಾದ ಭಾಷೆಯಲ್ಲಿ ಮಾತನಾಡಿದ್ದಾರೆ. ಯಶಸ್ ಅವರ ಕುಟುಂಬದವರ ಬಗ್ಗೆ ಮಂಜ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಆ ಪದಗಳನ್ನು ಟಿವಿಯಲ್ಲಿ ಪ್ರಸಾರ ಮಾಡಲು ಕೂಡ ಸಾಧ್ಯವಿಲ್ಲ. ಅಷ್ಟು ಬೀಪ್ ಪದಗಳನ್ನು ಮಂಜ ಬಳಸಿದ್ದಕ್ಕೆ ಇನ್ನುಳಿದ ಸ್ಪರ್ಧಿಗಳಿಗೆ ಅಸಹ್ಯ ಎನಿಸಿದೆ.

ಈ ಮೊದಲು ತಾವು ರಾಕ್ಷಸರಾಗಿದ್ದಾಗ ಮಂಜ ಅವರು ಯಶಸ್ ಹಾಗೂ ಕಿರಣ್ ಶಾಸ್ತ್ರಿ ಬಗ್ಗೆ ಹೀನಾಯವಾದ ಮಾತುಗಳನ್ನು ಆಡಿದ್ದರು. ‘ಲೇ ಮೂಲಂಗಿ.. ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ. ಕ್ಯಾಮರಾಗೆ ತೋರಿಸಲು ಸಾಧ್ಯವಾಗದ ಕಳ್ಳ ನನ್ನ ಮಗ ನೀನು’ ಎಂದು ಮಂಜ ಹೇಳಿದ್ದರು. ಅದನ್ನು ಒಂದು ಹಂತಕ್ಕೆ ಸಹಿಸಿಕೊಳ್ಳಬಹುದಿತ್ತು. ಆದರೆ ಅಕ್ಟೋಬರ್ 8ರ ಸಂಚಿಕೆಯಲ್ಲಿ ಅತಿ ಹೊಲಸು ಮಾತುಗಳನ್ನು ಮಂಜ ಆಡಿದ್ದಾರೆ.

ಸಾಮಾನ್ಯ ಸಮಯದಲ್ಲಿ ಎಲ್ಲರ ಮೇಲೂ ಕೂಗಾಡುವ ಮಂಜ ಅವರು ರಾಕ್ಷಸರು ಮತ್ತು ಗಂಧರ್ವರು ಟಾಸ್ಕ್ ಅನ್ನು ಆರಂಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಂಭೀರವಾಗಿ ಪರಿಗಣಿಸಿದ್ದರು. ರಾಕ್ಷಸರು ಹೇಳಿದ ಬಹುತೇಕ ಎಲ್ಲ ಕೆಲಸವನ್ನೂ ಮಂಜ ಮಾಡುತ್ತಿದ್ದರು. ಅದು ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿದ್ದರೂ ಕೂಡ ಎಲ್ಲವನ್ನೂ ಸಹಿಸಿಕೊಂಡು ಟಾಸ್ಕ್ ನಿಭಾಯಿಸುತ್ತಿದ್ದರು. ಆದರೆ ಅಂತಿಮವಾಗಿ ತುಂಬಾ ಅಸಹ್ಯವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು

ಮಂಜ ಆಡಿದ ಮಾತುಗಳಿಗೆ ವೀಕ್ಷಕರಿಂದಲೂ ಕೂಡ ವಿರೋಧ ವ್ಯಕ್ತವಾಗುತ್ತಿದೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ‘ಈ ವಾರಾಂತ್ಯದಲ್ಲಿ ಅವನು ಧ್ವಂಸ ಆಗುತ್ತಾನೆ. ಅವನು ಹೊರಗೆ ಹೋಗಬೇಕು’ ಎಂದು ಸ್ಪರ್ಧಿಗಳು ಮಾತನಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us