ಬಿಗ್ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳೆಲ್ಲ ಚೈತ್ರಾ ಅನ್ನು ಮನೆಯಿಂದ ಹೊರಗೆ ಹಾಕಿಯೇ ಸಿದ್ಧ ಎಂದು ತಯಾರಾದಂತಿದೆ. ಭಾನುವಾರದ ಎಪಿಸೋಡ್ನಲ್ಲಿ ಮನೆಯ ಸದಸ್ಯರು ಚೈತ್ರಾ ಕುಂದಾಪುರ ಅವರನ್ನು ಕಸಕ್ಕೆ ಹೋಲಿಸಿದ್ದಾರೆ. ಜೊತೆಗೆ ವಾಸವಿರುವ ಸಹಚರರೇ ತಮ್ಮನ್ನು ಕಸಕ್ಕೆ ಹೋಲಿಸಿದ್ದು ನೋಡಿ ಚೈತ್ರಾ ಶಾಕ್ ಆಗಿದ್ದಾರೆ.
ಬಿಗ್ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅನ್ನು ಮನೆಯಿಂದ ಹೊರಗಟ್ಟಿಯೇ ಸಿದ್ಧ ಎಂದು ಮನೆಮಂದಿ ನಿರ್ಧರಿಸಿದಂತಿದೆ. ಭಾನುವಾರ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಗೆ ಕಸದ ಬುಟ್ಟಿ ಬಂದಿದೆ. ಬಿಗ್ಬಾಸ್ ಮನೆಯ ಕಸ ಯಾರೆಂದು ತಿಳಿಸಿ, ಅವರನ್ನು ಆ ಬುಟ್ಟಿಗೆ ಹಾಕಬೇಕು ಎಂದಿದ್ದಾರೆ ಸುದೀಪ್. ಹನುಮಂತು, ಮೋಕ್ಷಿತಾ, ರಜತ್ ಇನ್ನೂ ಕೆಲವರು ಚೈತ್ರಾ ಕುಂದಾಪುರ ಅವರನ್ನು ಅಮಾನುಷವಾಗಿ ಕಸಕ್ಕೆ ಹೋಲಿಸಿದ್ದು, ಅವರ ಎದರೇ ಚೈತ್ರಾ ಚಿತ್ರವನ್ನು ಕಸದ ಬ್ಯಾಗಿಗೆ ಅಂಟಿಸಿ ಅದನ್ನು ಕಸದ ಡಬ್ಬಿಗೆ ಹಾಕಿದ್ದಾರೆ. ಮನೆಯ ಸದಸ್ಯರು ಎಲ್ಲರೆದುರು ತಮ್ಮನ್ನು ಕಸಕ್ಕೆ ಹೋಲಿಸಿದ್ದು ಕಂಡು ಚೈತ್ರಾ ಆಘಾತಕ್ಕೆ ಒಳಗಾಗಿದ್ದಾರೆ. ಪ್ರೋಮೋ ಇಲ್ಲಿದೆ ನೋಡಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos