AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದುರಾಳಿಗಳ ಕಾಟಕ್ಕೆ ಬಿಗ್​ಬಾಸ್ ​ಮುಂದೆ ಕಣ್ಣೀರು ಹಾಕಿದ ಭವ್ಯಾ

Bigg Boss Kannada: ಬಿಗ್​ಬಾಸ್ ಮನೆ ಈಗ ಬಿಬಿ ರೆಸಾರ್ಟ್ ಆಗಿದೆ. ಆದರೆ ರೆಸಾರ್ಟ್​ನ ಅತಿಥಿಗಳು, ಸಿಬ್ಬಂದಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಅತಿಥಿಗಳು ಕೊಟ್ಟ ಕಾಟಕ್ಕೆ ಬೇಸತ್ತ ಭವ್ಯಾ ಅವರು ಬಿಗ್​ಬಾಸ್ ಮುಂದೆ ಕಣ್ಣೀರು ಸಹ ಹಾಕಿದರು. ಆದರೆ ಬಿಗ್​ಬಾಸ್ ಹೇಳಿದಂತೆ ಸಮಯ ಬದಲಾಗಿದೆ. ಭವ್ಯಾ ಹಾಗೂ ತಂಡ ಈಗ ಅತಿಥಿಗಳಾಗಿದ್ದು, ಅತಿಥಿಗಳಾಗಿ ಮೆರೆದಿದ್ದವರು ಈಗ ಸಿಬ್ಬಂದಿ ಆಗಿದ್ದಾರೆ.

ಎದುರಾಳಿಗಳ ಕಾಟಕ್ಕೆ ಬಿಗ್​ಬಾಸ್ ​ಮುಂದೆ ಕಣ್ಣೀರು ಹಾಕಿದ ಭವ್ಯಾ
Bhavya Gowda
ಮಂಜುನಾಥ ಸಿ.
|

Updated on: Dec 26, 2024 | 7:47 AM

Share

ಬಿಗ್​ಬಾಸ್ ಮನೆ ‘ಬಿಬಿ ರೆಸಾರ್ಟ್’ ಆಗಿ ಬದಲಾಗಿ ಕೆಲ ದಿನಗಳಾಗಿವೆ. ಅತಿಥಿ ದೇವೋಭವ ಎನ್ನುವುದು ಬಿಬಿ ರೆಸಾರ್ಟ್​ನ ಧ್ಯೇಯ ವಾಕ್ಯ ಆದರೆ ಬಂದ ಅತಿಥಿಗಳು ದೆವ್ವಗಳಂತೆ ವರ್ತಿಸುತ್ತಿದ್ದಾರೆ, ಇದು ರೆಸಾರ್ಟ್​ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಮೊದಲಿಗೆ ಭವ್ಯಾ, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಧನರಾಜ್ ಅವರುಗಳು ಸಿಬ್ಬಂದಿಗಳಾಗಿ ಅತಿಥಿಗಳಾದ ಚೈತ್ರಾ ಕುಂದಾಪುರ, ಉಗ್ರಂ ಮಂಜು, ಹನುಮಂತು, ಐಶ್ವರ್ಯಾ ಮತ್ತು ಗೌತಮಿ ಅವರ ಸೇವೆ ಮಾಡಿದರು. ಈ ವೇಳೆ ಸಿಬ್ಬಂದಿಗಳನ್ನು ಅತಿಥಿಗಳು ವಿಪರೀತ ಗೋಳು ಹೊಯ್ದುಕೊಂಡರು.

ಬುಧವಾರದ ಎಪಿಸೋಡ್ ಪ್ರಾರಂಭ ಆದಾಗ, ಸಿಬ್ಬಂದಿ ತಂಡದ ಭವ್ಯಾ, ಅತಿಥಿ ತಂಡದ ಚೈತ್ರಾ ಅವರನ್ನು ಬಿಗ್​ಬಾಸ್ ಸೀಕ್ರೆಟ್​ ರೂಂಗೆ ಕರೆಸಿ ಕೆಲವು ನಿಯಮಗಳನ್ನು ವಿವರಿಸಿದರು. ಈ ವೇಳೆ ಭವ್ಯಾ ಗೌಡ ಬಿಗ್​ಬಾಸ್ ಎದುರು ಕಣ್ಣೀರು ಹಾಕಲು ಪ್ರಾರಂಭಿಸಿದರು. ‘ನಮಗೆ ಊಟ ಸಹ ಮಾಡಲು ಆಗುತ್ತಿಲ್ಲ, ಊಟ ಮಾಡಲು ಸಹ ಅವಕಾಶವನ್ನು ಅತಿಥಿಗಳು ನೀಡುತ್ತಿಲ್ಲ. ಅದಕ್ಕೆ ಪ್ರತ್ಯೇಕ ಸಮಯ ಇಡಿ’ ಎಂದು ಮನವಿ ಮಾಡಿದರು.

ಅದಕ್ಕೆ ಬಿಗ್​ಬಾಸ್, ‘ಯಾವುದೇ ರೆಸಾರ್ಟ್ ಆಗಲಿ ತಮ್ಮ ಸಿಬ್ಬಂದಿಯ ಹೊಟ್ಟೆ ಖಾಲಿ ಇಟ್ಟು ಅತಿಥಿಗಳ ಹೊಟ್ಟೆ ತುಂಬಿಸುವುದಿಲ್ಲ. ರೆಸಾರ್ಟ್ ಮ್ಯಾನೇಜರ್ ಆದವರು ಎಲ್ಲದಕ್ಕೂ ಒಂದು ಸೂಕ್ತ ಸಮಯ ಮಾಡಬೇಕು’ ಎಂದರು. ಆದರೆ ಭವ್ಯಾ ಅವರಿಗೆ ಸಿಬ್ಬಂದಿ ಕೊಟ್ಟ ಕಾಟದಿಂದ ಮಾಡಿಸಿಕೊಂಡ ಸೇವೆಯಿಂದ ಬೇಸರವಾಗಿತ್ತು ಹಾಗಾಗಿ ಕಣ್ಣೀರು ಹಾಕಲು ಪ್ರಾರಂಭಿಸಿದರು. ಅದಕ್ಕೆ ಬಿಗ್​ಬಾಸ್, ಭವ್ಯಾ ಅವರನ್ನು ಸಮಾಧಾನ ಮಾಡುತ್ತಾ, ಎಲ್ಲರಿಗೂ ಒಂದು ಸಮಯ ಬರುತ್ತದೆ, ಎಲ್ಲದಕ್ಕೂ ಅಂತ್ಯ ಇರುತ್ತದೆ ಎಂದು ಸಮಾಧಾನ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?

ಆ ಬಳಿಕ ನಿನ್ನೆಯ ಎಪಿಸೋಡ್​ನಲ್ಲಿಯೇ ರೋಲ್ ರಿವರ್ಸ್ ಮಾಡಲಾಯ್ತು. ಸಿಬ್ಬಂದಿಯಾಗಿದ್ದ ಭವ್ಯಾ, ತ್ರಿವಿಕ್ರಮ್, ರಜತ್, ಧನರಾಜ್, ಮೋಕ್ಷಿತಾ ಅವರುಗಳು ಅತಿಥಿಗಳಾದರು. ಅತಿಥಿಗಳಾಗಿದ್ದ ಉಗ್ರಂ ಮಂಜು, ಚೈತ್ರಾ ಕುಂದಾಪುರ, ಗೌತಮಿ, ಹನುಮಂತು, ಐಶ್ವರ್ಯಾ ಅವರುಗಳು ಸಿಬ್ಬಂದಿಗಳಾದರು. ಈಗ ಭವ್ಯಾ ಹಾಗೂ ಅವರ ತಂಡದವರು ದ್ವೇಷ ತೀರಿಸಿಕೊಳ್ಳಲು ಕಾತರರಾಗಿದ್ದು, ಅವರು ನೀಡಿದ್ದ ಕಾಟಕ್ಕೆ ದುಪ್ಪಟ್ಟನ್ನು ವಾಪಸ್ ಕೊಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಆಗ್ರಹಿಸಿ ವಿಪಕ್ಷಗಳ ಮಾರ್ಚ್
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ