
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಈ ವಾರದ ನಾಮಿನೇಷನ್ ಪೂರ್ಣಗೊಂಡಿದೆ. ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್, ಮಂಜ, ಯಶಸ್, ಸಂಗೀತಾ ಭಟ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿದ್ದ ಸಂಗೀತಾ ಅವರು ಈ ವಾರ ನಾಮಿನೇಷನ್ ಪಟ್ಟಿಯಲ್ಲಿ ಇದ್ದಾರೆ. ಹಾಗಾಗಿ ಅವರ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಿಗೆ ಇದೆ. ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಆಗಿದೆ. ಆದ್ದರಿಂದ ದೊಡ್ಮನೆಯ ಆಟದಲ್ಲಿ ಹೊಸ ಟರ್ನ್ ನಿರೀಕ್ಷಿಸಲಾಗುತ್ತಿದೆ.
ಧನುಷ್ ಅವರು ಬೇರೆಯವರ ಮಾತನ್ನು ಹೆಚ್ಚಾಗಿ ಕೇಳುತ್ತಾರೆ. ಸ್ವಂತ ಬುದ್ಧಿಯಿಂದ ಆಟ ಆಡುತ್ತಿಲ್ಲ ಎಂಬ ಕಾರಣದಿಂದ ಹಲವರು ಧನುಷ್ ಅವರನ್ನು ನಾಮಿನೇಟ್ ಮಾಡಿದರು. ಮಂಜು ಅವರು ಅತಿಯಾದ ಮಾತಿನಿಂದಾಗಿ ಇನ್ನುಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ತಾವು ಬದಲಾಗುವುದಾಗಿ ಮಂಜು ಭರವಸೆ ನೀಡಿದ್ದಾರೆ. ಆದರೆ ಆ ಬಗ್ಗೆ ಸ್ಪರ್ಧಿಗಳಿಗೆ ನಂಬಿಕೆ ಇಲ್ಲದಂತಾಗಿದೆ.
ಸಂಗೀತಾ ಭಟ್ ಅವರು ಕಳೆದ ವಾರ ಕ್ಯಾಪ್ಟೆನ್ಸಿ ನಿಭಾಯಿಸುವಾಗ ಪಕ್ಷಪಾತ ಮಾಡಿದರು ಎಂಬ ಆರೋಪ ಕೆಲವರದ್ದು. ಆ ಕಾರಣವನ್ನು ಇಟ್ಟುಕೊಂಡು ಅವರನ್ನು ನಾಮಿನೇಟ್ ಮಾಡಲಾಗಿದೆ. ಯಶಸ್ ಮತ್ತು ಕಿರಣ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಯ್ಕೆಯ ಪ್ರಕಾರ ನಾಮಿನೇಟ್ ಆಗಿದ್ದಾರೆ. ಕಿರಣ್ ಬಗ್ಗೆ ಹಲವು ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿರಣ್ ಶಾಸ್ತ್ರಿ ಅವರ ಒಟ್ಟಾರೆ ನಡವಳಿಕೆಯಿಂದ ಬಿಗ್ ಬಾಸ್ ಮನೆಯ ಅನೇಕ ಸದಸ್ಯರಿಗೆ ಕಿರಿಕಿರಿ ಆಗುತ್ತಿದೆ. ಭಾಷೆಯ ಬಳಕೆಯಲ್ಲಿ ಕಿರಣ್ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಇನ್ನುಳಿದ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳುವ ಗುಣ ಅವರಿಗೆ ಇಲ್ಲ. ಮಾತಿನ ಮೇಲೆ ನಿಗಾ ಇಲ್ಲ. ಮಹಿಳಾ ಸ್ಪರ್ಧಿಗಳನ್ನು ಏಕವಚನದಲ್ಲಿ ಮಾತನಾಡಿಸಿದ ಕಾರಣಕ್ಕೂ ಅವರನ್ನು ಹಲವರು ವಿರೋಧಿಸುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಯಶಸ್, ಶಾಸ್ತ್ರಿಗೆ ಬುದ್ಧಿ ಕಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಗೌಡ
ಕಳೆದ ವಾರ ಅವಿನಾಶ್ ಮತ್ತು ವೈಷ್ಣವಿ ಗೌಡ ಅವರನ್ನು ಎಲಿಮಿನೇಟ್ ಮಾಡಲಾಯಿತು. ಈ ವಾರ ನಾಮಿನೇಟ್ ಆಗಿರುವ ಕಿರಣ್, ಧನುಷ್, ಲಿಖಿತ್, ಮಂಜ, ಯಶಸ್ ಹಾಗೂ ಸಂಗೀತಾ ಭಟ್ ಅವರ ಪೈಕಿ ಯಾರಿಗೆ ಗೇಟ್ ಪಾಸ್ ನೀಡಲಾಗುತ್ತದೆ ಎಂಬುದನ್ನು ತಿಳಿಯಲು ವಾರಾಂತ್ಯದ ಸಂಚಿಕೆಗೆ ಕಾಯಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.