ಎಲಿಮಿನೇಷನ್ ವಿಚಾರದಲ್ಲಿ ಮತ್ತೆ ಮರುಕಳಿಸಿತು ‘ಬಿಗ್ ಬಾಸ್​ ಸೀಸನ್ 8’ರ ಘಟನೆ?

ಈ ವಾರ ನೀತು ವನಜಾಕ್ಷಿ ಅವರು ಎಲಿಮಿನೇಟ್ ಆಗಬೇಕಿತ್ತಂತೆ. ಆದರೆ, ವರ್ತೂರು ಸಂತೋಷ್ ಅವರು ತಾವು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಎಲಿಮಿನೇಷನ್ ವಿಚಾರದಲ್ಲಿ ಮತ್ತೆ ಮರುಕಳಿಸಿತು ‘ಬಿಗ್ ಬಾಸ್​ ಸೀಸನ್ 8’ರ ಘಟನೆ?
ಬಿಗ್ ಬಾಸ್

Updated on: Nov 12, 2023 | 8:31 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ಐದನೇ ವಾರ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ವರ್ಷ ಜಗಳಗಳು, ಕಿತ್ತಾಟಗಳು, ಮನಸ್ತಾಪಗಳಲ್ಲೇ ಶೋ ಪೂರ್ಣಗೊಳ್ಳುವ ಸೂಚನೆ ಸಿಕ್ಕಿದೆ. ಯಾರೂ ಹಾಸ್ಯ ಮಾಡುವ ಗೋಜಿಗೆ ಹೋಗುತ್ತಿಲ್ಲ. ಈ ಮಧ್ಯೆ ಎಲಿಮಿನೇಷನ್ ವಿಚಾರದಲ್ಲಿ ಈ ಬಾರಿ ಟ್ವಿಸ್ಟ್ ಸಿಕ್ಕಿದೆ ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಘಟನೆ ಇಲ್ಲಿ ಮರಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನು ಖಾತ್ರಿಪಡಿಸಿಕೊಳ್ಳಲು ಇಂದಿನ (ನವೆಂಬರ್ 12) ಎಪಿಸೋಡ್​ಗಾಗಿ ಕಾಯಲೇಬೇಕಿದೆ.

ಬಿಗ್ ಬಾಸ್ ಎಂಟನೇ ಸೀಸನ್​ನಲ್ಲಿ ಒಂದು ಅಪರೂಪದ ಘಟನೆ ನಡೆದಿತ್ತು. ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರಿಗೆ ಬಿಗ್ ಬಾಸ್​ನಲ್ಲಿ ಇರೋಕೆ ಸಾಧ್ಯವೇ ಆಗಲಿಲ್ಲ. ಹೀಗಾಗಿ, ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದರು. ಆ ವಾರ ಎಲಿಮಿನೇಟ್ ಆಗಬೇಕಿದ್ದಿದ್ದು ಶಮಂತ್ ಬ್ರೋ ಗೌಡ. ಅವರ ಬದಲಿಗೆ ತಾವು ಹೊರ ಹೋಗುವುದಾಗಿ ಹೇಳಿದರು ವೈಜಯಂತಿ. ಈ ಮೂಲಕ ಶಮಂತ್ ಉಳಿದುಕೊಂಡರು ಹಾಗೂ ವೈಜಯಂತಿ ಔಟ್ ಆದರು.

ಈ ಘಟನೆ ಮತ್ತೆ ಮರುಕಳಿಸುತ್ತಿದ್ದೆ ಎನ್ನುತ್ತಿವೆ ಕೆಲವು ಮೂಲಗಳು. ಈ ವಾರ ನೀತು ವನಜಾಕ್ಷಿ ಅವರು ಎಲಿಮಿನೇಟ್ ಆಗಬೇಕಿತ್ತಂತೆ. ಆದರೆ, ವರ್ತೂರು ಸಂತೋಷ್ ಅವರು ತಾವು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ನೀತುನ ಉಳಿಸಿ ಅವರು  ಹೊರಹೋಗಿದ್ದಾರಂತೆ. ಎಪಿಸೋಡ್​ ನೋಡಿದ ಬಳಿಕ ಏನಾಗಿದೆ ಎಂಬುದರ ಪಕ್ಕಾ ಸೂಚನೆ ಸಿಗಲಿದೆ.

ಇದನ್ನೂ ಓದಿ: BBK 10: ವರ್ತೂರು ಸಂತೋಷ್​ ಅರೆಸ್ಟ್​ ಬಗ್ಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮಾಹಿತಿ ಇದೆಯಾ? ಸತ್ಯ ಬಿಚ್ಚಿಟ್ಟ ರಕ್ಷಕ್​

ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರು. ಈ ಕಾರಣದಿಂದ ಅವರು ಮರಳಿ ಬಿಗ್ ಬಾಸ್​ಗೆ ಬರುವ ಅನಿವಾರ್ಯತೆ ಇತ್ತು. ಆ ಬಳಿಕ ಅವರು ಮರಳಿ ದೊಡ್ಮನೆಗೆ ಬಂದರು. ಕಳೆದ ಎರಡು ವಾರಗಳಿಂದ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಹೊರಗೆ ಹೋಗುವ ಅನಿವಾರ್ಯತೆ ಎದುರಾಗಿದ್ದರಿಂದ ಅವರು ಹೊರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಉಚಿತವಾಗಿ ಲೈವ್ ವೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Published On - 7:05 am, Sun, 12 November 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us