ಜೀ ಕನ್ನಡದಲ್ಲಿ ಆಗಸ್ಟ್ 8ರಿಂದ ‘ಹಳ್ಳಿ ಪವರ್ ರೀಲೋಡೆಡ್’ ಧಮಾಕಾ

ಝೀ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗಿ ಯಶಸ್ಸು ಕಂಡಿದ್ದ ಜನಪ್ರಿಯ ರಿಯಾಲಿಟಿ ಶೋ ಈಗ ಮತ್ತೊಮ್ಮೆ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. 'ಹಳ್ಳಿ ಪವರ್ ರೀಲೋಡೆಡ್' ಶೋ ಆಗಸ್ಟ್ 8ರಿಂದ ತೆರೆಗೆ ಬರಲಿದ್ದು, ಸಿಟಿ ಹುಡುಗಿಯರು ಹಳ್ಳಿಗೆ ಬಂದು ಟಾಸ್ಕ್ ಆಡಲಿದ್ದಾರೆ. ಆದರೆ ಶೋ ಪ್ರಸಾರದ ಸಮಯದ ಕುರಿತು ಕುತೂಹಲ ಮೂಡಿದೆ.

ಜೀ ಕನ್ನಡದಲ್ಲಿ ಆಗಸ್ಟ್ 8ರಿಂದ ಹಳ್ಳಿ ಪವರ್ ರೀಲೋಡೆಡ್ ಧಮಾಕಾ
ಹಳ್ಳಿ ಪವರ್
Edited By:

Updated on: Jul 28, 2026 | 11:04 AM

ಮುಖ್ಯಾಂಶಗಳು

  • ಆಗಸ್ಟ್ 8ರಿಂದ ಮತ್ತೆ ಶುರು ಹಳ್ಳಿ ಹಬ್ಬ
  • ವೀಕ್ಷಕರಿಗೆ ಸಿಗಲಿದೆ ಡಬಲ್ ಧಮಾಕಾ ಮನರಂಜನೆ
  • ಗ್ಲಾಮರ್ ಬೆಡಗಿಯರ ಬೆವರಿಸಲಿದೆಯೇ ಗ್ರಾಮೀಣ ಟಾಸ್ಕ್?

ಕಿರುತೆರೆ ವೀಕ್ಷಕರಿಗೆ ಜೀ ಕನ್ನಡ ವಾಹಿನಿ ಮತ್ತೊಂದು ಜಬರ್ದಸ್ತ್ ಮನರಂಜನೆಯ ಉಡುಗೊರೆ ನೀಡಲು ಸಜ್ಜಾಗಿದೆ. ಈ ಹಿಂದೆ ಭಾರಿ ಜನಪ್ರಿಯತೆ ಗಳಿಸಿದ್ದ ರಿಯಾಲಿಟಿ ಶೋ ‘ಹಳ್ಳಿ ಪವರ್’, ಈಗ ಮತ್ತಷ್ಟು ಮಜಾವಾಗಿ ‘ಹಳ್ಳಿ ಪವರ್ ರೀಲೋಡೆಡ್’ ಎಂಬ ಹೊಸ ರೂಪದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೇ ಆಗಸ್ಟ್ 8ರಿಂದ ಈ ಶೋ ಅಧಿಕೃತವಾಗಿ ಚಾಲನೆ ಪಡೆಯಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಘೋಷಣೆ ಮಾಡಿದೆ. ಅಕುಲ್ ಬಾಲಾಜಿ ಶೋನ ನಡೆಸಿಕೊಡಲಿದ್ದಾರೆ.

ಸಿಟಿ ಹುಡುಗಿಯರಿಗೆ ಹಳ್ಳಿ ಸವಾಲು

ಈ ಶೋನ ಮುಖ್ಯ ಆಕರ್ಷಣೆಯೇ ಇದರ ವಿಭಿನ್ನ ಪರಿಕಲ್ಪನೆ. ಐಷಾರಾಮಿ ಜೀವನ ನಡೆಸುವ ಸಿಟಿ ಹುಡುಗಿಯರು ಹಳ್ಳಿಗೆ ಬಂದು, ಅಲ್ಲಿನ ಅಪ್ಪಟ ಗ್ರಾಮೀಣ ವಾತಾವರಣದಲ್ಲಿ ವಾಸಿಸಬೇಕಾಗುತ್ತದೆ. ಹಳ್ಳಿಯ ದೈನಂದಿನ ಕೆಲಸಗಳು ಹಾಗೂ ಅಲ್ಲಿ ನೀಡಲಾಗುವ ಕಠಿಣ ಟಾಸ್ಕ್‌ಗಳನ್ನು ಎದುರಿಸುತ್ತಾ ಅವರು ಹೇಗೆ ಸರ್ವೈವ್ ಆಗುತ್ತಾರೆ ಎಂಬುದೇ ಶೋನ ಹೈಲೈಟ್. ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸಿಟಿ ಕನ್ಯೆಯರು ಹಳ್ಳಿಯ ಟಾಸ್ಕ್‌ಗಳನ್ನು ನೋಡಿ ಬೆದರುತ್ತಿರುವುದು ಸಖತ್ ತಮಾಷೆಯಾಗಿ ಮೂಡಿಬಂದಿದೆ.

ಜೀ ಕನ್ನಡದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಬಂದು ಹೋಗಿವೆ. ಬಹುತೇಕವು ವೀಕೆಂಡ್​​ನಲ್ಲಿ ಪ್ರಸಾರ ಕಂಡಿದೆ. ನಿತ್ಯವೂ ಪ್ರಸಾರ ಕಾಣುವ ರಿಯಾಲಿಟಿ ಶೋ ಬಂದಿದ್ದು ಇಲ್ಲಿ ಕಡಿಮೆ. ಹೀಗಾಗಿ, ಹಳ್ಳಿ ಪವರ್ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ‘ಹಳ್ಳಿ ಪವರ್’; ಆಡಿಷನ್ ವಿವರ ಇಲ್ಲಿದೆ

ಸಮಯದ ಕುರಿತು ಮುಂದುವರಿದ ಕುತೂಹಲ

ಶೋ ಆರಂಭದ ದಿನಾಂಕ ಘೋಷಣೆಯಾಗಿದ್ದರೂ, ಇದು ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ರಹಸ್ಯವನ್ನು ವಾಹಿನಿ ಇನ್ನು ಬಿಟ್ಟುಕೊಟ್ಟಿಲ್ಲ. ವಾರದ ದಿನಗಳ ಪ್ರೈಮ್ ಟೈಮ್‌ನಲ್ಲಿ ಈ ಶೋ ಬರೋ ಸಾಧ್ಯತೆ ಇದೆ. ಈ ಬಗ್ಗೆ ಸದ್ಯ ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಒಟ್ಟಿನಲ್ಲಿ, ಹಳ್ಳಿಯ ಸೊಗಡು ಮತ್ತು ಸಿಟಿಯ ಸ್ಟೈಲ್ ನಡುವಿನ ಈ ಜುಗಲ್‌ಬಂದಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದಂತೂ ಗ್ಯಾರಂಟಿ.

ಪ್ರಶ್ನೆ: ಹಳ್ಳಿ ಪವರ್ ಶೋ ಯಾವಾಗಿನಿಂದ ಆರಂಭ?
ಉತ್ತರ:
ಆಗಸ್ಟ್​ 08

ಪ್ರಶ್ನೆ: ಹಳ್ಳಿ ಪವರ್ ಶೋ ನಡೆಸಿಕೊಡುವವರು ಯಾರು?
ಉತ್ತರ: 
ಅಕುಲ್ ಬಾಲಾಜಿ

ಪ್ರಶ್ನೆ: ಹಳ್ಳಿ ಪವರ್ ಥೀಮ್ ಏನು?
ಉತ್ತರ:
ಸಿಟಿ ಹುಡುಗಿಯರ ಹಳ್ಳಿ ಲೈಫ್

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us