AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಪೇಟೆಯಲ್ಲಿ ಅಗ್ನಿಸಾಕ್ಷಿ 100ರ ಸಂಚಿಕೆ ಸಂಭ್ರಮ; ಪುನೀತ್ ಪ್ರತಿಮೆಗೆ ವಿಶೇಷ ನಮನ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಯಶಸ್ವಿಯಾಗಿ 100 ಸಂಚಿಕೆ ಪೂರೈಸಿದ್ದು, ಹೊಸಪೇಟೆಯಲ್ಲಿ 'ಸೀರಿಯಲ್ ಸಂಭ್ರಮ' ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ತಾರೆಯರು ನಟ ಪುನೀತ್ ರಾಜ್‌ಕುಮಾರ್ ಪ್ರತಿಮೆಗೆ ನಮಿಸಿದರು. ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿ, ತಾರೆಯರೊಂದಿಗೆ ವಿಶೇಷ ಸಂಚಿಕೆಯನ್ನು ವೀಕ್ಷಿಸಿ ಸಂಭ್ರಮಿಸಿದರು.

ಹೊಸಪೇಟೆಯಲ್ಲಿ ಅಗ್ನಿಸಾಕ್ಷಿ 100ರ ಸಂಚಿಕೆ ಸಂಭ್ರಮ; ಪುನೀತ್ ಪ್ರತಿಮೆಗೆ ವಿಶೇಷ ನಮನ
‘ಅಗ್ನಿಸಾಕ್ಷಿ’ ತಂಡ
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 07, 2026 | 11:01 AM

Share

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿದ್ದು, ಈ ಸಂತಸದ ಕ್ಷಣವನ್ನು ತಂಡ ಹೊಸಪೇಟೆಯ ಜನತೆಯೊಂದಿಗೆ ವಿಜೃಂಭಣೆಯಿಂದ ಆಚರಿಸಿದೆ. ನಗರದಲ್ಲಿ ಆಯೋಜಿಸಲಾಗಿದ್ದ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ಕಾರ್ಯಕ್ರಮಕ್ಕೆ ಸಾವಿರಕ್ಕೂ ಅಧಿಕ ಅಭಿಮಾನಿಗಳು ಸಾಕ್ಷಿಯಾಗಿ, ನೆಚ್ಚಿನ ಕಲಾವಿದರನ್ನು ಕಣ್ಣುಂಬಿಕೊಂಡರು.

ಕಾರ್ಯಕ್ರಮ ಸಭಾಂಗಣಕ್ಕೆ ತಲುಪುವ ಮುನ್ನ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಾದ ಅಗ್ನಿ, ಸಾಕ್ಷಿ ಹಾಗೂ ಅದಿತಿ ಜೋಡಿ ನಟ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ವೇದಿಕೆಗೆ ಆಗಮಿಸಿದ ತಾರಾಗಣಕ್ಕೆ ಹೊಸಪೇಟೆಯ ಜನತೆಯಿಂದ ಅದ್ಧೂರಿ ಸ್ವಾಗತ ದೊರೆಯಿತು. ಪ್ರೇಕ್ಷಕರ ಸಮ್ಮುಖದಲ್ಲೇ ಕೇಕ್ ಕತ್ತರಿಸಿದ ತಾರೆಯರು, ಧಾರಾವಾಹಿಗೆ ನಿರಂತರವಾಗಿ ನೀಡುತ್ತಿರುವ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ‘ಅಗ್ನಿಸಾಕ್ಷಿ’ಯ 2 ಗಂಟೆಗಳ ಸುದೀರ್ಘ ವಿಶೇಷ ಸಂಚಿಕೆಯನ್ನು ಅಭಿಮಾನಿಗಳು ಮತ್ತು ಕಲಾವಿದರು ಒಂದೇ ವೇದಿಕೆಯಲ್ಲಿ ಕುಳಿತು ವೀಕ್ಷಿಸಿದ್ದು. ತೆರೆಯ ಮೇಲಿನ ನೆಚ್ಚಿನ ಪಾತ್ರಧಾರಿಗಳು ತಮ್ಮ ಪಕ್ಕದಲ್ಲೇ ಕುಳಿತು ಸೀರಿಯಲ್ ನೋಡಿದ ಅನುಭವ ಪ್ರೇಕ್ಷಕರಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿತು.

ಇದನ್ನೂ ಓದಿ: 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ

ಸಂವಾದ, ಮನರಂಜನಾ ಆಟಗಳು ಹಾಗೂ ಪ್ರೇಕ್ಷಕರ ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ಮೂಲಕ ತಾರೆಯರು ಅಭಿಮಾನಿಗಳೊಂದಿಗೆ ಮುಕ್ತವಾಗಿ ಬೆರೆತರು. ಒಟ್ಟಿನಲ್ಲಿ ತಾರೆಯರ ಸಾನ್ನಿಧ್ಯ, ಪ್ರೇಕ್ಷಕರ ಉತ್ಸಾಹ ಹಾಗೂ ಸಾಮೂಹಿಕ ವೀಕ್ಷಣೆಯೊಂದಿಗೆ ಹೊಸಪೇಟೆಯಲ್ಲಿ ನಡೆದ ‘ಅಗ್ನಿಸಾಕ್ಷಿ ಸೀರಿಯಲ್ ಸಂಭ್ರಮ’ ಅತ್ಯಂತ ಸ್ಮರಣೀಯ ಕ್ಷಣವಾಗಿ ಮೂಡಿಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:00 am, Wed, 7 October 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More