ಎಲಿಮಿನೇಷನ್​ನಿಂದ ಕಾಮನರ್ಸ್ ಪಾರು? ಆ ಇಬ್ಬರು ಸೆಲೆಬ್ರಿಟಿಗಳ ತಲೆಮೇಲೆ ತೂಗುಗತ್ತಿ

ಬಿಗ್ ಬಾಸ್ ಕನ್ನಡ ಸೀಸನ್ 13ರ ನಾಲ್ಕನೇ ವಾರದ ನಾಮಿನೇಷನ್ ಪೂರ್ಣಗೊಂಡಿದ್ದು, ನಾಲ್ವರು ಸಾಮಾನ್ಯರು ಹಾಗೂ ಇಬ್ಬರು ಸೆಲೆಬ್ರಿಟಿಗಳು ಎಲಿಮಿನೇಷನ್ ಸುಳಿಗೆ ಸಿಲುಕಿದ್ದಾರೆ. ಆಟದ ಆಧಾರದ ಮೇಲೆ ಕಾಮನರ್ಸ್ ಸುರಕ್ಷಿತವಾಗುವ ಸಾಧ್ಯತೆಯಿದ್ದು, ಯಶಸ್ ಹಾಗೂ ಸಂಗೀತಾ ಭಟ್ ಪೈಕಿ ಒಬ್ಬರು ಹೊರಬೀಳುವ ಭೀತಿ ಎದುರಾಗಿದೆ.

ಎಲಿಮಿನೇಷನ್​ನಿಂದ ಕಾಮನರ್ಸ್ ಪಾರು? ಆ ಇಬ್ಬರು ಸೆಲೆಬ್ರಿಟಿಗಳ ತಲೆಮೇಲೆ ತೂಗುಗತ್ತಿ
ಸಂಗೀತಾ-ಯಶಸ್

Updated on: Sep 30, 2026 | 7:38 AM

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಉಲ್ಟಾಪಲ್ಟಾ ಲೆಕ್ಕಾಚಾರ
  • ಸಾಮಾನ್ಯರ ಆರ್ಭಟಕ್ಕೆ ಕಂಗಾಲಾದ ಸೆಲೆಬ್ರಿಟಿಗಳು
  • ಸೇಫ್ ಝೋನ್‌ನಲ್ಲಿದ್ದಾರಾ ಕಾಮನರ್ಸ್?

ಬಿಗ್ ಬಾಸ್ ಕನ್ನಡ ಸೀಸನ್ 13’ರ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ನಾಲ್ವರು ಕಾಮನರ್ಸ್ ಹಾಗೂ ಇಬ್ಬರು ಸೆಲೆಬ್ರಿಟಿಗಳು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಹೋಗುವವರು ಯಾರು ಎನ್ನುವ ಪ್ರಶ್ನೆ ಜೋರಾಗಿದೆ. ಆಟದ ವೇಗ, ಮನೆಯಲ್ಲಿ ಗುರುತಿಸಿಕೊಳ್ಳುವಿಕೆಯನ್ನು ನೋಡಿದರೆ ಕಾಮನರ್ಸ್​​ಗಿಂತ ಸೆಲೆಬ್ರಿಟಿಗಳಿಗೆ ಎಲಿಮಿನೇಷನ್ ಭಯ ಹೆಚ್ಚು ಕಾಡುತ್ತಿದೆ.

ಈ ವಾರ ಕಾಮನರ್ಸ್ ಲಿಖಿತ್, ಧನುಷ್, ಮಂಜು ಹಾಗೂ ಕಿರಣ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಇವರ ಜೊತೆ ಕಲಾವಿದರಾದ ಯಶಸ್ ಹಾಗೂ ಸಂಗೀತಾ ಭಟ್ ಅವರು ನಾಮಿನೇಟ್ ಪಟ್ಟಿಯಲ್ಲಿ ಇದ್ದಾರೆ. ಈ ಆರು ಮಂದಿಗೆ ನಾಮಿನೇಷನ್ ಭಯ ಕಾಡುತ್ತಿದೆ. ಹಾಗಾದರೆ, ಈ ವಾರ ಎಲಿಮಿನೇಟ್ ಆಗುವವರು ಯಾರು? ಆ ಲೆಕ್ಕಾಚಾರವನ್ನು ಇಲ್ಲಿ ನೋಡೋಣ.

ಇದನ್ನೂ ಓದಿ: ಬಿಗ್ ಬಾಸ್ 4ನೇ ವಾರದ ನಾಮಿನೇಷನ್: ಈ ಸ್ಪರ್ಧಿಗಳಿಗೆ ಶುರುವಾಗಿದೆ ಢವಢವ

ಮಂಜು: ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವ್ ಆಗಿಯಾಗಲಿ ಅಥವಾ ನೆಗೆಟಿವ್ ಆಗಿಯಾಗಲಿ ಮಂಜು ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಎಪಿಸೋಡ್​ನ ಬಹುತೇಕ ಫ್ರೇಮ್​ನಲ್ಲಿ ಅವರು ಇರುತ್ತಾರೆ. ಜಗಳಗಳಲ್ಲಿ ಇವರು ಸದಾ ಮುಂದಿರುತ್ತಾರೆ. ಇವರಿಗೆ ಇನ್ನಷ್ಟು ವಾರ ಉಳಿದುಕೊಳ್ಳುವ ಅವಕಾಶ ಸಿಗಬಹುದು.

ಕಿರಣ್ ಶಾಸ್ತ್ರಿ: ಕಿರಣ್ ಶಾಸ್ತ್ರಿ ಕೂಡ ಬಿಗ್ ಬಾಸ್ ಮನೆಯಲ್ಲಿ ಜಗಳ ಹಾಗೂ ಕೂಗಾಟದ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಇವರು ಕೂಡ ಎಲಿಮಿನೇಟ್ ಆಗುವ ಸಾಧ್ಯತೆ ಕಡಿಮೆ.

ಧನುಷ್ ಹಾಗೂ ಲಿಖಿತ್: ಧನುಷ್ ಅವರು ತಮ್ಮ ಆಟದ ಮೂಲಕ ಗುರುತಿಸಿಕೊಂಡರೆ, ಲಿಖಿತ್ ಅವರು ಕಿತ್ತಾಟದ ಮೂಲಕ, ಇತರರನ್ನು ಇರಿಟೇಟ್ ಮಾಡುವ ಮೂಲಕ ಸುದ್ದಿ ಆಗುತ್ತಿದ್ದಾರೆ. ಈ ನಾಲ್ವರಿಗೂ ಜನರ ವೋಟಿಂಗ್ ರಕ್ಷಣೆ ಸಿಗಬಹುದು.

ಸಂಗೀತಾ ಹಾಗೂ ಯಶಸ್: ನಾಮಿನೇಟ್ ಆದವರ ಪೈಕಿ ಈಗ ಉಳಿದುಕೊಂಡಿದ್ದು ಯಶಸ್ ಹಾಗೂ ಸಂಗೀತಾ. ಇವರ ಪೈಕಿ ಒಬ್ಬರು ಹೊರ ಹೋಗಬಹುದು. ಯಶಸ್ ಅವರು ಇಷ್ಟು ವಾರ ಸೈಲೆಂಟ್ ಆಗಿದ್ದರು. ಈ ವಾರ ನಿಯಮ ಮೀರಿ ನಡೆದುಕೊಂಡಿದ್ದಾರೆ. ಇದು ಅವರಿಗೆ ಮುಳ್ಳಾಗಬಹುದು. ಸಂಗೀತಾ ಈ ವಾರ ಉತ್ತಮ ಪ್ರದರ್ಶನ ನೀಡದೇ ಇದ್ದರೆ ತೊಂದರೆ ಎದುರಾಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us