AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಬಂದ ಅಮ್ಮನನ್ನು ಮಾತನಾಡಿಸಲಾಗದೆ ತ್ರಿವಿಕ್ರಮ್ ಕಣ್ಣೀರು

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11ರಲ್ಲಿ ಈ ವಾರ ಖುಷಿಯ ವಾರ. ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಬಂದಿದ್ದರು. ಈ ವೇಳೆ ತ್ರಿವಿಕ್ರಮ್ ಅವರ ತಾಯಿಯೂ ಬಂದಿದ್ದರು. ಮನೆಗೆ ಬಂದ ತಾಯಿಯನ್ನು ತ್ರಿವಿಕ್ರಮ್​ಗೆ ಮಾತನಾಡಿಸಲು ಆಗಲಿಲ್ಲ. ಬಿಗ್​ಬಾಸ್ ಹಾಕಿದ ಗೇಮ್​ನಲ್ಲಿ ಫೇಲ್ ಆದರು ತ್ರಿವಿಕ್ರಮ್.

ಬಿಗ್​ಬಾಸ್ ಮನೆಗೆ ಬಂದ ಅಮ್ಮನನ್ನು ಮಾತನಾಡಿಸಲಾಗದೆ ತ್ರಿವಿಕ್ರಮ್ ಕಣ್ಣೀರು
Trivikram Mother
ಮಂಜುನಾಥ ಸಿ.
|

Updated on: Dec 31, 2024 | 10:47 PM

Share

ಬಿಗ್​ಬಾಸ್ ಮನೆಯಲ್ಲಿ ಈ ವಾರ ಸಂಭ್ರಮವೋ ಸಂಭ್ರಮ. ಬಿಗ್​ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಆಗಮಿಸುತ್ತಿದ್ದಾರೆ. ಇಂದು (ಮಂಗಳವಾರ) ಮೊದಲಿಗೆ ಭವ್ಯಾರ ಸಹೋದರಿ, ಸಹೋದರಿಯ ಮಗಳು ಮತ್ತು ಅವರ ತಾಯಿ ಆಗಮಿಸಿದರು. ಈ ವೇಳೆ ಭವ್ಯಾ ಬಹಳ ಖುಷಿಪಟ್ಟರು. ಭವ್ಯಾ ಅವರ ಮನೆಯವರು ಸಹ ಬಿಗ್​ಬಾಸ್​ ಸ್ಪರ್ಧಿಗಳೊಡನೆ ಬಹಳ ಚೆನ್ನಾಗಿ ಬೆರೆತರು. ಆ ನಂತರ ತ್ರಿವಿಕ್ರಮ್ ಅವರ ತಾಯಿ ಬಂದರಾದರೂ ಅವರನ್ನು ಮಾತನಾಡಿಸಲು ತ್ರಿವಿಕ್ರಮ್​ಗೆ ಸಾಧ್ಯ ಆಗಲಿಲ್ಲ.

ತ್ರಿವಿಕ್ರಮ್ ಅವರ ತಾಯಿ ಬರುವ ಮುಂಚೆ ತ್ರಿವಿಕ್ರಮ್ ಹಾಗೂ ಅವರ ತಾಯಿ ಒಟ್ಟಿಗಿರುವ ಫೋಟೊ ಒಂದನ್ನು ಕಳಿಸಲಾಯ್ತು. ತ್ರಿವಿಕ್ರಮ್, ತನ್ನ ತಾಯಿ ಬರುತ್ತಾರೆಂದು ಬಹಳ ಖುಷಿಯಲ್ಲಿದ್ದರು. ಆದರೆ ಬಿಗ್​ಬಾಸ್, ತ್ರಿವಿಕ್ರಮ್ ಅನ್ನು ಆಕ್ಟಿವಿಟಿ ರೂಂಗೆ ಕರೆದರು. ಅಲ್ಲಿ ಅವರಿಗೆ ಅವರದ್ದೇ ತಾಯಿಯ ಚಿತ್ರದ ತುಣುಕುಗಳನ್ನು ನೀಡಿ, ಈ ಫಸಲ್ ಅನ್ನು ಹತ್ತು ನಿಮಿಷದಲ್ಲಿ ಪೂರೈಸಿದರೆ ಮಾತ್ರವೇ ನಿಮ್ಮ ತಾಯಿಯನ್ನು ಭೇಟಿ ಆಗಲು ಅನುಮತಿ ನೀಡಲಾಗುತ್ತದೆ ಎಂದು ಸವಾಲು ಹಾಕಲಾಯ್ತು.

ಫಸಲ್ ಪ್ರಾರಂಭ ಆಗುವ ತುಸು ಸಮಯದ ಮುಂಚೆ ತ್ರಿವಿಕ್ರಮ್ ತಾಯಿ ಬಿಗ್​ಬಾಸ್ ಮನೆ ಒಳಗೆ ಬಂದರು. ಎಲ್ಲರೂ ಅವರ ತಾಯಿಯನ್ನು ಚೆನ್ನಾಗಿ ಮಾತನಾಡಿಸುತ್ತಿದ್ದರು. ಆದರೆ ಅದನ್ನೆಲ್ಲ ಟಿವಿ ಮೂಲಕ ನೋಡುತ್ತಿದ್ದ ತ್ರಿವಿಕ್ರಮ್ ಫಸಲ್ ಪೂರೈಸುವಲ್ಲಿ ನಿರತರಾಗಿದ್ದರು. ಆದರೆ ಬಿಗ್​ಬಾಸ್ ನೀಡಿದ ನಿಗದಿತ ಸಮಯದಲ್ಲಿ ತ್ರಿವಿಕ್ರಮ್​ಗೆ ಫಸಲ್ ಪೂರೈಸಲು ಸಾಧ್ಯವಾಗಲಿಲ್ಲ. ಆಗ ಬಿಗ್​ಬಾಸ್, ತ್ರಿವಿಕ್ರಮ್ ಅವರ ತಾಯಿಯನ್ನು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುವಂತೆ ಹೇಳಿದರು. ಅಂತೆಯೇ ಬೇಸರದಲ್ಲಿಯೇ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಹೋದರು. ಆಕ್ಟಿವಿಟಿ ರೂಂನಲ್ಲಿ ತ್ರಿವಿಕ್ರಮ್​ ಅತ್ತು, ಕರೆದರು, ಇನ್ನೊಂದು ಅವಕಾಶಕ್ಕಾಗಿ ಗೋಗರೆದರೂ ಸಹ ಬಿಗ್​ಬಾಸ್ ಅವಕಾಶ ನೀಡಲಿಲ್ಲ.

ಇದನ್ನೂ ಓದಿ:ಎದುರಾಳಿಗಳ ಕಾಟಕ್ಕೆ ಬಿಗ್​ಬಾಸ್ ​ಮುಂದೆ ಕಣ್ಣೀರು ಹಾಕಿದ ಭವ್ಯಾ

ತ್ರಿವಿಕ್ರಮ್ ಅವರ ತಾಯಿ ಬಿಗ್​ಬಾಸ್ ಮನೆಯಿಂದ ಹೋಗುವ ಮುಂಚೆ, ನನಗೆ ಬಹಳ ಸಂಕಟ ಆಗುತ್ತಿದೆ. ಆದರೆ ಮಗನನ್ನು ಕೇಳಿದೆ ಎಂದು ಹೇಳಿ ಎಂದು ಎಲ್ಲರಿಗೂ ಹೇಳಿಯೇ ಹೋದರು. ಅವರು ಹೋದ ಮೇಲೆ ಹೊರಗೆ ಬಂದ ತ್ರಿವಿಕ್ರಮ್​ಗೆ, ಅವರ ತಾಯಿ ಕೊಟ್ಟ ಸರ ಇನ್ನಿತರೆ ವಸ್ತುಗಳನ್ನು ನೀಡಲಾಯ್ತು. ಈ ಬಗ್ಗೆ ತ್ರಿವಿಕ್ರಮ್ ಬೇಸರ ಪಟ್ಟುಕೊಳ್ಳುತ್ತಿರುವಾಗಲೇ ತ್ರಿವಿಕ್ರಮ್ ಅವರ ತಾಯಿಯನ್ನು ಗುಟ್ಟಾಗಿ ಒಳಗೆ ಕಳಿಸಿದರು ಬಿಗ್​ಬಾಸ್. ಆಗ ಮಗನ್ನು ತಬ್ಬಿ ಬಹಳ ಅತ್ತುಬಿಟ್ಟರು ಅವರ ತಾಯಿ. ಆ ದೃಶ್ಯ, ಬಿಗ್​ಬಾಸ್ ಸ್ಪರ್ಧಿಗಳಿಗೆ ಕಣ್ಣೀರು ತರಿಸಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ