ಟಿಆರ್​ಪಿ ವಿಚಾರದಲ್ಲಿ ‘ಬಿಗ್ ಬಾಸ್ ಫಿನಾಲೆ’ ದಾಖಲೆ; ಹೊಸ ಧಾರಾವಾಹಿಗಳ ರೇಟಿಂಗ್ ಹೇಗಿದೆ?

ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ ಎಪಿಸೋಡ್ ಜನವರಿ 25 ಮತ್ತು 26 ರಂದು ಪ್ರಸಾರವಾಯಿತು. ಈ ಎಪಿಸೋಡ್ ಅತ್ಯಧಿಕ ಟಿಆರ್‌ಪಿ ಪಡೆದು ದಾಖಲೆ ಬರೆದಿದೆ. ಶನಿವಾರ 9.9 ಮತ್ತು ಭಾನುವಾರ 13.7 ಟಿವಿಆರ್ ಪಡೆದುಕೊಂಡಿದೆ. ಹನುಮಂತ ಲಮಾಣಿ ವಿಜೇತರಾದರೆ, ತ್ರಿವಿಕ್ರಂ ರನ್ನರ್ ಅಪ್ ಆದರು.

ಟಿಆರ್​ಪಿ ವಿಚಾರದಲ್ಲಿ ‘ಬಿಗ್ ಬಾಸ್ ಫಿನಾಲೆ’ ದಾಖಲೆ; ಹೊಸ ಧಾರಾವಾಹಿಗಳ ರೇಟಿಂಗ್ ಹೇಗಿದೆ?
ಟಿಆರ್​ಪಿ ವಿವರ

Updated on: Feb 06, 2025 | 1:22 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ಕಳೆದ ಜನವರಿ 25 ಹಾಗೂ 26ರಂದು ನಡೆಯಿತು. ಇದರ ಟಿಆರ್​ಪಿ ಈಗ ಹೊರ ಬಿದ್ದಿದೆ. ಟಿಆರ್​ಪಿ ವಿಚಾರದಲ್ಲಿ ಫಿನಾಲೆ ಎಪಿಸೋಡ್ ದಾಖಲೆ ಬರೆದಿದೆ. ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟ ಫಿನಾಲೆ ಎಪಿಸೋಡ್​ನಲ್ಲಿ ಹನುಮಂತ ಲಮಾಣಿ ಅವರು ಕಪ್ ಗೆದ್ದರೆ ತ್ರಿವಿಕ್ರಂ ಅವರು ರನ್ನರ್​ ಅಪ್ ಆದರು. ಈ ಎಪಿಸೋಡ್​ನ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗಿದೆ.

ಬಿಗ್ ಬಾಸ್ ಶನಿವಾರದ ಎಪಿಸೋಡ್ 9.9 ಟಿವಿಆರ್ ಪಡೆದರೆ ಭಾನುವಾರದ ಎಪಿಸೋಡ್ 13.7 ಟಿವಿಆರ್ ಪಡೆದುಕೊಂಡಿದೆ. ಈ ಮೂಲಕ ಈ ರಿಯಾಲಿಟಿ ಶೋ ದಾಖಲೆಯ ಟಿಆರ್​ಪಿ ಪಡೆದುಕೊಂಡಿದೆ. ಕಳೆದ ಸೀಸನ್​ಗಿಂತ ಈ ಸೀಸನ್ ಉತ್ತಮ ಟಿಆರ್​ಪಿ ಪಡೆದು ಸೀಸನ್​ನ ಕೊನೆಗೊಳಿಸಿದೆ.

ಸೀರಿಯಲ್​ಗಳ ವಿಚಾರಕ್ಕೆ ಬರೋದಾದರೆ ಈ ಮೊದಲು ಪ್ರಸಾರ ಕಾಣುತ್ತಿದ್ದ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಮೊದಲು ಎರಡು ಹಾಗೂ ಮೂರನೇ ಸ್ಥಾನದಲ್ಲಿ ಇರುತ್ತಿದ್ದ ಈ ಧಾರಾವಾಹಿ ಈಗ ಮೊದಲ ಸ್ಥಾನ ಪಡೆದುಕೊಂಡಿದೆ ಅನ್ನೋದು ವಿಶೇಷ.

ಇನ್ನು, ಇತ್ತೀಚೆಗೆ ಪ್ರಸಾರ ಆರಂಭಿಸಿರೋ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಬ್ಲಾಕ್​ಬಸ್ಟರ್ ಎನಿಸಿಕೊಂಡಿದೆ. ಈ ಧಾರಾವಾಹಿ, ನಗರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ. ಓಪನಿಂಗ್ ವೀಕ್​ನಲ್ಲಿ ಇಷ್ಟು ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದ್ದು ತಂಡಕ್ಕೆ ಖುಷಿ ನೀಡಿದೆ.  ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’, ನಾಲ್ಕನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಕಲರ್ಸ್​​ನಲ್ಲಿ ಆರಂಭ ಆದ ‘ವಧು’, ‘ಅಣ್ಣಯ್ಯ’, ‘ನೂರು ಜನ್ಮಕು’ ಧಾರಾವಾಹಿಗಳು ಸಾಧಾರಣ ಟಿಆರ್​ಪಿ ಪಡೆದುಕೊಂಡಿವೆ.

ಇದನ್ನೂ ಓದಿ: ಸೀತಾಗೆ ಸಿಹಿ ಸಿಗೋ ಮೊದಲೇ ಬದಲಾಯಿತು ‘ಸೀತಾ ರಾಮ’ ಪ್ರಸಾರ ಸಮಯ: ವೀಕ್ಷಕರ ಅಸಮಾಧಾನ

ಅತ್ತ ‘ಸೀತಾ ರಾಮ’ ಧಾರಾವಾಹಿಯ ಸಮಯ ಬದಲಾವಣೆ ಆಗಿದೆ. ಈ ಧಾರಾವಾಹಿಯನ್ನು ರಾತ್ರಿ 9.30ರಿಂದ ಸಂಜೆ 5.30ಕ್ಕೆ ಶಿಫ್ಟ್ ಮಾಡಲಾಗಿದೆ. ಇದು ಧಾರಾವಾಹಿ ಟಿಆರ್​ಪಿ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಧಾರಾವಾಹಿಯ ಟಿಆರ್​ಪಿ ಮತ್ತಷ್ಟು ಕುಸಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 1:22 pm, Thu, 6 February 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us