ಇದೇ ಸೀಸನ್​​ನಲ್ಲಿ ಸ್ಪರ್ಧಿಗಳಿಗೆ ಕಾದಿದೆ ಹಬ್ಬ: ಮೊದಲೇ ಎಚ್ಚರಿಸಿದ ಕಿಚ್ಚ

ನಿನ್ನೆ (ಶನಿವಾರ)ದ ಎಪಿಸೋಡಿನಲ್ಲಿ ಸುದೀಪ್ ಅವರು ಸ್ಪರ್ಧಿಗಳ ಮೇಲೆ ತುಸು ಗರಂ ಆಗಿದ್ದರು. ಎರಡೆರಡು ಬಾರಿ ಸ್ಪರ್ಧಿಗಳಿಗೆ ಮನೆಯಿಂದ ಹೊರಗೆ ಹೋಗುತ್ತಿರಿ ಎಂದು ತುಸು ಬೇಸರದಿಂದಲೇ ಹೇಳಿದರು. ಕೆಲವರ ವಿರುದ್ಧ ಪರೋಕ್ಷವಾಗಿ ಕಠಿಣ ಪದಗಳನ್ನು ಬಳಸಿದರು. ಆದರೆ ಭಾನುವಾರದ ಎಪಿಸೋಡ್​​ ಅನ್ನು ಪ್ರತಿ ಬಾರಿಯಂತೆ ನಗುತ್ತಾ, ನಗಿಸುತ್ತಾ ನಡೆಸಿಕೊಟ್ಟರು. ಆದರೆ ಎಪಿಸೋಡಿನ ಆರಂಭದಲ್ಲಿಯೇ ಸ್ಪರ್ಧಿಗಳಿಗೆ ಒಂದು ಪರೋಕ್ಷ ಎಚ್ಚರಿಕೆಯನ್ನೂ ಸಹ ಕೊಟ್ಟರು.

ಇದೇ ಸೀಸನ್​​ನಲ್ಲಿ ಸ್ಪರ್ಧಿಗಳಿಗೆ ಕಾದಿದೆ ಹಬ್ಬ: ಮೊದಲೇ ಎಚ್ಚರಿಸಿದ ಕಿಚ್ಚ
Sudeep

Updated on: Oct 04, 2026 | 10:53 PM

ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗಿ ಮೂರು ವಾರಗಳಾಗಿವೆ. ಸುದೀಪ್ ಅವರು ಪ್ರತಿ ವಾರಾಂತ್ಯ ಬಂದು ಸ್ಪರ್ಧಿಗಳಿಗೆ ಬುದ್ಧಿ ಹೇಳುತ್ತಾ, ಅವರ ತಪ್ಪುಗಳನ್ನು ತಿದ್ದುತ್ತಾ ಬರುತ್ತಿದ್ದಾರೆ. ಆದರೆ ಕೆಲವೊಮ್ಮೆ ಸುದೀಪ್ ಅವರು ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ನಿನ್ನೆ (ಶನಿವಾರ)ದ ಎಪಿಸೋಡಿನಲ್ಲಿ ಸುದೀಪ್ ಅವರು ಸ್ಪರ್ಧಿಗಳ ಮೇಲೆ ತುಸು ಗರಂ ಆಗಿದ್ದರು. ಎರಡೆರಡು ಬಾರಿ ಸ್ಪರ್ಧಿಗಳಿಗೆ ಮನೆಯಿಂದ ಹೊರಗೆ ಹೋಗುತ್ತಿರಿ ಎಂದು ತುಸು ಬೇಸರದಿಂದಲೇ ಹೇಳಿದರು. ಕೆಲವರ ವಿರುದ್ಧ ಪರೋಕ್ಷವಾಗಿ ಕಠಿಣ ಪದಗಳನ್ನು ಬಳಸಿದರು. ಆದರೆ ಭಾನುವಾರದ ಎಪಿಸೋಡ್​​ ಅನ್ನು ಪ್ರತಿ ಬಾರಿಯಂತೆ ನಗುತ್ತಾ, ನಗಿಸುತ್ತಾ ನಡೆಸಿಕೊಟ್ಟರು. ಆದರೆ ಎಪಿಸೋಡಿನ ಆರಂಭದಲ್ಲಿಯೇ ಸ್ಪರ್ಧಿಗಳಿಗೆ ಒಂದು ಪರೋಕ್ಷ ಎಚ್ಚರಿಕೆಯನ್ನೂ ಸಹ ಕೊಟ್ಟರು.

ಸುದೀಪ್ ಅವರು ಭಾನುವಾರದ ಎಪಿಸೋಡ್ ಆರಂಭಿಸುತ್ತಿದ್ದಂತೆ, ಪ್ರಶಾಂತ್, ‘ನಿನ್ನೆ (ಶನಿವಾರ) ಸಖತ್ ಗುಮ್ಮಿದಿರಿ’ ಎಂದರು. ಆದರೆ ಅದನ್ನು ಒಪ್ಪದ ಸುದೀಪ್, ‘ನಾನು ಸಿಟ್ಟಿನಿಂದ ಮಾತನಾಡಿಲ್ಲ, ನಾನು ಬಹಳ ಕಾಮ್ ಆಗಿಯೇ ಮಾತನಾಡಿದ್ದೇನೆ. ನಾನು ಸಿಟ್ಟಾದರೆ ಹೇಗಿರುತ್ತದೆ ಎಂದು ಇನ್ನೂ ನೋಡಿಲ್ಲ. ನಿನ್ನೆಯದ್ದು ಏನೂ ಇಲ್ಲ. ಆದರೆ ಈ ಸೀಸನ್​​ನಲ್ಲಿ ಒಮ್ಮೆಯಾದರೂ ಸಿಟ್ಟಿನಿಂದ ಮಾತನಾಡುವ ಸಾಧ್ಯತೆ ಇದೆ ಎಂದು ನನಗೆ ಈಗಲೇ ಅನಿಸುತ್ತಿದೆ’ ಎಂದು ಸುದೀಪ್ ಹೇಳಿದರು. ಆ ಮೂಲಕ ಈ ಸೀಸನ್ನಿನಲ್ಲಿ ಒಮ್ಮೆ ಸ್ಪರ್ಧಿಗಳ ಮೇಲೆ ಸುದೀಪ್ ಮುಗಿಬೀಳುವ ಸಾಧ್ಯತೆ ಇದೆ ಎಂಬುದನ್ನು ಈಗಲೇ ಸೂಚ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಈ ಬಾರಿ ಕೆಲ ಸ್ಪರ್ಧಿಗಳು ತುಸು ಅತಿಯಾಗಿ ವರ್ತಿಸುತ್ತಿದ್ದಾರೆ. ಕೆಲ ಸ್ಪರ್ಧಿಗಳು ಸಹ ಸ್ಪರ್ಧಿಗಳ ಮೇಲೆ ಮಾತ್ರವೇ ಅಲ್ಲದೆ ಖುದ್ದು ಸುದೀಪ್ ವಿರುದ್ಧವೂ ನಾಲಗೆ ಹರಿಬಿಡುವ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ (ಶನಿವಾರ)ಯ ಎಪಿಸೋಡಿನಲ್ಲಿ ಗಾನವಿ ಅವರು ಸುದೀಪ್ ಅವರನ್ನು ಸಹ ಸರಿಯಾಗಿ ಮಾತನಾಡಲು ಬಿಡದೆ ಮಧ್ಯೆ ಬಾಯಿ ಹಾಕಿ ವಿತಂಡ ವಾದ ಮಾಡಿದರು. ಜೊತೆಗೆ ಸುದೀಪ್ ಅವರು ಗಾನವಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗಲೇ ಬೇರೆ ಕಡೆ ನೋಡುತ್ತಾ ಅಗೌರವದಿಂದ ನಡೆದುಕೊಂಡರು. ಇನ್ನು ಮಹಾಕವಿ ಮಂಜನೂ ಸಹ ಕೆಲವೊಮ್ಮೆ ತುಸು ಅತಿರೇಕದ ವರ್ತನೆ ಮಾಡುವುದುಂಟು ಇದೇ ಕಾರಣಕ್ಕೆ ಸುದೀಪ್ ಅವರಿಂದ ಬೈಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ.

ಸುದೀಪ್ ಅವರು ಬಿಗ್​​ಬಾಸ್ ವೇದಿಕೆ ಮೇಲೆ ತಾಳ್ಮೆ ಕಳೆದುಕೊಳ್ಳುವುದು ಬಹಳ ಅಪರೂಪ. ಆದರೆ ಈ ಬಾರಿ ಅವರೇ ‘ಮುಂದೆ ಕಾದಿದೆ’ ಎಂದು ಹೇಳಿರುವ ಕಾರಣ ಪ್ರೇಕ್ಷಕರು ಸಹ ಕುತೂಹಲಭರಿತರಾಗಿದ್ದಾರೆ. ಆದರೆ ಸುದೀಪ್ ಅವರ ಕೋಪಾಗ್ನಿಗೆ ಸಿಲುಕಿಕೊಳ್ಳುವ ಆ ಸ್ಪರ್ಧಿ ಯಾರು ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us