ಟಿಆರ್​ಪಿ ರೇಸ್​ನಲ್ಲಿ ಅಚ್ಚರಿಯ ಕಂಬ್ಯಾಕ್ ಮಾಡಿದ ‘ಲಕ್ಷ್ಮೀ ಬಾರಮ್ಮ’, ‘ರಾಮಾಚಾರಿ’

‘ಲಕ್ಷ್ಮೀ ನಿವಾಸ’ ಧಾರಾವಾಹಿ ಸದ್ಯ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಇತ್ತೀಚೆಗಷ್ಟೇ 300 ಸಂಚಿಕೆಯನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದಲ್ಲೇ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲಿತ್ತು. ಈಗ ಧಾರಾವಾಹಿ ಟಿಆರ್​ಪಿ ಕುಸಿದಿದೆ.

ಟಿಆರ್​ಪಿ ರೇಸ್​ನಲ್ಲಿ ಅಚ್ಚರಿಯ ಕಂಬ್ಯಾಕ್ ಮಾಡಿದ ‘ಲಕ್ಷ್ಮೀ ಬಾರಮ್ಮ’, ‘ರಾಮಾಚಾರಿ’
ಟಿಆರ್​ಪಿ ರೇಸ್​ನಲ್ಲಿ ಅಚ್ಚರಿಯ ಕಂಬ್ಯಾಕ್ ಮಾಡಿದ ‘ಲಕ್ಷ್ಮೀ ಬಾರಮ್ಮ’, ‘ರಾಮಾಚಾರಿ’

Updated on: Sep 13, 2024 | 6:58 AM

‘ಅಣ್ಣಯ್ಯ’ ಧಾರಾವಾಹಿ ಇತ್ತೀಚೆಗಷ್ಟೇ ಆರಂಭ ಆಗಿದೆ. ಈ ಧಾರಾವಾಹಿ ಆರಂಭ ಆದ ಕೆಲ ವಾರ ಒಳ್ಳೆಯ ಟಿಆರ್​ಪಿಯನ್ನೇ ಪಡೆದಿತ್ತು. ಆದರೆ, 36ನೇ ವಾರದ ಟಿಆರ್​ಪಿಯಲ್ಲಿ ಧಾರಾವಾಹಿ ಸ್ವಲ್ಪ ಡಲ್ ಹೊಡೆದಂತೆ ಕಾಣಿಸುತ್ತಿದೆ. ಕಲರ್ಸ್ ಕನ್ನಡದ ಕೆಲ ಧಾರಾವಾಹಿಗಳು ಒಳ್ಳೆಯ ಟಿಆರ್​ಪಿ ಪಡೆದುಕೊಂಡಿರುವುದು ಕೂಡ ‘ಅಣ್ಣಯ್ಯ’ ಧಾರಾವಾಹಿ ಹಿಂದೆ ಬೀಳಲು ಕಾರಣ ಎಂದು ಹೇಳಲಾಗುತ್ತಿದೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿ ಸದ್ಯ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಇತ್ತೀಚೆಗಷ್ಟೇ 300 ಸಂಚಿಕೆಯನ್ನು ಪೂರ್ಣಗೊಳಿಸಿದೆ. ಈ ಸಂಭ್ರಮದಲ್ಲೇ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲಿತ್ತು. ಆದರೆ, ಧಾರಾವಾಹಿಯ ಸಮಯ ಬದಲಾದ ಕಾರಣ ಈಗ ‘ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ.

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಈ ಮೊದಲು ಐದು ಅಥವಾ ಆರನೇ ಸ್ಥಾನದಲ್ಲಿ ಇರುತ್ತಿದ್ದ ಧಾರಾವಾಹಿ ಇದು. ಈ ಬಾರಿ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕಲರ್ಸ್ ಕನ್ನಡದ ಧಾರಾವಾಹಿ ಎರಡನೇ ಸ್ಥಾನ ಪಡೆದಿದ್ದು ಇದೇ ಮೊದಲು.

ಇದನ್ನೂ ಓದಿ: ಒಂದೇ ಧಾರಾವಾಹಿಯಲ್ಲಿ ನಟಿಸಿದ ಈ ನಟಿಯರು ಈಗ ಒಟ್ಟಿಗೆ ಪ್ರೆಗ್ನೆಂಟ್; ಸುಂದರ ಫೋಟೋಶೂಟ್ ವೈರಲ್

ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಸ್ಥಾನಪಡೆದುಕೊಂಡಿದೆ. ಈ ಧಾರಾವಾಹಿ ಈ ಮೊದಲಿಗಿಂತ ಒಳ್ಳೆಯ ಟಿಆರ್​ಪಿ ಪಡೆದು ಸಾಗುತ್ತಿದೆ. ಐದನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಅಣ್ಣಯ್ಯ’ ಹಾಗೂ ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿ ಇದೆ. ‘ಸೀತಾ ರಾಮ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ‘ನಿನಗಾಗಿ’ ಧಾರಾವಾಹಿ ಇತ್ತೀಚೆಗೆ ಒಳ್ಳೆಯ ಟಿಆರ್​ಪಿ ಪಡೆದುಕೊಂಡು ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us